
ಮೈಸೂರು: ಆಷಾಢ ಮಾಸ ಎರಡನೇ ಶುಕ್ರವಾರವಾದ ಇಂದು ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ನಗರದ ಚಾಮುಂಡಿಬೆಟ್ಟಕ್ಕೆ ಭಕ್ತ ಸಾಗರವೇ ಬಂದಿತ್ತು. ಬೆಟ್ಟದ ತಾಯಿಗೆ ಚಾಮುಂಡೇಶ್ವರಿಗೆ ಲಕ್ಷಿ÷್ಮÃ ಅಲಂಕಾರ ಮಾಡಲಾಗಿದ್ದು, ತಿಳಿ ಗುಲಾಬಿ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿಯನ್ನು ಭಕ್ತರು ಕಣ್ಮನ ತುಂಬಿಕೊAಡರು.
ಎರಡನೇ ಆಷಾಢ ಶುಕ್ರವಾರದ ಸಂಭ್ರಮದ ಹಿನ್ನೆಲೆಯಲ್ಲಿ ದೇವಾಲಯದ ಹೊರಭಾಗ ಹಾಗೂ ಒಳಭಾಗಗಳನ್ನು ವಿವಿಧ ರೀತಿಯ ಹೂವುಗಳಿಂದ ಮತ್ತು ಹಣ್ಣುಗಳಿಂದ ಅಲಂಕಾರ ಮಾಡಲಾಗಿದೆ. ತೋತಾಪುರಿ ಮಾವಿನ ಕಾಯಿ, ಡ್ರಾ÷್ಯಗನ್ ಫ್ರೂಟ್, ವಿವಿಧ ಹಣ್ಣು, ವಿವಿಧ ಬಣ್ಣದ ಪುಷ್ಪಗಳಿಂದ ದೇವಸ್ಥಾನದ ಆವರಣವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.ತಾಯಿ ಚಾಮುಂಡೇಶ್ವರಿಯ ಮೂಲ ಮೂರ್ತಿ ಹಾಗೂ ಉತ್ಸವ ಮೂರ್ತಿಗೆ ಗುಲಾಬಿ ಬಣ್ಣದ ಸೀರೆಯಿಂದ ಲಕ್ಷಿ÷್ಮÃ ಅಲಂಕಾರ ಮಾಡಲಾಗಿದೆ.
ಮುಂಜಾನೆಯಿAದಲೇ ವಿವಿಧ ಪೂಜೆಗಳು: ಆಷಾಢ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಮುಂಜಾನೆಯಿAದಲೇ ಶಕ್ತಿ ದೇವತೆ ಚಾಮುಂಡೇಶ್ವರಿಗೆ ವಿಶೇಷ ರೀತಿಯ ಪೂಜೆಗಳು, ರುದ್ರಾಭಿಷೇಕ, ಪಂಚಾಮೃತ ಅಭಿಷೇಕವನ್ನು ವೇದ ಮಂತ್ರಗಳ ಪಠಣದೊಂದಿಗೆ ನೆರವೇರಿಸಲಾಯಿತು. ಬಳಿಕ ಬಗೆ, ಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ, ನಂತರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಯಿತು. ಬೆಳಗ್ಗೆ 5 ಗಂಟೆಯಿAದ ರಾತ್ರಿ 10ಯವರೆಗೆ ವಿವಿಧೆಡೆಯಿಂದ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ಸಾಗಿ ಚಾಮುಂಡೇಶ್ವರಿಯ ದರ್ಶನ ಪಡೆದು, ತಮ್ಮ ಕಷ್ಟಗಳನ್ನು ಕಳೆದು, ಇಷಾöರ್ಥಗಳನ್ನು ಈಡೇರಿಸಿಕೊಡು ತಾಯೇ ಎಂದು ಚಾಮುಂಡೇಶ್ವರಿಗೆ ಮೊರೆಯಿಟ್ಟರು. ಆಷಾಢ ಮಾಸದಲ್ಲಿ ಚಾಮುಂಡೇಶ್ವರಿಯನ್ನು ಪೂಜಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿAದ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು.
ಮಹಿಳೆಯರು ಮಡಿಲಲ್ಲಿ ಹೂ, ಹಣ್ಣು, ಕುಂಕುಮ ಇಟ್ಟುಕೊಂಡು ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಟ್ಟದಲ್ಲಿ ಹಲವಾರು ಸಾಂಸ್ಕöÈತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರ ಭಾಗವಾಗಿ, ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವೇದವಾಹಿನಿ ಸಂಸ್ಥೆಯು ಈ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು.
ಈ ಆಷಾಢ ಮಾಸದ ಶುಕ್ರವಾರದ ದಿನದಂದು ಕುಟುಂಬ ಸಮೇತರಾಗಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರೆ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ನೆರವೇರುತ್ತವೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದರು.
ಗಣ್ಯರಿಂದ ದರ್ಶನ: ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಅಸಂಖ್ಯಾತ ಭಕ್ತರೊಂದಿಗೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು. ಶಾಸಕರಾದ ಅಶೋಕ್ ಪಟ್ಟಣ್, ಎ.ಆರ್.ಕೃಷ್ಣಮೂರ್ತಿ, ನರೇಂದ್ರಸ್ವಾಮಿ, ರವಿ ಗಣಿಗ, ಡಿ.ರವಿಶಂಕರ್, ನಟ ಧನ್ವೀರ್, ನಟಿ ಸಪ್ತಮಿ ಗೌಡ, ಬಿಗ್‌ಬಾಸ್ ಖ್ಯಾತಿಯ ಅಶ್ವಿನಿ ಗೌಡ ಸೇರಿದಂತೆ ಹಲವರು ದರ್ಶನ ಪಡೆದರು.
ಭಕ್ತರಿಗೆ ಪ್ರಸಾದದ ವ್ಯವಸ್ಥೆ: ಆಷಾಢ ಶುಕ್ರವಾರದ ಅಂಗವಾಗಿ ಬೆಟ್ಟಕ್ಕೆ ಭೇಟಿ ನೀಡಿದ ಭಕ್ತರಿಗೆ ಮಲ್ಟಿಲೆವೆಲ್ ಪಾರ್ಕಿಂಗ್ ಜಾಗದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಂಜನೂಡಿನ ಚಾಮುಂಡಿ ಟೌನ್‌ಶಿಪ್, ಕೊಯಮತ್ತೂರಿನ ದುರ್ಗಾ ಏಜೆನ್ಸೀಸ್‌ನ ಶಾಂತಿ, ತಿರುಮಲೈಸ್ವಾಮಿ ತಂಭು ಅವರು ಪ್ರಸಾದ ವ್ಯವಸ್ಥೆ ಮಾಡಿದ್ದರು. ಇಡ್ಲಿ ಸಾಂಬಾರ್, ಉದ್ದಿನ ವಡೆ, ಉಪ್ಪಿಟ್ಟು, ಕೇಸರಿಬಾತ್, ಪೊಂಗಲ್ ವಿತರಿಸಲಾಯಿತು. ಬೆಳಗ್ಗೆ 6.30ರಿಂದ ಆರಂಭವಾದ ಪ್ರಸಾದ ವಿತರಣೆ ಸಂಜೆ 4ರವರೆಗೂ ನಡೆಯಿತು.
ಮೊದಲ ಆಷಾಢದ ದಿನದಂದು ಉಂಟಾದ ಕೆಲವು ಗೊಂದಲಗಳನ್ನು ಈ ಬಾರಿ ಸರಿಪಡಿಸಲಾಗಿದ್ದು ದೇವಸ್ಥಾನದ ದರ್ಶನದ ಕ್ಯೂ ವ್ಯವಸ್ಥೆ ಹಾಗೂ ವಿಶೇಷ ದರ್ಶನದ ವ್ಯವಸ್ಥೆ ಸರಿಮಾಡಲಾಗಿದ್ದು, ಚಾಮುಂಡಿಬೆಟ್ಟದ ಕೆಳ ಭಾಗದ ಲಲಿತ್ ಮಹಲ್ ಮೈದಾನದಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, 2,000 ರೂಪಾಯಿ ಟಿಕೆಟ್ ಪಡೆದವರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಇದರ ಜೊತೆಗೆ ವಿವಿಐಪಿಗಳಿಗೆ ಬೆಳಗ್ಗೆ 5:30 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಮೊದಲ ಆಷಾಢ ಶುಕ್ರವಾರದ ದಿನ ಸ್ವಲ್ಪ ಭಕ್ತರ ಸಂಖ್ಯೆ ಕಡಿಮೆ ಇತ್ತು.
ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿದೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ಪ್ರಥಮ ಚಿಕಿತ್ಸಾ ಕೇಂದ್ರ, ಅನ್ನದಾನ ವ್ಯವಸ್ಥೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಿತ್ತು. ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಸುರಕ್ಷತೆಗಾಗಿ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೆಟ್ಟದ ತಪ್ಪಲಿನಿಂದ ದೇವಿ ದರ್ಶನಕ್ಕೆ ಹೋಗುವ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ನಿಯಂತ್ರಣಕ್ಕೆ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿತ್ತು.
ನಗರದ ಹಲವೆಡೆ ಆಚರಣೆ;
ಚಾಮುಂಡಿಬೆಟ್ಟದAತೆ ನಗರದ ವಿವಿಧೆಡೆ ಎರಡನೇ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿತ್ತು. ವಿವಿಧ ಬಡಾವಣೆಗಳಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ತಮ್ಮ ಸಮೀಪದ ದೇವಸ್ಥಾನಗಳಿಗೆ ಭೇಟಿ ನೀಡಿದ ಭಕ್ತರು ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಇನ್ನೂ ನಗರದ ಹಲವು ಬಡಾವಣೆಗಳು ಹಾಗೂ ವೃತ್ತಗಳಲ್ಲೂ ಸಹ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು.



