Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶ್ರೀ ಸಂಕಲ್ಪ ಸಂತುಷ್ಟ ಯಜ್ಞ ಶಾಲೆ ಉದ್ಘಾಟನೆ


ಮೈಸೂರು; ನಗರದ ಯಾದಗಿರಿಯ ಸಿಎಫ್‌ಟಿಆರ್‌ಐ ಪಕ್ಕದಲ್ಲಿರುವ ಉತ್ತರಾದಿಮಠ ದ ಶ್ರೀ ಸತ್ಯಪ್ರೋಮೋದ ಕಲ್ಯಾಣಮಂಟಪದ ಪ್ರಾಣದೇವರ ದೇವಸ್ಥಾನದ ಆವರಣದಲ್ಲಿ ಶ್ರೀ ಸಂಕಲ್ಪ ಸಂತುಷ್ಟ ಯಜ್ಞ ಶಾಲೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉತ್ತರಾದಿಮಠದ ಈ ಕಾರ್ಯಕ್ರಮದ ಬಗ್ಗೆ ಸಂತೋಷ ವಾಗಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿ , ಇನ್ನು ಮುಂದೆ ಪ್ರತಿ ಒಬ್ಬರು ಈ ಯಜ್ಞ ಶಾಲೆಯನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದರು.
ಈ ವೇಳೆ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಕಾಶ್, ಇದೆ ಸಂದರ್ಭಲ್ಲಿ ಎಕೆಬಿಎಂಎಸ್ ನ ರಾಜ್ಯಕರ್ಯಕಾರಿಣಿ ಸದಸ್ಯ ವಾಸುದೇವ ಮೂರ್ತಿ, ವಿಶ್ವಹಿಂದು ಪರಿಷತ್ತಿನ ನಗರ ಅಧ್ಯಕ್ಷ ಮಹೇಶ್ ಕಾಮತ್, ಬುಜಂಗ, ಪಾರಾಯಣದ ಶ್ರೀ ವಾಸುದೇವ ಮೂರ್ತಿ, ಪ್ರದಾನ ಅರ್ಚಕ ನಾಗಭೂಷಣ ಆಚಾರ್ಯ, ವ್ಯವಸ್ಥಾಪಕ ಪ್ರಮೋದ್ ಆಚಾರ್ಯಇದ್ದರು. ಪಂಡಿತ ಆದ್ಯ ಗೊವಿಂದಚ್ಯಾರ ನೇತೃತ್ವದಲ್ಲಿ ನವಗ್ರಹ ಹೋಮ, ಪವನಮಾನ ಹೋಮ. ನೆರವೇರಿತು.