Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪೊಲೀಸ್ ಅಧಿಕಾರಿಗೆ ಜಮೀನು ಕೊಡಿಸುವ ಆಮಿಷ ವೊಡ್ಡಿ 65 ಲಕ್ಷ ರೂ ಪಂಗನಾಮ!


ಮೈಸೂರು: ಜಮೀನು ಕೊಡಿಸುವ ಆಮಿಷ ನೀಡಿ ಪೊಲೀಸ್ ಅಧಿಕಾರಿಗೆ ವಂಚಕರು 65 ಲಕ್ಷ ರೂ ಪಂಗನಾಮ ಹಾಕಿರುವ ಪ್ರಕರಣ ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಶ್ರೀನಿವಾಸ್ ವಂಚನೆಗೆ ಒಳಗಾದವರು.
ಪದ್ಮಶ್ರೀ ಕನಸ್ಟçಕ್ಷನ್ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಮುಖ್ಯ ಆರೋಪಿ ನಾರಾಯಣಮೂರ್ತಿಯನ್ನು ಬಂಧಿಸಲಾಗಿದೆ. ನಾರಾಯಣಮೂರ್ತಿ ಪತ್ನಿ ಜಯಮಾಲಾ, ಪುತ್ರಿಯರಾದ ಪದ್ಮ, ಭವ್ಯ ಹಾಗೂ ಜಮೀನು ಮಾಲೀಕ ನಾಗೇಗೌಡ ವಿರುದ್ದ ಪ್ರಕರಣ ದಾಖಲಾಗಿದೆ.
ನಾರಾಯಣಮೂರ್ತಿ ಪತ್ನಿ ಹಾಗೂ ಇಬ್ಬರು ಪುತ್ರಿಯರು ಮತ್ತು ನಾಗೇಗೌಡ ತಲೆ ನಾಪತ್ತೆಯಾಗಿದ್ದಾರೆ.
ಈ ವಂಚಕರು 2025ರಲ್ಲಿ ಎಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಬಳಿ 4 ಎಕರೆ ಜಾಗವನ್ನು ಪಿಎಸ್‌ಐ ಶ್ರೀನಿವಾಸ್ ಅವರಿಗೆ ತೋರಿಸಿದ್ದರು.
ಬೆಂಗಳೂರಿನಲ್ಲಿದ್ದ ಆಸ್ತಿ ಮಾರಿ ಈ ಜಮೀನು ಖರೀದಿಗೆ ಪಿಎಸ್‌ಐ ಶ್ರೀನಿವಾಸ್ ಮುಂದಾಗಿದ್ದರು.
ಅವರಿಂದ ಹಂತ ಹಂತವಾಗಿ ನಾರಾಯಣಮೂರ್ತಿ 65 ಲಕ್ಷ ರೂ. ವಸೂಲಿ ಮಾಡಿದ್ದಾನೆ,ಆದರೆ ಹಣ ಪಡೆದರೂ ಜಮೀನು ನೋಂದಣಿ ಮಾಡಿಸದೆ ಮೀನಾಮೇಷ ಎಣಿಸುತ್ತಿದ್ದ.
ಅನುಮಾನಗೊಂಡು ಜಮೀನು ದಾಖಲೆ ಪರಿಶೀಲಿಸಿದಾಗ, ಇದರ ಮಾಲೀಕ ನಾಗೇಗೌಡ 2025ರಲ್ಲೇ ಮಂಜು ಎಂಬವರಿಗೆ 4 ಎಕರೆ ಜಮೀನು ಮಾರಾಟ ಮಾಡಿರುವುದು ಗೊತ್ತಾಗಿದೆ.
ಪಹಣಿಯಲ್ಲಿ ಇನ್ನೂ ನಾಗೇಗೌಡನ ಹೆಸರೇ ಚಾಲ್ತಿಯಲ್ಲಿದ್ದರಿಂದ ಇವರೇ ಮಾಲೀಕ ಎಂದು ನಂಬಿ ಪಿಎಸ್‌ಐ ಶ್ರೀನಿವಾಸ್ ಹಣ ನೀಡಿದ್ದರು.
ಅನುಭೋಗ ದಾಖಲೆ ಪರಿಶೀಲಿಸಿದಾಗ ಜಮೀನು ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ನAತರ ಶ್ರೀನಿವಾಸ್ ದೂರು ನೀಡಿದ್ದು, ನಾರಾಯಣಮೂರ್ತಿ ಸೇರಿ ಐದು ಮಂದಿ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ.