
ಮೈಸೂರು; ಚಾಮುಂಡೇಶ್ವರಿ ಅಮ್ಮನವರ ಎರಡನೇ ಆಷಾಢ ಶುಕ್ರವಾರದ ಅಂಗವಾಗಿ, ಊಟಿ ರಸ್ತೆಯ ಗಣಪತಿ ಆಶ್ರಮದ ಹತ್ತಿರದಲ್ಲಿ ರಾಜ್ಯ ಶಿವಚಕರ ಸಂಘದ ಗೌರವಾಧ್ಯಕ್ಷ ಅಂಬಳೆ ಶಿವಣ್ಣ ಕುಟುಂಬದವರಿAದ 9ನೇ ವರ್ಷದ ಪೂಜಾ ಮಹೋತ್ಸವ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಖಂಡರಾದ ಸಿ. ಸಂದೀಪ್, ಮಹೇಶ್, ನಾಗಣ್ಣ, ಮೋಹನ್, ಬಸವರಾಜ, ರಾಜೇಂದ್ರ, ವಿನೋದ್, ರಾಘವೇಂದ್ರ, ಅರುಣ್, ಸರ್ವೇಶ್, ಯಶವಂತ್, ಪ್ರವೀಣ್, ಶ್ರೇಯಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.