Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರೈತರ ಸಾಲ ಮನ್ನಾ ಮಾಡಲು ಕ್ರಮಕೈಗೊಳ್ಳಬೇಕು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಆರ್. ಗೌಡ

ಪಿರಿಯಾಪಟ್ಟಣ : ರೈತರು ಮಳೆ ಇಲ್ಲದೆ ಬರ ಪರಿಸ್ಥಿತಿ ಅನುಭವಿಸುತ್ತಿದ್ದು ಸರ್ಕಾರ ಕೂಡಲೆ ರೈತರ ಸಾಲ ಮನ್ನಾ ಮಾಡಲು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಆರ್. ಗೌಡ ಒತ್ತಾಯಿಸಿದರು.

 ಪಟ್ಟಣದ ಹರವೆ ಮಲ್ಲರಾಜ ಪಟ್ಟಣ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ರೈತ ಹುತಾತ್ಮರ ದಿನಾಚರಣೆಯಲ್ಲಿ ರೈತ ಸಂಘದ ಸಂಸ್ಥಾಪಕರಾದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ರೈತ ಸಮುದಾಯದ ಧ್ವನಿಯಾಗಿ ರೈತ ಸಂಘಟನೆಯ ಹೋರಾಟಗಾರರು ಹುತಾತ್ಮ ಹೊಂದಿದ ನೆನಪಿಗಾಗಿ ಇಂದು ರೈತ ಹುತಾತ್ಮ ದಿನಾಚರಣೆಯನ್ನು ರಾಜ್ಯದಾದ್ಯಂತ ಆಚರಣೆ ಮಾಡುತ್ತಿದ್ದೇವೆ. ಅಂದಿನ ಮುಖ್ಯಮಂತ್ರಿ ಆಗಿದ್ದ ಗುಂಡೂರಾವ್ ಸರ್ಕಾರದಲ್ಲಿ ನವಲಗುಂದ ಮತ್ತು ನರಗುಂದದಲ್ಲಿ ಪ್ರತಿಭಟನೆ ವೇಳೆಯಲ್ಲಿ ರೈತರ ಮೇಲೆ ದಾಳಿ ನಡೆದು ಸಾಕಷ್ಟು ರೈತರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಇಂದು ಕರಾಳ ದಿನದವಾಗಿದ್ದು 45 ವರ್ಷಗಳು ಕಳೆದಿದೆ. ದೇಶಕ್ಕಾಗಿ ಮತ್ತು ರೈತರಿಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ರೈತರ ನೆನಪಿಗಾಗಿ ರೈತ ಹುತಾತ್ಮ ದಿನವನ್ನು ಪ್ರತಿಯೊಬ್ಬರು ಆಚರಿಸಬೇಕು. ರೈತರ ಉಳಿವಿಗಾಗಿ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಮತ್ತು ಕೆ. ಎಸ್. ಪುಟ್ಟಣ್ಣಯ್ಯ ಸೇರಿದಂತೆ ಅನೇಕ ನಾಯಕರುಗಳು ರೈತ ಸಂಘಟನೆ ಪ್ರಾರಂಭಿಸಿ ಹೋರಾಟಗಳನ್ನು ಮಾಡಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಸಿಂಹ ಸ್ವಪ್ನವಾಗಿ ಕೆಲಸ ಮಾಡಿದ್ದಾರೆ. ಇವರ ಆದರ್ಶಗಳು ನಮಗೆ ಸದಾ ಸ್ಪೂರ್ತಿಯಾಗಿರುತ್ತದೆ ಎಂದರು.

 ಇಂದು ಆಡಳಿತ ಸರ್ಕಾರಗಳು ರೈತರ ಹಿತವನ್ನು ಕಾಯುವಲ್ಲಿ ಎಡವಿದೆ. ರೈತರ ಸಮಸ್ಯೆಗಳನ್ನು ಆಲಿಸಲು ಇವರಿಗೆ ಸಮಯವಿಲ್ಲವಾಗಿದೆ. ಇಂದು ರಾಜ್ಯದಾದ್ಯಂತ ಮಳೆ ಅಭಾವ ಕಾಡುತ್ತಿದ್ದು, ರೈತರು ವ್ಯವಸಾಯ ಮಾಡಲು ಸಾಧ್ಯವಾಗದೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಯವರು ಪಿರಿಯಾಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶವಾಗಿ ಘೋಷಣೆ ಮಾಡಿ ರೈತರ ಹಿತವನ್ನು ಕಾಪಾಡಬೇಕು ಎಂದು ಹೇಳಿದರು 

 ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಪ್ರಕಾಶ್, ರಾಜ್ಯ ಯುವ ಘಟಕದ ಅಧ್ಯಕ್ಷ ಸ್ವಾಮಿ ಗೌಡ, ತಾಲೂಕು ಅಧ್ಯಕ್ಷ ಪ್ರಕಾಶ್, ಮಹಿಳಾ ಅಧ್ಯಕ್ಷ ಕಾವೇರಮ್ಮ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಮಹದೇವ್ ಪಿ.ಎಂ,ಉಪಾಧ್ಯಕ್ಷ ನಾಗೇಂದ್ರ ಸೀಗೂರು,ಖಜಾಂಚಿ ಮುರುಗೇಶ್,ದೇವಶೆಟ್ಟಿ, ಸಂಚಾಲಕ ಶಿವರಾಜ್,

ಮುಖಂಡರಾದ ಹುಣಸೂರು ಕುಮಾರ, ಪ್ರಭು ಕೊಣಸೂರು,ವಿಶ್ವನಾಥ್,ಯೋಗೇಶ್,ಶಿವಶಂಕರ್,ಪ್ರಸನ್ನ,ರವಿ ಕುಮಾರ್,ಬಸವರಾಜ್ ಮಾಕೋಡು ,ಪಾಪಣ್ಣ ಕಣಗಾಲು ಸೇರಿದಂತೆ ಮತ್ತಿತರರು ಹಾಜರಿದ್ದರು.