
ಮೈಸೂರು; ಜಿಲ್ಲೆಯ ಗುಡುಮಾದನಹಳ್ಳಿಯ ಹಸಿರು ವಲಯದಲ್ಲಿ ಮತ್ತು ಕೊಳಚೆ ನೀರಿನ ಜಾಗದಲ್ಲಿ ನಿಮಾನ್ಸ್ ಆಸ್ಪತ್ರೆಯನ್ನು ಕಟ್ಟುವುದು ಬೇಡ ಮತ್ತು ಆ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲಿಬಿಸುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಪರಿಸರಕ್ಕಾಗಿ ನಾವು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಕನ್ನಡ ಬಳಗ ಕೆ ಆರ್ ಎಸ್ ಪಕ್ಷ ಇತರೆ ಪ್ರಗತಿಪರ ಸಂಘಟನೆಗಳು ಬೆಂಬಲವನ್ನು ಸೂಚಿಸಿದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಮರಂಕಯ್ಯ, ಮಂಡಕಳ್ಳಿ ಮಹೇಶ್, ಪರಿಸರಕ್ಕಾಗಿ ನಾವು ಹೋರಾಟಗಾರರಾದ ಪರಶುರಾಮ ಗೌಡ , ಪರಿಸರವಾದಿಗಳು ಭಾನುಮೋಹನ್, ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ನಾಗರಾಜು, ಕನ್ನಡಪರ ಹೋರಾಟಗಾರರಾದ ಪರಮೇಶ್, ಗ್ರಾಮದ ನೂರಾರು ರೈತರು ರೈತ ಮಹಿಳೆಯರು ಭಾಗವಹಿಸಿದ್ದರು.