
ಮೈಸೂರು ; ರಾಜ್ಯ ಸರ್ಕಾರ ನಿಗದಿ ಮಾಡಿದ ಕಬ್ಬಿನ ಹಣದ ಬಾಬ್ತು ಪ್ರತಿ ಟನ್ ಗೆ 50 ರೂಪಾಯಿ ಬಾಕಿ ಹಣವನ್ನು ಬಣ್ಣಾರಿ ಕಾರ್ಖಾನೆ ಮೊದಲು ರೈತರಿಗೆ ಪಾವತಿಸಿ, ನಂತರ ಕಾರ್ಖಾನೆ ಆರಂಭಿಸಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಆಗ್ರಹಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022-23 ಸಾಲಿನಲ್ಲಿ ರಾಜ್ಯ ಸರ್ಕಾರ ಕಬ್ಬಿಗೆ ಹೆಚ್ಚುವರಿ ಟನ್ಗೆ 150 ರೂಪಾಯಿ ನಿಗದಿ ಮಾಡಿ ಆದೇಶ ಹೊರಡಿಸಿದಾಗ, ನ್ಯಾಯಾಲಯದಲ್ಲಿ
ತಡೆಯಾಜ್ಞೆ ತಂದು ರೈತರನ್ನು ವಂಚಿಸಿದರು. ಕಳೆದ ವರ್ಷವೂ ಸರ್ಕಾರ ನಿಗದಿ ಮಾಡಿದ ಹೆಚ್ಚುವರಿ 100 ರೂಪಾಯಿನಲ್ಲಿ 50 ರೂ ಸರ್ಕಾರ ಪಾವತಿ ಮಾಡಿದೆ, ಆದರೆ ಕಾರ್ಖಾನೆಯವರು ನೀಡಬೇಕಾಗಿದ್ದ ಟನ್ ಗೆ 50 ರೂ ಈ ವರ್ಷವೂ ತಡೆಯಾಜ್ಞೆ ತಂದು ರೈತರಿಗೆ ವಂಚನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಆರಂಭಕ್ಕೂ ಮುನ್ನ ರೈತರ ಬಾಕಿ ಹಣ ಪಾವತಿಸಿ, ನಿರ್ಲಕ್ಷ÷್ಯ ಮಾಡಿದರೆ ಇದೇ ತಿಂಗಳು 27 ರಂದು ಬಣ್ಣಾರಿ ಕಾರ್ಖಾನೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ವರ್ಷ ಕಬ್ಬಿನ ಉಪ ಉತ್ಪನ್ನಗಳ ಲಾಭ ಲೆಕ್ಕ ಹಾಕಿ ಲಾಭ ಹಂಚಿಕೆ ಮಾಡಬೇಕು. ಕಬ್ಬು ಅರೆಯುವ ಮುನ್ನ ಪ್ರಸಕ್ತ ಸಾಲಿನ 2026-27 ಸಾಲಿಗೆ ಕಬ್ಬಿನ ದರ ಘೋಷಣೆ ಮಾಡಬೇಕು. ಕಬ್ಬು ಕಟಾವು ಸಾಗಣಿಕೆ ವೆಚ್ಚ ನಿರ್ಧರಿಸಿ ಘೋಷಣೆ ಮಾಡಬೇಕು. ಕಾರ್ಖಾನೆ ಮುಕ್ತಾಯದ ಅಂತಿಮ ದಿನಾಂಕದವರೆಗೆ ಒಂದೇ ರೀತಿಯ ಕಟಾವ್ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಬಂದಿದ್ದರೂ, ರಾಜ್ಯ ಸರ್ಕಾರ ಬರ ಘೋಷಣೆ ಮಾಡಲು ಮೀನಾ ಮೇಷ ಎಣಿಸುತ್ತಿದೆ. ಗೋಳಾಡುತ್ತಿರುವ ರೈತರ ಬರದ ಬೆಳೆ ನಷ್ಟ ಸರ್ವೆ ಕೂಡ ನಡಿತಾ ಇಲ್ಲ. ರೈತರ ಪಾಲಿಗೆ ಸರ್ಕಾರ ಸತ್ತೋಗಿದೆ. ಸರ್ಕಾರಕ್ಕೆ ಜೀವ ಇದ್ದರೆ, ಕೂಡಲೇ ಸಂಕಷ್ಟದಲ್ಲಿರುವ ರೈತರಿಗೆ 40000 ಪರಿಹಾರ ನೀಡಲಿ ಎಂದು ಆಗ್ರಹಿಸಿದರು.
ಬರಗಾಲ ಘೋಷಣೆ ವಿಳಂಬ ನೀತಿ ರೈತರಿಗೆ ಸಂಕಷ್ಟ ;
ರಾಜ್ಯದಲ್ಲಿ ಶೇಕಡ 50ರಷ್ಟು ಮಳೆ ಸುರಿದಿಲ್ಲ,ಕುಡಿಯುವ ನೀರು ವಿದ್ಯುತ್ ಸಮಸ್ಯೆ ಕಾಡುತ್ತಿದೆ.ರೈತರು ಕೆಲವು ಭಾಗದಲ್ಲಿ ಯಾವುದೇ ಬೆಳೆ ಬಿತ್ತನೆ ಮಾಡಿರುವುದಿಲ್ಲ. ಹಲವು ಜಿಲ್ಲೆಗಳಲ್ಲಿ ಬಿತ್ತನೆ ಮಾಡಿದ ಪೈರುಗಳು ನಾಶವಾಗಿದೆ. ಬೆಳೆದು ನಿಂತಿರುವ ಕಬ್ಬು, ಬಾಳೆ, ತೆಂಗು ನೀರಿಲ್ಲದೆ ಒಣಗುತ್ತಿವೆ. ಬರ ಘೋಷಣೆ ವಿಳಂಬ ನೀತಿ ರೈತರಿಗೆ ಸಂಕಷ್ಟ ವಾಗಿದೆ ಎಂದರು.
ತಮಿಳುನಾಡು ಹಾಗೂ ಮಹಾರಾಷ್ಟç ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿರುವಂತೆ ರಾಜ್ಯದಲ್ಲಿಯೂ
ರಾಷ್ಟಿçÃಕೃತ, ಸಹಕಾರಿ, ಖಾಸಗಿ ಬ್ಯಾಂಕುಗಳು ಬೆಳೆ ಸಾಲ ಮನ್ನಾ ಮಾಡಬೇಕು. ಕೂಡಲೇ ರೈತರ ಸಾಲ ವಸೂಲಾತಿಗೆ ತಡೆಯಾಗಬೇಕು
ಬರಗಾಲದ ಹಿನ್ನೆಲೆಯಲ್ಲಿ ಚಿನ್ನ ಗಿರವಿ ಸಾಲಕ್ಕೆ ಬಡ್ಡಿ ಕಟ್ಟಿದರೆ, ಸಾಲ ನವೀಕರಣ ಮಾಡಲು ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕೆಂದು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಲಾಗಿದೆ ಕೂಡಲೇ ಸೂಕ್ತ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.
ಬರಗಾಲದ ಪರಿಸ್ಥಿತಿಯಲ್ಲಿ ಕುಡಿಯುವ ನೀರು, ವಿದ್ಯುತ್ಗೆ ಬರ ಬಂದಿರುವಾಗ ಸರಳ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲು ಸರ್ಕಾರ ನಿರ್ಧಾರ ಮಾಡಬೇಕು. ದಸರಾ ಆಚರಣೆ ವೇಳೆ ಕಂಬಳ ನಡೆಸುವುದು ಬೇಡ, ಅದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಕೆ.ಜಿ.ಗುರುಸ್ವಾಮಿ,
ಕಸುವಿನಳ್ಳಿ ಮಂಜೇಶ್, ಮಿಲ್ಟಿç ಕುಮಾರ್ ಉಪಸ್ಥಿತರಿದ್ದರು.