Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ತಾಲ್ಲೂಕಿನ ಟಿಎಪಿಸಿಎಂಎಸ್ ನ 12 ಸ್ಥಾನಗಳಿಗೆ 24 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ

ಎಚ್.ಡಿ.ಕೋಟೆ : ತಾಲ್ಲೂಕಿನ ಟಿಎಪಿಸಿಎಂಎಸ್ ನ 12 ಸ್ಥಾನಗಳಿಗೆ ಇದೇ ಜು. 26ರ ಭಾನುವಾರ ನಡೆಯುವ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದ ಸೋಮವಾರ ಕಾಂಗ್ರೆಸ್, ಜಾದಳ, ಬಿಜೆಪಿ ಬೆಂಬಲಿತ 39 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ ಎ ತರಗತಿಯಲ್ಲಿ 8, ಬಿ. ತರಗತಿಯಲ್ಲಿ 24 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇರುವ ಮೂಲಕ ಚುನಾವಣಾ ಕಣ ರಂಗೇರಿದೆ.

ಇದಕ್ಕೂ ಮುನ್ನ ಕಾಂಗ್ರೆಸ್, ಜಾದಳ, ಬಿಜೆಪಿ ಬೆಂಬಲಿತ 71 ಅಭ್ಯರ್ಥಿಗಳು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು.
ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಕಾಂಗ್ರೆಸ್, ಜಾದಳ, ಬಿಜೆಪಿ ಮೂರು ಪಕ್ಷಗಳ ವರಿಷ್ಠರಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.
ಹೀಗಾಗಿ ತಮ್ಮ ತಮ್ಮ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಈಗಾಗಲೇ ತೆರೆಮರೆಯಲ್ಲಿ ಮೂರು ಪಕ್ಷಗಳ ವರಿಷ್ಠರು ಸೇರಿದಂತೆ ಪ್ರಮುಖ ಮುಖಂಡರುಗಳು ಚುನಾವಣಾ ಗೆಲುವಿಗಾಗಿ ನಾನಾ ರಣತಂತ್ರ ರೂಪಿಸುತ್ತಿದ್ದಾರೆ.
ಎನ್ ಡಿಎ ಮೈತ್ರಿಕೂಟದ ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣ ನಾಯ್ಕ ಮತ್ತು ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಇಬ್ಬರು ನಾಯಕರಿಗೂ ಈ ಚುನಾವಣೆ ಪ್ರತಿಷ್ಠೆಯಾಗಿ ಸ್ವೀಕರಿಸಿರುವುದರಿಂದ ಸಾರ್ವಜನಿಕ ವಲಯದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾ ನಡೆಯುತ್ತಿದೆ, ಇದರಿಂದಾಗಿ ಟಿಎಪಿಸಿಎಂಎಸ್‌ ನ ಚುನಾವಣೆ ತಾಲೂಕಿನ ಜನರಲ್ಲಿಯೂ ತೀವ್ರ ಕುತೂಹಲ ಮೂಡಿಸಿದೆ.

ಎ.ತರಗತಿಯ 4 ಸ್ಥಾನಗಳಿಗೆ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮೂರು ಪಕ್ಷಗಳ ಬೆಂಬಲಿತ ಜಿ.ಕೆ.ಲಕ್ಷ್ಮಿ ಪ್ರಸಾದ್, ಚಿನ್ನಹಳ್ಳಿ ರಾಜನಾಯ್ಕ, ಸ್ವಾಮೇಶ್, ಮಹದೇವಪ್ಪ, ಶಿವನಂಜಮ್ಮ, ಕೆ.ರವಿಕುಮಾರ್, ಭಾಗ್ಯ ವೀರಭದ್ರಪ್ಪ, ಎಂ.ಡಿ.ಮಂಜಯ್ಯ ಕಣದಲ್ಲಿದ್ದಾರೆ.

ಬಿ. ತರಗತಿಯ 8 ಸ್ಥಾನಗಳಿಗೆ ಕಾಂಗ್ರೆಸ್, ಜಾದಳ, ಬಿಜೆಪಿ ಮೂರು ಪಕ್ಷಗಳ ಬೆಂಬಲಿತ ಶುಭ ಮಂಗಳ, ಕುಣಿಗಲು ರಾಜಕುಮಾರ, ಅರವಿಂದ, ನೂರು ಅಹಮದ್, ಭುಜಂಗ ನಾಯ್ಕ, ಜೆ.ಬಿ.ಶಿವಸ್ವಾಮಿ, ಪಿ.ನಾಗರಾಜಪ್ಪ, ಇ.ಮಾದಯ್ಯ, ಸ್ವಾಮಿ, ಸಿದ್ದನಾಯ್ಕ, ಸೋಮೇಗೌಡ, ಗೌರಮ್ಮ, ಬಸವರಾಜಪ್ಪ, ಮಹದೇವಮ್ಮ, ಮಹೇಶ, ರಾಮಚಂದ್ರ, ಹೆಚ್.ಸಿ ಲಿಂಗರಾಜು, ಶಿವಣ್ಣ, ಕಾಂತನಾಯ್ಕ, ಭುಜಂಗ ನಾಯಕ, ಬಸವರಾಜಪ್ಪ, ವೈಲಾ, ಶಿವಮಲ್ಲಪ್ಪ, ಕೆ.ಎಂ. ಪರಶಿವಮೂರ್ತಿ ಕಣದಲ್ಲಿದ್ದಾರೆ.
ಚುನಾವಣಾಧಿಕಾರಿಯಾಗಿ ತಹಸಿಲ್ದಾರ್ ಶ್ರೀನಿವಾಸ್, ಸಿಡಿಒ ರೇಣುಕಾ, ಟಿಎಪಿಸಿಎಂಎಸ್‌ ನ ಸಿಇಒ ನಿಂಗರಾಜು ಕರ್ತವ್ಯ ನಿರ್ವಹಿಸಿದರು.

ಬಾಕ್ಸ್,
ಜು. 26 ರ ಭಾನುವಾರ ನಡೆಯುವ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಿದವರಲ್ಲಿ ಎ ತರಗತಿಯಲ್ಲಿ ಒಬ್ಬರು, ಬಿ.ತರಗತಿಯ 38 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು ಎ ತರಗತಿಯ 4 ಸ್ಥಾನಗಳಿಗೆ 8 ಅಭ್ಯರ್ಥಿಗಳು, ಬಿ ತರಗತಿಯ 8 ಸ್ಥಾನಗಳಿಗೆ 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಈಗಾಗಲೇ ನಮ್ಮ ಅಧಿಕಾರಿಗಳು ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ.
ಶ್ರೀನಿವಾಸ್. ಚುನಾವಣಾಧಿಕಾರಿ.

ಫೋಟೋ;
ಎಚ್.ಡಿ.ಕೋಟೆ ಟಿಎಪಿಸಿಎಂಎಸ್‌ ನ ಚಿತ್ರ.