Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಮೆದುಳು ದಿನ ಆಚರಣೆ


ಮೈಸೂರು: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಹಾಗೂ ಜಿಲ್ಲಾ ಆಸ್ಪತ್ರೆ ಮೈಸೂರು ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಮೆದುಳು ದಿನ ವನ್ನು ಆಚರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಕೆ. ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ನಂತರ, ಉಜ್ಜೀವನ್ ಸಂಸ್ಥೆಯವರು ಉಚಿತವಾಗಿ ನೀಡಿದ ಫಿಜಿಯೋಥೆರಪಿ ಪರಿಕರಗಳನ್ನು ಜಿಲ್ಲಾ ಆಸ್ಪತ್ರೆಯ ಏಚಿಃಊI ವಿಭಾಗಕ್ಕೆ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತçಚಿಕಿತ್ಸಕ ಡಾ. ಚಿದಂಬರ್ ಮಾತನಾಡಿ, ಈ ಹಿಂದೆ ಮೆದುಳಿನ ತೊಂದರೆಗಳಿಗೆ ರೋಗಿಗಳು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೇ ಅಲೆಯಬೇಕಾಗಿತ್ತು. ಆದರೆ ಈಗ ಏಚಿಃಊI ಯೋಜನೆಯಡಿ ಜಿಲ್ಲಾ ಮಟ್ಟದಲ್ಲೇ ಪರಿಣಿತ ವೈದ್ಯರಿಂದ ಉಚಿತ ಚಿಕಿತ್ಸೆ ಸಿಗುತ್ತಿರುವ್ಯದರಿಂದ, ಸಾರ್ವಜನಿಕರ ಅಲೆದಾಟ ತಪ್ಪಿದೆ. ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು ತಮ್ಮ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಸೈಕಾಲಜಿಸ್ಟ್ ಫಿರ್ದೋಸ್ ಮಾತನಾಡಿ, ಕಳೆದ ೨.೫ ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ ೧೦೮ ರಲ್ಲಿ ವೈದ್ಯರು, ಫಿಜಿಯೋಥೆರಪಿಸ್ಟ್, ಸ್ಪೀಚ್ ಥೆರಪಿಸ್ಟ್, ಸೈಕಾಲಜಿಸ್ಟ್ ಹಾಗೂ ಶುಶ್ರೂಷಕರನ್ನೊಳಗೊಂಡ ತಂಡವು ಪ್ರತಿದಿನ ಪಾರ್ಶ್ವವಾಯು, ಮೂರ್ಛೆ ರೋಗ, ತಲೆನೋವು ಮತ್ತು ಮರೆವಿನ ಕಾಯಿಲೆಗೆ ಉಚಿತ ಸಲಹೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಹಾಗೂ ಏಚಿಃಊI ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ನಾಗೇಶ್ ಪಿ. ಆರಾಧ್ಯ ಮಾತನಾಡಿ ಎಲ್ಲರಿಗೂ ಮೆದುಳು ಆರೋಗ್ಯದ ಲಭ್ಯತೆಯನ್ನು ಕಲ್ಪಿಸುವುದು ಎಂಬುದು ಈ ವರ್ಷದ ಮೆದುಳು ದಿನದ ಮುಖ್ಯ ಘೋಷವಾಕ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲಿ ವೈದ್ಯಾಧಿಕಾರಿ ಡಾ. ಶಾಲಿನಿ, ಮನೋರೋಗ ತಜ್ಞೆ ಡಾ. ಮಾಲಿನಿ ಗೋವಿಂದನ್, ಫಿಜಿಷಿಯನ್ ಡಾ. ಪ್ರಶಾಂತ್, ಸಿಎಂಒ ಡಾ. ಮಹೇಶ್, ಶುಶ್ರೂಷಕ ಅಧಿಕಾರಿ ನಾಗರತ್ನ, ಸ್ಪೀಚ್ ಥೆರಪಿಸ್ಟ್ ಇರ್ಫಾನ್ ಹಾಗೂ ಶುಶ್ರೂಷಕಿ ಅಶ್ವಿನಿ ಸೇರಿದಂತೆ ಹಲವು ಸಿಬ್ಬಂದಿಗಳು ಹಾಜರಿದ್ದರು