ಓಣಂ ಹಬ್ಬದ ಪ್ರಯುಕ್ತ ಮೈಸೂರು-ಕಣ್ಣೂರು- ಬೆಂಗಳೂರು ದಂಡು ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರಮೈಸೂರು; ಓಣಂ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಹಾಗೂ ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ, ನೈಋತ್ಯ ರೈಲ್ವೆ ಮೈಸೂರು-ಕಣ್ಣೂರು-ಬೆಂಗಳೂರು ದಂಡು ನಡುವೆ ತಲಾ ಎರಡು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ.ರೈಲು ಸಂಖ್ಯೆ 06227 ಮೈಸೂರು-ಕಣ್ಣೂರು ವಿಶೇಷ ಎಕ್ಸ್ಪ್ರೆಸ್ 25.08.2026 (ಮಂಗಳವಾರ) ರಂದು 22:30 ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ 14:00 ಗಂಟೆಗೆ ಕಣ್ಣೂರು ತಲುಪಲಿದೆ.ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ…
Day: July 22, 2026
ಎಲ್-ನಿನೊ ಭೀತಿ: ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಮೈಸೂರು ಜಿಲ್ಲಾ ಪಂಚಾಯತ್ ಮಾರ್ಗಸೂಚಿ
ಮೈಸೂರು: ಪ್ರಸಕ್ತ ವರ್ಷದಲ್ಲಿ ಎಲ್-ನಿನೋ ಪ್ರಭಾವದಿಂದಾಗಿ ಸಾಧಾರಣಕ್ಕಿಂತ ಕಡಿಮೆ ಮಳೆ ಹಾಗೂ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದ್ದು, ತೋಟಗಾರಿಕಾ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ರೈತರಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆಗಳನ್ನು ನೀಡಿದ್ದಾರೆ. ಬೆಳೆಗಳ ಮೇಲಾಗುವ ಪ್ರಮುಖ ಪರಿಣಾಮಗಳು: ತೇವಾಂಶದ ಅಭಾವದಿಂದ ಮಣ್ಣಿನಲ್ಲಿ ನೀರಿನ ಕೊರತೆಯುಂಟಾಗಿ ಹನಿ ನೀರಾವರಿಯ ಮೇಲಿನ ಅವಲಂಬನೆ ಹೆಚ್ಚಾಗುತ್ತದೆ ಮತ್ತು ಅಂತರ್ಜಲ ಹಾಗೂ ಜಲಾಶಯಗಳ…
ಚನ್ನಮ್ಮರವರು ದೇವೇಗೌಡರವರ ಕುಟುಂಬದ ಶಕ್ತಿಯಾಗಿದ್ದರು : ಪಿ ಪ್ರಶಾಂತ್ ಗೌಡ
ಪಿರಿಯಾಪಟ್ಟಣ ತಾಲೂಕು ಒಕ್ಕಲಿಗರ ಸಂಘದಲ್ಲಿ ಚನ್ನಮ್ಮರವರಿಗೆ ಶ್ರದ್ಧಾಂಜಲಿ ಸಭೆ ಪಿರಿಯಾಪಟ್ಟಣ : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮರವರು ದೇವೇಗೌಡರವರ ಕುಟುಂಬದ ಶಕ್ತಿಯಾಗಿದ್ದರು ಎಂದು ನಗರ ಪಾಲಿಕೆ ಮಾಜಿ ಸದಸ್ಯರು ಹಾಗೂ ಪಿರಿಯಾಪಟ್ಟಣ ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಪಿ ಪ್ರಶಾಂತ್ ಗೌಡ ತಿಳಿಸಿದರು. ಪಟ್ಟಣದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ದಿವಂಗತ ಶ್ರೀಮತಿ ಚನ್ನಮ್ಮರವರಿಗೆ ಏರ್ಪಡಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ರಾಜಕೀಯ ವ್ಯವಸ್ಥೆಗೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಕೊಡುಗೆಯಾಗಿ ನೀಡಿದ ಮಹಾತಾಯಿಯಾಗಿದ್ದಾರೆ ಚನ್ನಮ್ಮರವರು…
ಸಂಶೋಧಕರು, ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ
ಮೈಸೂರು: ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದನ್ನು ಖಂಡಿಸಿ, ಹಾಗೂ ವಿದ್ಯಾರ್ಥಿ ಗಳ ಹೋರಾಟ ಬೆಂಬಲಿಸಿ ನಗರದಲ್ಲಿ ಬುಧವಾರ ಸಂಶೋಧಕರು, ವಿದ್ಯಾರ್ಥಿಗಳು ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ದೆಹಲಿಯ ಜಂತರ್ ಮಂತರ್‌ನಲ್ಲಿ ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿ ಚಾರ್ಜ್ ಖಂಡನೀಯ ಹಾಗೂ ಅಮಾನವೀಯ. ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ದಮನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಕ್ರಮ ಪ್ರಶ್ನಿಸಿದ…
ಪೊಲೀಸ್ ಅಧಿಕಾರಿಗೆ ಜಮೀನು ಕೊಡಿಸುವ ಆಮಿಷ ವೊಡ್ಡಿ 65 ಲಕ್ಷ ರೂ ಪಂಗನಾಮ!
ಮೈಸೂರು: ಜಮೀನು ಕೊಡಿಸುವ ಆಮಿಷ ನೀಡಿ ಪೊಲೀಸ್ ಅಧಿಕಾರಿಗೆ ವಂಚಕರು 65 ಲಕ್ಷ ರೂ ಪಂಗನಾಮ ಹಾಕಿರುವ ಪ್ರಕರಣ ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ನಡೆದಿದೆ.ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಶ್ರೀನಿವಾಸ್ ವಂಚನೆಗೆ ಒಳಗಾದವರು.ಪದ್ಮಶ್ರೀ ಕನಸ್ಟçಕ್ಷನ್ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಮುಖ್ಯ ಆರೋಪಿ ನಾರಾಯಣಮೂರ್ತಿಯನ್ನು ಬಂಧಿಸಲಾಗಿದೆ. ನಾರಾಯಣಮೂರ್ತಿ ಪತ್ನಿ ಜಯಮಾಲಾ, ಪುತ್ರಿಯರಾದ ಪದ್ಮ, ಭವ್ಯ ಹಾಗೂ ಜಮೀನು ಮಾಲೀಕ ನಾಗೇಗೌಡ ವಿರುದ್ದ ಪ್ರಕರಣ ದಾಖಲಾಗಿದೆ.ನಾರಾಯಣಮೂರ್ತಿ ಪತ್ನಿ ಹಾಗೂ ಇಬ್ಬರು ಪುತ್ರಿಯರು ಮತ್ತು ನಾಗೇಗೌಡ ತಲೆ ನಾಪತ್ತೆಯಾಗಿದ್ದಾರೆ.ಈ…
ಕೆ.ಜಿ.ಕೊಪ್ಪಲಿನಲ್ಲಿ ಶಾಸಕ ಕೆ. ಹರೀಶ್ ಗೌಡ ನೇತೃತ್ವದಲ್ಲಿ “ಜನರ ಮನೆ ಬಾಗಿಲಿಗೆ ಶಾಸಕರು” ಪಾದಯಾತ್ರೆ
ಮೈಸೂರು: ಮಹಾನಗರ ಪಾಲಿಕೆಯ ವಾರ್ಡ್ ನಂ. 42 ರ ಕೆ.ಜಿ. ಕೂಪ್ಪಲು ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಶಾಸಕ ಕೆ. ಹರೀಶ್ ಗೌಡ ರವರು “ಜನರ ಮನೆ ಬಾಗಿಲಿಗೆ ಶಾಸಕರು” ಪಾದಯಾತ್ರೆ ಕಾರ್ಯಕ್ರಮ ನಡೆಸಿದರು. ಮೊದಲಿಗೆ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನಕ್ಕೆ ವಾರ್ಡ್ನ ಮುಖಂಡರೊAದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಅಲ್ಲಿಂದ ಬೆಳಿಗ್ಗೆ 8.45 ಕ್ಕೆ ಪಾದಯಾತ್ರೆಯನ್ನು ಆರಂಭಿಸಿದರು.ಮನೆ ಮನೆಗೆ ಭೇಟಿ ನೀಡಿದ ಶಾಸಕರು ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿದರು, ರೈಲ್ವೆ ಗೇಟ್ ಹಿಂಭಾಗದ ರಸ್ತೆಗಳಲ್ಲಿ ಚರಂಡಿ ಸಮಸ್ಯೆ ಹಾಗೂ…
ಇಸ್ಲಾಮಿಕ್ ಟ್ರಸ್ಟ್ ಗಳ ಹಣಕಾಸು ಮೂಲ ತನಿಖೆಗೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ
ಮೈಸೂರು: ದೇಶದಲ್ಲಿರುವ ಇಸ್ಲಾಮಿಕ್ ಟ್ರಸ್ಟ್ ಗಳು ಮತ್ತು ಅದರ ಸಂಸ್ಥೆಗಳ ಹಣಕಾಸು ಮೂಲ ಹಾಗೂ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಮೈಸೂರು ಮಹಾನಗರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಇಸ್ಲಾಮಿಕ್ ಟ್ರಸ್ಟ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಹಿಂದು ಜಾಗರಣ ವೇದಿಕೆ ಸಂಯೋಜಕ ವಸಂತ್ ಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಇದ್ದುಕೊಂಡು ನಮ್ಮ ಗಾಳಿ, ನಮ್ಮ ನೀರು ನಮ್ಮ ಆಹಾರ ಸೇವಿಸುತ್ತಾ, ದೇಶಕ್ಕೆ ದ್ರೋಹ ಬಗೆಯುವ ಸಂಸ್ಥೆಗಳ…
ಜುಲೈ 23 ರಂದು ಶ್ರೀ ಜಗನ್ನಾಥ ರಥಯಾತ್ರಾ ಮಹೋತ್ಸವ: ವೇಣು ಕೃಷ್ಣದಾಸ್
ಮೈಸೂರು: ಇಲ್ಲಿನ ದಟ್ಟಗಳ್ಳಿ ಬಡಾವಣೆ ಯಲ್ಲಿರುವ ಇಸ್ಕಾನ್ ಕೇಂದ್ರದ ವತಿಯಿಂದ 5ನೇ ವರ್ಷದ ಶ್ರೀ ಜಗನ್ನಾಥ ರಥಯಾತ್ರಾ ಮಹೋತ್ಸವವನ್ನು ಜು.23ರಂದು ಹಮ್ಮಿ ಕೊಳ್ಳಲಾಗಿದೆ ಎಂದು ಕೇಂದ್ರದ ಪ್ರತಿನಿಧಿ ವೇಣು ಕೃಷ್ಣದಾಸ್ ತಿಳಿಸಿದರು.ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಮಧ್ಯಾಹ್ನ 3 ಗಂಟೆಗೆ ರಥವು ದಟ್ಟಗಳ್ಳಿಯ ಪಿಕೆವಿ ಆಚಾರ್ಯ ಭವನದಿಂದ ಹೊರಟು ಇಸ್ಕಾನ್, ದಟ್ಟಗಳ್ಳಿ ದೇವಸ್ಥಾನ, ಆಂದೋಲನ ವೃತ್ತ, ಶಾಂತಿಸಾಗರ್ ಕಾಂಪ್ಲೆಕ್ಸ್, ವಿವೇಕಾನಂದ ವೃತ್ತ, ಸುಯೋಗ್ ಆಸ್ಪತ್ರೆ ಮೂಲಕ ಪಿಕೆವಿ ಆಚಾರ್ಯ ಭವನಕ್ಕೆ ಬಂದು…
ಬಿಜೆಪಿ – ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ, ಜಟಾಪಟಿ
ಮೈಸೂರು: ನೀಟ್ ಪರೀಕ್ಷೆಯ ಜಾಗೃತಿ ಹಾಗೂ ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಸಂತಾಪ ಸೂಚಿಸಲು ನಗರದ ನಾರಾಯಣ ಶಾಸ್ತಿç ರಸ್ತೆಯಲ್ಲಿನ ಮಹಾರಾಣಿ ಪಿಯು ಕಾಲೇಜಿನ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ, ಜಟಾಪಟಿಗೆ ವೇದಿಕೆಯಾಯಿತು.ಕಾಂಗ್ರೆಸ್ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ನೀಟ್ ಜಾಗೃತಿ ಕಾರ್ಯಕ್ರಮದಲ್ಲಿ ಮೃತ ವಿದ್ಯಾರ್ಥಿಗಳ ಭಾವಚಿತ್ರಗಳ ಜತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫೋಟೋವನ್ನು ಎಲ್‌ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗಿತ್ತು. ಈ ವಿಷಯ ತಿಳಿದು…
ವಿದ್ಯಾರ್ಥಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಎಬಿವಿಪಿಯಿಂದ ಪ್ರತಿಭಟನೆ
ಮೈಸೂರು ; ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ಸೌಕರ್ಯದ ಕೊರತೆ ನಿವಾರಿಸಬೇಕು, ಹಾಸ್ಟೆಲ್ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಬಾಕಿ ಇರುವ ಸ್ಕಾಲರ್ಶಿಪ್ ವಿಳಂಬದAತಹ ತೀವ್ರ ಶೈಕ್ಷಣಿಕ ಬಿಕ್ಕಟ್ಟುಗಳ ನಡುವೆಯೂ, ರಾಜ್ಯದಲ್ಲಿ ಈ ಜವಾಬ್ದಾರಿಯನ್ನು ಹೊರಬೇಕಾದ ಶಿಕ್ಷಣ ಸಚಿವರೇ ಇಲ್ಲದಿರುವುದನ್ನು ತೀವ್ರವಾಗಿ ಖಂಡಿಸಿ ಬುಧವಾರ ನಗರದಲ್ಲಿ ಎಬಿವಿಪಿಯಿಂದ ಪ್ರತಿಭಟನೆ ನಡೆಸಲಾಯಿತು.ಮೈಸೂರಿನ ನಗರಪಾಲಿಕೆ ಕಚೇರಿಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ನಾನಾ ಘೋಷಣೆಗಳನ್ನು ಕೂಗಿದರು.ಈ ವೇಳೆ ಮಾತನಾಡಿದ ಪರಿಷತ್‌ನ ಜಿಲ್ಲಾ ಸಂಚಾಲಕರಾದ ನಂದನ್ ಕುಮಾರ್ ಹೆಚ್,ರಾಜ್ಯದ…