
ಮೈಸೂರು: ಇಲ್ಲಿನ ದಟ್ಟಗಳ್ಳಿ ಬಡಾವಣೆ ಯಲ್ಲಿರುವ ಇಸ್ಕಾನ್ ಕೇಂದ್ರದ ವತಿಯಿಂದ 5ನೇ ವರ್ಷದ ಶ್ರೀ ಜಗನ್ನಾಥ ರಥಯಾತ್ರಾ ಮಹೋತ್ಸವವನ್ನು ಜು.23ರಂದು ಹಮ್ಮಿ ಕೊಳ್ಳಲಾಗಿದೆ ಎಂದು ಕೇಂದ್ರದ ಪ್ರತಿನಿಧಿ ವೇಣು ಕೃಷ್ಣದಾಸ್ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಅಂದು ಮಧ್ಯಾಹ್ನ 3 ಗಂಟೆಗೆ ರಥವು ದಟ್ಟಗಳ್ಳಿಯ ಪಿಕೆವಿ ಆಚಾರ್ಯ ಭವನದಿಂದ ಹೊರಟು ಇಸ್ಕಾನ್, ದಟ್ಟಗಳ್ಳಿ ದೇವಸ್ಥಾನ, ಆಂದೋಲನ ವೃತ್ತ, ಶಾಂತಿಸಾಗರ್ ಕಾಂಪ್ಲೆಕ್ಸ್, ವಿವೇಕಾನಂದ ವೃತ್ತ, ಸುಯೋಗ್ ಆಸ್ಪತ್ರೆ ಮೂಲಕ ಪಿಕೆವಿ ಆಚಾರ್ಯ ಭವನಕ್ಕೆ ಬಂದು ತಲುಪಲಿದೆ ಎಂದು ಹೇಳಿದರು.
ಬಲಭದ್ರ ಮತ್ತು ದೇವಿ ಸುಭದ್ರಾ ಅವರೊಂದಿಗೆ ನಡೆಯುವ ಜಗನ್ನಾಥ ಭವ್ಯ ರಥಯಾತ್ರೆಯು ವಿಶ್ವದ ಅತ್ಯಂತ ಪುರಾತನ ಮತ್ತು ಅತ್ಯಂತ ಆಧ್ಯಾತ್ಮಿಕವಾದ ಮಹತ್ವದ ಉತ್ಸವಗಳಲ್ಲಿ ಒಂದಾಗಿದೆ. ಇದು ರಾಷ್ಟಿçà ಯತೆ, ಧರ್ಮ, ಜಾತಿ ಅಥವಾ ಸಾಮಾಜಿಕ ಹಿನ್ನೆಲೆಯನ್ನು ಪರಿಗಣಿಸದೆ ಜನರನ್ನು ಭಕ್ತಿಯ ಕಡೆಗೆ ಸೆಳೆಯುವ ಕಾರ್ಯಕ್ರಮ ವಾಗಿದೆ. ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್.ಶ್ರೀವತ್ಸ ಭಾಗವಹಿ ಸುವರು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಂದಮುಕುAದ ಕೃಷ್ಣದಾಸ್, ರಸರಾಜ ಗೋಕುಲೇಶ ಪ್ರಭಾ, ಚಂಪಕ ಲತಾ ಸುಮುಖಿ ದೇವದಾಸಿ ಹಾಜರಿದ್ದರು