Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚನ್ನಮ್ಮರವರು ದೇವೇಗೌಡರವರ ಕುಟುಂಬದ ಶಕ್ತಿಯಾಗಿದ್ದರು :  ಪಿ ಪ್ರಶಾಂತ್ ಗೌಡ

Oplus_131072

ಪಿರಿಯಾಪಟ್ಟಣ ತಾಲೂಕು ಒಕ್ಕಲಿಗರ ಸಂಘದಲ್ಲಿ  ಚನ್ನಮ್ಮರವರಿಗೆ ಶ್ರದ್ಧಾಂಜಲಿ ಸಭೆ 

ಪಿರಿಯಾಪಟ್ಟಣ : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮರವರು ದೇವೇಗೌಡರವರ ಕುಟುಂಬದ ಶಕ್ತಿಯಾಗಿದ್ದರು ಎಂದು ನಗರ ಪಾಲಿಕೆ ಮಾಜಿ ಸದಸ್ಯರು ಹಾಗೂ ಪಿರಿಯಾಪಟ್ಟಣ ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಪಿ ಪ್ರಶಾಂತ್ ಗೌಡ ತಿಳಿಸಿದರು. ಪಟ್ಟಣದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ದಿವಂಗತ ಶ್ರೀಮತಿ ಚನ್ನಮ್ಮರವರಿಗೆ ಏರ್ಪಡಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ರಾಜಕೀಯ ವ್ಯವಸ್ಥೆಗೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಕೊಡುಗೆಯಾಗಿ ನೀಡಿದ ಮಹಾತಾಯಿಯಾಗಿದ್ದಾರೆ 

ಚನ್ನಮ್ಮರವರು ರಾಜಕೀಯದ ಉನ್ನತ ಸ್ಥಾನದಲ್ಲಿರುವ ಕುಟುಂಬದ ಜನರ ಹಾಗೂ ಸಾಮಾನ್ಯರ ನಡುವೆ ರಾಜಮಾತೆಯ ಹಾಗೆ ಬದುಕಿ ತೋರಿಸಿದವರು 72 ವರ್ಷಗಳ ಸುದೀರ್ಘ ಕೌಟುಂಬಿಕ ರಾಜಕಾರಣದ ವಾತಾವರಣದಲ್ಲಿ ಎಲ್ಲೂ ಅಸಹನೆ, ಬೇಸರಗೊಳ್ಳದೆ ದೇವೇಗೌಡರ ಕುಟುಂಬವನ್ನು ಮುನ್ನಡೆಸಿದ್ದಾರೆ. ಇವತ್ತಿನ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ ಚನ್ನಮ್ಮ ಅವರಲ್ಲಿದ್ದ ತಾಳ್ಮೆ ಮತ್ತು ಸಂಸ್ಕಾರದಿಂದ ಕುಟುಂಬದಲ್ಲಿ ಉತ್ತಮ ನಾಯಕರು ರೂಪುಗೊಳ್ಳಲು ಸಾಧ್ಯವಾಯಿತು. ಅವರ ಆದರ್ಶಗಳು ಪ್ರತಿ ಮನೆ ಮನದಲ್ಲೂ ಹಸಿರಾಗಿ ಉಳಿಯಲಿವೆ ಚನ್ನಮ್ಮರವರ ಅಗಲಿಕೆ ತುಂಬಲಾಗದ ನಷ್ಟವಾಗಿದೆ ಎಚ್ ಡಿ ದೇವೇಗೌಡರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು 

ರೈತ ಮುಖಂಡ ದೇವರಾಜು ಮಾತನಾಡಿ ರಾಜಕಾರಣದ ಏಳುಬೀಳುಗಳು, ಅಧಿಕಾರದ ಹಾದಿಯ ಸವಾಲುಗಳು, ಕೌಟುಂಬಿಕ ಏರಿಳಿತಗಳು, ಹೀಗೆ ಎಲ್ಲದರಲ್ಲೂ ಹೆಗಲಿಗೆ ಹೆಗಲು ಕೊಟ್ಟು ಬರೋಬ್ಬರಿ 72 ವರ್ಷಗಳ ಕಾಲ ಜೊತೆಯಾಗಿ ಸಾಗಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರ ಸುದೀರ್ಘ ದಾಂಪತ್ಯ ಪಯಣ ಕೊನೆಗೂ ಅಂತ್ಯಗೊಂಡಿದೆ.

ಸದಾ ನೆರಳಿನಂತೆ ಜೊತೆಯಾಗಿದ್ದ ತಮ್ಮ ಪ್ರೀತಿಯ ಅರ್ಧಾಂಗಿ ಚೆನ್ನಮ್ಮ ಅವರ ಅಗಲಿಕೆಯಿಂದಾಗಿ ದೊಡ್ಡಗೌಡರು ಹಾಗೂ ಅವರ ಕುಟುಂಬದವರು ತೀವ್ರವಾಗಿ ನೊಂದಿದ್ದಾರೆ ದೇವರು ಅವರ ಕುಟುಂಬಕ್ಕೆ ಶಕ್ತಿಕೊಡಲಿ ಎಂದರು 

ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆನಂದ್ ಬಸಲಾಪುರ, ಕಾನೂನು ಸಲಹೆಗಾರ ಸಂದೀಪ್ ಕೆ.ಡಿ, ಕಾರ್ಯದರ್ಶಿ ಮೋಹನ್, ಮನು, ಮಧು, ಕುಮಾರ್, ಮುತ್ತುರಾಜು, ರವಿ, ಕಿರಣ್ ಸೇರಿದಂತೆ ಇತರರು ಇದ್ದರು