
ಮೈಸೂರು: ಭವಿಷ್ಯದಲ್ಲಿ ಸೌಂದರ್ಯ ಮತ್ತು ವೆಲ್‌ನೆಸ್ ಉದ್ಯಮಕ್ಕೆ ಅಪಾರ ಅವಕಾಶಗಳು ಹೆಚ್ಚುತ್ತಿವೆ ಎಂದು ಮಡಿಕೇರಿಯ ಕಾರ್ಪೋರೇಷನ್ ಬ್ಯಾಂಕ್‌ನ ಎಲ್.ಡಿ.ಎಂ.(ನಿವೃತ್ತ) ಆರ್.ಕೆ. ಬಾಲಚಂದ್ರ ಹೇಳಿದರು.
ನಗರದ ರುಡ್‌ಸೆಟ್ ಸಂಸ್ಥೆಯು ಎನ್.ಆರ್.ಎಲ್.ಎಂ. ಮೈಸೂರು ಜಿಲ್ಲಾ ಪಂಚಾಯತ್ ಪ್ರಾಯೋಜಕತ್ವದಲ್ಲಿ ಬ್ಯೂಟಿಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪ್ರಮಾಣ ಪತ್ರಗಳನ್ನು ಶಿಬಿರಾರ್ಥಿಗಳಿಗೆ ನೀಡಿ ಮಾತನಾಡಿದ ಅವರು, ಇಂದಿನ ಆಧುನಿಕ ಜೀವನಶೈಲಿಯಲ್ಲಿ ಸೌಂದರ್ಯ ಮತ್ತು ವೆಲ್‌ನೆಸ್ ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ. ಆರೋಗ್ಯ, ವೈಯಕ್ತಿಕ ಆರೈಕೆ ಮತ್ತು ಆತ್ಮವಿಶ್ವಾಸಕ್ಕೆ ಜನರು ಹೆಚ್ಚಿನ ಆದ್ಯತೆ ನೀಡುತ್ತಿರುವ್ಯದರಿಂದ, ಈ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಗೆ ಉತ್ತಮ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ತಿಳಿಸಿದರು. ವೈಯಕ್ತಿಕ ಮತ್ತು ವ್ಯವಹಾರದ ಬದುಕಿನಲ್ಲಿ ಏಳಿಗೆಯಾಗಲು ಮತ್ತೊಬ್ಬರ ಜೊತೆ ಹೊಲಿಕೆ ಮಾಡಿ ಕೆಲಸ ಮಾಡಬೇಡಿ, ನಿನ್ನೆಗಿಂತ ಇಂದು ಎಷ್ಟು ವಿಭಿನ್ನವಾಗಿದ್ದೆನೆ ಎಂದು ಪ್ರಸ್ತುತತೆಗೆ ತಕ್ಕಂತೆ ಬೆಳೆಯುತ್ತಿರಿ. ಸಣ್ಣ ಸಣ್ಣ ಗೆಲುವನ್ನು ಸಂಭ್ರಮಿಸುತ್ತಿರಿ. ಪ್ರತಿ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿರಿ ಎಂದು ತಿಳಿ ಹೇಳಿದರು,
ಆಕಾಶ ಮತ್ತು ಅವಕಾಶ ಎರಡು ಒಂದೇ ತರಹ, ನಿಮ್ಮ ಗುರಿ ಕನಸು ಆಕಾಶದತ್ತರಕ್ಕೆ ಸಾಗುತ್ತಿರಲಿ, ಧೈರ್ಯವಾಗಿ ತಲೆ ಎತ್ತಿ ಕೆಲಸ ಮಾಡಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಬದುಕು ಅಸನಾಗುತ್ತದೆ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಎಸ್.ಡಿ.ಎಂ.ಇ. ಟ್ರಸ್ಟ್ ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ, ಯುವಜನತೆ, ಮಹಿಳೆಯರು ಹಾಗೂ ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವವರು ಈ ಕ್ಷೇತ್ರದ ತರಬೇತಿಗಳನ್ನು ಪಡೆದು, ತಮ್ಮದೇ ಆದ ಉದ್ಯಮವನ್ನು ಆರಂಭಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕಿ ಭವ್ಯ ಸಿ.ಕೆ. ಮಾತನಾಡಿ, ಸೌಂದರ್ಯ ಮತ್ತು ವೆಲ್‌ನೆಸ್ ಉದ್ಯಮವು ಕೇವಲ ಉದ್ಯೋಗವಷ್ಟೇ ಅಲ್ಲ, ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿರು ಕ್ಷೇತ್ರವಾಗಿದೆ. ಗುಣಮಟ್ಟದ ಸೇವೆ, ನಿರಂತರ ಕಲಿಕೆ ಮತ್ತು ಗ್ರಾಹಕ ಸ್ನೇಹಿ ಮನೋಭಾವದಿಂದ ಈ ಉದ್ಯಮದಲ್ಲಿ ದೀರ್ಘಕಾಲೀನ ಯಶಸ್ಸು ಸಾಧಿಸಲು ಸಾಧ್ಯ, ಬ್ಯಾಂಕಿನೊAದಿಗೆ ಉತ್ತಮ ವ್ಯವಹಾರ ಸಂಬAಧಗಳನ್ನು ವೃದ್ಧಿಸಿಕೊಳ್ಳಿರಿ ಎಂದು ಹೇಳಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಪಾಲ್ ರಾಜ್, ಲತಾಮಣಿ, ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.