ಹಳೇ ಮೈಸೂರು ಭಾಗದಲ್ಲಿ ಬರೋ ಬರೀ 35ಕ್ಕೂ ಹೆಚ್ಚು ರಾಮಾಯಣದ ರಾವಣನ ವಿಗ್ರಹಗಳು ಪತ್ತೆ !
ಮೈಸೂರು : ರಾಮಾಯಣದ ರಾವಣನಿಗೂ ಹಳೇ ಮೈಸೂರಿಗೂ ಏನೋ ಸಂಬAಧವಿರಬೇಕು. ಯಾಕೇಂದರೆ ಒಂದಲ್ಲ, ಎರಡಲ್ಲ ಬರೋ ಬರೀ 35ಕ್ಕೂ ಹೆಚ್ಚು ರಾವಣನ ವಿಗ್ರಹಗಳು ಪತ್ತೆಯಾಗಿದೆ.
ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಡೆದ ಪುರಾತತ್ತ÷್ವ ಉತ್ಪನನ ಹಾಗೂ ಸಂಶೋಧನೆಗಳ 35ಕ್ಕೂ ಹೆಚ್ಚು ರಾವಣನ ವಿಗ್ರಹಗಳು ಪತ್ತೆಯಾಗಿ, ಬಹಳ ಅಚ್ಚರಿಯೊಂದಿಗೆ ತೀವ್ರ ಕುತೂಹಲವನ್ನುಂಟು ಮಾಡಿದೆ.
ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ಹಾಗೂ ಮಂಡ್ಯ ತಾಲೂಕು ಸೇರಿದಂತೆ ಮೈಸೂರಿನ ಬನ್ನೂರು ಮತ್ತು ಟಿ. ನರಸೀಪುರ ವ್ಯಾಪ್ತಿಯಲ್ಲಿ ಈ ಅಪರೂಪದ ಮೂರ್ತಿಗಳು ದೊರೆತಿವೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾವಣನ ಮೂರ್ತಿಗಳು ದೊರೆತಿರುವುದು ಪುರಾತತ್ತಜ್ಞರಲ್ಲಿ ಮತ್ತು ಇತಿಹಾಸ ತಜ್ಞರಲ್ಲಿ ತೀವ್ರ ಆಶ್ಚರ್ಯ ಹಾಗೂ ಕುತೂಹಲವನ್ನುಂಟು ಮಾಡಿದೆ.
ಭಾರತೀಯ ಪುರಾತತ್ತ÷್ವ ಸರ್ವೇಕ್ಷಣಾ ಇಲಾಖೆ ನಡೆಸಿದ ಉತ್ಪನನದಲ್ಲಿ ಸುಮಾರು 15 ರಿಂದ 20 ವಿಗ್ರಹಗಳು ಪತ್ತೆಯಾಗಿವೆ. ಇದರೊಂದಿಗೆ, ಹಿರಿಯ ಪುರಾತತ್ವತಜ್ಞ ಪ್ರೊ. ಎನ್. ಎಸ್. ರಂಗರಾಜು ಅವರ ಪ್ರತ್ಯೇಕ ಸಂಶೋಧನೆಯಲ್ಲೂ ಅಷ್ಟೇ ಪ್ರಮಾಣದ ರಾವಣನ ವಿಗ್ರಹಗಳು ಸಿಕ್ಕಿರುವುದು ಈ ಶೋಧಕ್ಕೆ ಮತ್ತಷ್ಟು ಮಹತ್ವ ತಂದಿದೆ.
ಮAಡ್ಯ ಮತ್ತು ಮೈಸೂರು ಭಾಗದ ಮುತ್ತತ್ತಿ ಪ್ರದೇಶಕ್ಕೆ ರಾಮಾಯಣದ ನಂಟಿದ್ದರೆ, ಪಾಂಡವಪುರ ಮತ್ತು ಕುಂತಿಬೆಟ್ಟಕ್ಕೆ ಮಹಾಭಾರತದ ಪೌರಾಣಿಕ ಹಿನ್ನೆಲೆಯಿದೆ. ಇದನ್ನು ಇಂದಿಗೂ ಜನರು ನಂಬುತ್ತಿದ್ದಾರೆ. ರಾಮ-ರಾವಣರ ಸಂಚಾರ ಹಳೇ ಮೈಸೂರು ಭಾಗದಲ್ಲಿ ನಡೆದಿರುವ ಸಾಧ್ಯತೆಗಳನ್ನು ಇಲ್ಲಿನ ಪುರಾಣಗಳು ಹೇಳುತ್ತಿವೆ.
ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ರಾವಣನ ಮೂರ್ತಿಗಳು ಪೂಜಿಸಲ್ಪಡುವುದು ಅತ್ಯಂತ ವಿರಳ. ಆದರೆ ಈ ಭಾಗದಲ್ಲಿ ಇಷ್ಟೊಂದು ಸಂಖ್ಯೆಯ ರಾವಣನ ವಿಗ್ರಹಗಳು ಸಿಕ್ಕಿರುವುದು ಇತಿಹಾಸದ ಹೊಸ ಮಜಲನ್ನು ತೆರೆದಿಟ್ಟಿದೆ. ಈ ಶೋಧನೆಯು ಪ್ರಾಚೀನ ಸಂಪ್ರದಾಯ ಹಾಗೂ ಸ್ಥಳೀಯ ಸಂಸ್ಕöÈತಿಯ ಕುರಿತು ಹೆಚ್ಚಿನ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಕುರಿತು ಹೆಚ್ಚಿನ ಸಂಶೋಧನೆಗಳಿAದ ಮಾತ್ರ ಇನ್ನಷ್ಟು ವಿಷಯಗಳು ಹೊರಬರುವ ಸಾಧ್ಯತೆಗಳಿವೆ.
--°C
Mysore, IN
Loading...