Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೆ.ಜಿ.ಕೊಪ್ಪಲಿನಲ್ಲಿ ಶಾಸಕ ಕೆ. ಹರೀಶ್ ಗೌಡ ನೇತೃತ್ವದಲ್ಲಿ “ಜನರ ಮನೆ ಬಾಗಿಲಿಗೆ ಶಾಸಕರು” ಪಾದಯಾತ್ರೆ


ಮೈಸೂರು: ಮಹಾನಗರ ಪಾಲಿಕೆಯ ವಾರ್ಡ್ ನಂ. 42 ರ ಕೆ.ಜಿ. ಕೂಪ್ಪಲು ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಶಾಸಕ ಕೆ. ಹರೀಶ್ ಗೌಡ ರವರು “ಜನರ ಮನೆ ಬಾಗಿಲಿಗೆ ಶಾಸಕರು” ಪಾದಯಾತ್ರೆ ಕಾರ್ಯಕ್ರಮ ನಡೆಸಿದರು. ಮೊದಲಿಗೆ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನಕ್ಕೆ ವಾರ್ಡ್ನ ಮುಖಂಡರೊAದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಅಲ್ಲಿಂದ ಬೆಳಿಗ್ಗೆ 8.45 ಕ್ಕೆ ಪಾದಯಾತ್ರೆಯನ್ನು ಆರಂಭಿಸಿದರು.
ಮನೆ ಮನೆಗೆ ಭೇಟಿ ನೀಡಿದ ಶಾಸಕರು ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿದರು, ರೈಲ್ವೆ ಗೇಟ್ ಹಿಂಭಾಗದ ರಸ್ತೆಗಳಲ್ಲಿ ಚರಂಡಿ ಸಮಸ್ಯೆ ಹಾಗೂ ರಸ್ತೆ ಕಾಮಗಾರಿ ಮಾಡಿಸಿಕೊಡುವಂತೆ ಅಲ್ಲಿನ ನಿವಾಸಿಗಳು ಕೋರಿದರು ಹಾಗೂ ವಾರ್ಡ್ ನಲ್ಲಿ ಕೆಲವು ಕಡೆ ನೀರಿನ ಸಮಸ್ಯೆ ಇರುವುದಾಗಿ ಮಹಿಳೆಯರು ದೂರಿದರು. ಹಬ್ಬದ ದಿನಗಳಲ್ಲಿಯು ಸಹ ನೀರು ಸರಿಯಾಗಿ ಬರುವುದಿಲ್ಲ. ಇನ್ನೂ ಕೆಲವೆಡೆ ರಸ್ತೆ ಸಮತಟ್ಟಿಲ್ಲದ ಕಾರಣ ನಲ್ಲಿಗಳಲ್ಲಿ ನೀರು ಬಾರದಿರುವ ಬಗ್ಗೆ ಹಾಗೂ ನೀರಿನ ಸಮಸ್ಯೆನ್ನು ಅತಿ ತುರ್ತಾಗಿ ಸರಿಪಡಿಸುವಂತೆ ಕೋರಿಕೊಂಡರು. ಈ ಬಗ್ಗೆ ಸ್ಥಳದಲ್ಲಿಯೇ ಇದ್ದ ವಾಣಿ ವಿಲಾಸ ನೀರು ಸರಬರಾಜು ಇಇ ಮೋಹನ್ ಕುಮಾರ್ ಹಾಗೂ ಎಇಇ ಮುಸ್ತಫಾ ರವರಿಗೆ ವಾರ್ಡ್ ನಲ್ಲಿ ನೀರಿನ ಸಮಸ್ಯೆ ಆಗದಂತೆ ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ ಕ್ರಮವಹಿಸುವಂತೆ ಹಾಗೂ ಶೀಘ್ರವಾಗಿ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು.
ಕೆ.ಜಿ. ಕೊಪ್ಪಲು ಹಳೆ ಗ್ರಾಮವಾಗಿರುವುದರಿಂದ ವಿದ್ಯುತ್ ಕಂಬಗಳು ಕೆಲವು ಕಡೆ ವಾಲಿಕೊಂಡಿದ್ದು, ಅದನ್ನು ಸರಿಪಡಿಸಿಕೊಡುವಂತೆ ಹಾಗೂ ಕೆಲವು ಕಡೆ ಬೀದಿ ದೀಪಗಳನ್ನು ಅಳವಡಿಸಿಕೊಡುವಂತೆ ಸ್ವೀಕೃತವಾದ ದೂರುಗಳಿಗೆ ಸ್ಥಳದಲ್ಲಿಯೇ ಇದ್ದ ಚೆಸ್ಕಾಂ ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಸಮಸ್ಯಯನ್ನು ಬಗೆಹರಿಸುವಂತೆ ಶಾಸಕರು ಸೂಚಿಸಿದರು. ನೀರು, ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಹಲವಾರು ನಾಗರಿಕ ಸಮಸ್ಯೆಗಳ ಕುರಿತು ಜನರು ಅಹವಾಲು ಸಲ್ಲಿಸಿದರು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರೆ, ಉಳಿದವುಗಳನ್ನು ನಿಗದಿತ ಅವಧಿಯೊಳಗೆ ಪರಿಹರಿಸುವ ಭರವಸೆಯನ್ನು ಶಾಸಕರು ನೀಡಿದರು.
ಪಿಂಚಣಿ ಮಾಡಸಿಕೊಡುವಂತೆ ಹಾಗೂ ಮತದಾರರ ಪಟ್ಟಿಗೆ ಹೆಸರು ನೋಂದಣಿಯಾಗಿರುವುದಿಲ್ಲ ಹಾಗೂ ಇನ್ನಿತರೇ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಇದ್ದ ಕಂದಾಯಾಧಿಕಾರಿಗಳು ಹಾಗೂ ವಲಯ ಆಯುಕ್ತರಿಗೆ ಅವರುಗಳ ಮಾಹಿತಿಯನ್ನು ಪಡೆದು ಕೂಡಲೇ ಸಮಸ್ಯೆಯನ್ನು ಬಗೆಹರಿಸಿದರು.
ಈ ವೇಳೆ ನಗರ ಪಾಲಿಕೆಯ ಡಿ.ಸಿ. (ರೆವಿನ್ಯೂ) ಸೋಮಶೇಖರ್, ಎಸ್.ಇ. ಸಿಂಧು, ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ್, ಎಕ್ಸಿಕ್ಯೂಟಿವ್ ಇಂಜಿನಿಯರ್, ವಾಣಿ ವಿಲಾಸ್ ನೀರು ಸರಬರಾಜು ಮೋಹನ್ ಕುಮಾರ್, ಎಇಇ ಮುಸ್ತಫಾ, ವಲಯ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ವಲಯ ಆಯುಕ್ತರಾದ ಸಂದೀಪ್, ಇಂಜಿನಿಯರ್ ಮಧುಸೂದನ್, ತೇಜಸ್ವಿನಿ ಸೇರಿದಂತೆ ಚೆಸ್ಕಾಂ, ಕಂದಾಯ ಇಲಾಖೆ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪಾದಯಾತ್ರೆ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ , ದೇವರಾಜ ಬ್ಲಾಕ್ ಅಧ್ಯಕ್ಷ ಡಿ. ನಾಗಭೂಷಣ್, ವಾರ್ಡ್ ಅಧ್ಯಕ್ಷ ಹರೀಶ್, ಮುಖಂಡರಾದ ರಾಜಣ್ಣ, ಭಾಸ್ಕರ್, ಬಸವರಾಜು, ಬರಕ್ಕಿ ಮಾದೇವಣ್ಣ, ಚೆನ್ನಪ್ಪ, ನಾಗಣ್ಣ, ಬಂದೀಗೌಡ್ರು , ಕುಮಾರಣ್ಣ (ದತ್ತು), ಶ್ರೀನಿವಾಸ್, ಪ್ರದೀಪ್ , ದೀಪು , ಗಿರೀಶ್, ಮಹೇಶ್, ಚಂದ್ರು ಸೇರಿದಂತೆ ಸ್ಥಳೀಯ ಮುಖಂಡರುಗಳು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.