
ಮೈಸೂರು; ಪುದುಚ್ಚರಿ ವಿಶ್ವ ಇತಿಹಾಸ ಕಾಂಗ್ರೆಸ್ ಮತ್ತು ಮ್ಯಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹಭಾಗಿತ್ವದಲ್ಲಿ ಜುಲೈ 25 ಮತ್ತು 26 ರಂದು ಅಂತರಾಷ್ಟ್ರೀಯ ಇತಿಹಾಸ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನವು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದ್ದು, ವಿಶ್ವದ ವಿವಿಧ ಭಾಗಗಳಿಂದ ಅನೇಕ ವಿದ್ವಾಂಸರು, ಸಂಶೋಧಕರು ಮತ್ತು ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅನಿತ ಎಂ.ಎಸ್ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಈ ಸಂಸ್ಥೆ ಅಂತರಾಷ್ಟಿçÃಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಅತ್ಯಂತ ಸಂತಸ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಮ್ಮೇಳನವನ್ನು ಪ್ರಾಚೀನ ಜಗತ್ತು, ಮಧ್ಯಕಾಲೀನ ಜಗತ್ತು, ಆಧುನಿಕ ಜಗತ್ತು ಮತ್ತು ಸಮಕಾಲೀನ ಜಗತ್ತು ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದು; ಎಲ್ಲಾ ವೇದಿಕೆಗಳಲ್ಲೂ ವಿವಿಧ ಸಂಶೋಧನಾ ಲೇಖನಗಳನ್ನು ಏಕಕಾಲದಲ್ಲಿ ಮಂಡಿಸಲಾಗುತ್ತದೆ. ಮಣಿಪುರದ ಸಮಸ್ಯೆ ಮತ್ತು ಹೋರಾಟದ ಕುರಿತು ಅಮಸ್ಟರ್ ಡ್ಯಾಮ್ ನ ಸಂಶೋಧಕರು ವಿಷಯ ಮಂಡಿಸಲಿದ್ದಾರೆ ಎಂದು ಸಮ್ಮೇಳನದ ಸ್ಥಳೀಯು ಸಂಚಾಲಕರಾದ ಡಾ. ನಾಗವೇಣಿ.ಟಿ ಮಾಹಿತಿ ನೀಡಿದರು.
ಹವಾಮಾನ ವ್ಯಪರೀತ್ಯ, ಹೆಣ್ಣು ಮಕ್ಕಳ ಶೋಷಣೆ, ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯ ಅತಿ ಹೆಚ್ಚಾಗಿ ಕಂಡುಬರುತ್ತಿರುವ ಈ ಸಮಯದಲ್ಲಿ ಸಮ್ಮೇಳನ ಈ ಎಲ್ಲಾ ನೋವಿನ ಧ್ವನಿಗಳಿಗೆ ವೇದಿಕೆಯಾಗಲಿದೆ. ಇತಿಹಾಸದಲ್ಲಿನ ಸ್ತಿçà ಬರವಣಿಗೆಯ ಕುರಿತು ಸಹ ಚರ್ಚೆಯಾಗಲಿದೆ.
ಸಮ್ಮೇಳನದಲ್ಲಿ ವಿಷಯಗಳನ್ನು ಕುರಿತು ತಮ್ಮ ಅನಿಸಿಕೆ, ಸಂಶೋಧನಾ ಲೇಖನಗಳನ್ನು ಮಂಡಿಸಲು ಅವಕಾಶವಿದೆ. ವಲಸೆ ಮತ್ತು ಜಾತಿಯ ನೆರಳುಗಳು ಎಂಬ ವಿಷಯದ ಕುರಿತು ಶ್ರೀಮತಿ ದಾಸರಿ ಸಾವಿತ್ರಿ ವೆಂಕಟರೆಡ್ಡಿ ಸ್ಮಾರಕ ದತ್ತಿ ಉಪನ್ಯಾಸವನ್ನು ಬೆಂಗಳೂರಿನ ಕ್ರೆöÊಸ್ಠ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಪ್ರಿಯದರ್ಶಿನಿ ಎಸ್ ಮಂಡಿಸಲಿದ್ದಾರೆ.
ಸಮ್ಮೇಳನವು ವಿವಿಧ ವಿದ್ಯಾರ್ಥಿಗಳ, ಪ್ರಾಧ್ಯಾಪಕರ, ಸಂಶೋಧಕರ ಅನಿಸಿಕೆ, ಆಲೋಚನೆಗಳಿಗೆ ಧ್ವನಿಯಾಗಿಲಿದೆ. ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಸಮಸ್ಯೆ ಹಾಗೂ ಹೋರಾಟಕ್ಕೂ ಸಮ್ಮೇಳನ ಧ್ವನಿಯಾಗಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಸಮ್ಮೇಳನದ ಉದ್ಘಾಟನೆಯು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದ್ದು; ಆಸಕ್ತ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಮ್ಮೇಳನದ ದಿನ ಬೆಳಗ್ಗೆ ನೋಂದಣಿ ಮಾಡಿಸಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಸಮ್ಮೇಳನದ ಸ್ಥಳೀಯ ಸಂಚಾಲಕರಾದ ಇತಿಹಾಸ ಪ್ರಾಧ್ಯಾಪಕರಾದ ಡಾ. ನಾಗವೇಣಿ ಟಿ ಅವರನ್ನು ದೂ: 9686288416ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಅನೇಕ ವಿಷಯಗಳ ಕುರಿತು ಮಾಹಿತಿ ಪಡೆಯುವ, ತಜ್ಞರ ಜೊತೆ ಸಂವಾದ ನಡೆಸುವ ಅವಕಾಶ ಪಡೆಯಬಹುದಾಗಿದೆ ಎಂದು ಹೇಳಿದರು.