
ನಂಜನಗೂಡು; ನಂಜನಗೂಡಿನ ಜೆ.ಎಸ್.ಎಸ್ ಆರ್ಟ್್ಸ, ಕಾಮರ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಈಶ ಗ್ರಾಮೋತ್ಸವ ಸಂಭ್ರಮದಿAದ ನಡೆಯಿತು. ಈಶ ಔಟ್‌ರೀಚ್ ಆಯೋಜಿಸುವ ‘ಈಶ ಗ್ರಾಮೋತ್ಸವ’ವು ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜವನ್ನು ಒಂದೆಡೆ ತರುವ ಹಾಗೂ ಬೇರುಮಟ್ಟದ ಆಟಗಾರರಲ್ಲಿ ತಂಡದ ಮನೋಭಾವ, ಆತ್ಮವಿಶ್ವಾಸ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಈ ಕೂಟದಲ್ಲಿ ನಂಜನಗೂಡಿನ ವಿವಿಧ ಹಳ್ಳಿಗಳಿಂದ ಒಟ್ಟು 290 ಪುರುಷ ವಾಲಿಬಾಲ್ ಆಟಗಾರರು ಮತ್ತು ಮಹಿಳೆಯರ ಥ್ರೋಬಾಲ್ ಆಟಗಾರ್ತಿಯರು ಅತ್ಯಂತ ಉತ್ಸಾಹ ಮತ್ತು ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಿದರು.
ಭಾಗವಹಿಸಿದ ತಂಡಗಳನ್ನು ಪ್ರೋತ್ಸಾಹಿಸಲು ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹಬ್ಬದ ವಾತಾವರಣವನ್ನು ನಿರ್ಮಿಸುವ ಮೂಲಕ ಹೆಮ್ಮೆಯಿಂದ ಪಾಲ್ಗೊಂಡರು.ಸರಣಿ ರೋಚಕ ಪಂದ್ಯಗಳ ನಂತರ, ಪುರುಷರ ವಾಲಿಬಾಲ್ ವಿಭಾಗದಲ್ಲಿ 1ನೇ ಸ್ಥಾನವನ್ನು ಚಾಮುಂಡಿ ಬಾಯ್ಸ್ (ಹೊಸ ಹುಂಡಿ) ತಂಡ ಪಡೆದು ಜಯಭೇರಿಗಳಾಗಿದ್ದು, 2ನೇ ಸ್ಥಾನವನ್ನು ಅಪುö್ಪ ಬಾಯ್ಸ್ (ಕಳಲೆ) ತಂಡ, 3ನೇ ಸ್ಥಾನವನ್ನು ಮಿಥಿಲಾ ಮಿರ್ಲೆ (ಏಖ ನಗರ) ತಂಡ ಮತ್ತು 4ನೇ ಸ್ಥಾನವನ್ನು ವೋಲಿ ಸ್ಪೆöÊಕರ್ಸ್ (ದೇವರಾಯಶೆಟ್ಟಿಪುರ) ತಂಡ ಪಡೆದುಕೊಂಡಿವೆ.
ಮಹಿಳೆಯರ ಥ್ರೋಬಾಲ್ ವಿಭಾಗದಲ್ಲಿ 1ನೇ ಸ್ಥಾನವನ್ನು ಚಾಮುಂಡಿ ಗರ್ಲ್್ಸ (ಹೆಡತಲೆ) ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, 2ನೇ ಸ್ಥಾನವನ್ನು ಚಾಮುಂಡೇಶ್ವರಿ (ಕಳಲೆ) ತಂಡ; 3ನೇ ಸ್ಥಾನವನ್ನು ಖಿಓಅ ಗರ್ಲ್್ಸ (ಖಿಓ ಪುರ) ತಂಡ; 4ನೇ ಸ್ಥಾನವನ್ನು ಲಕ್ಷಿ÷್ಮÃಕಾಂತ (ಕಳಲೆ) ತಂಡ ಪಡೆದುಕೊಂಡಿವೆ. ವಿಜೇತ ತಂಡಗಳು ಪಂದ್ಯಾವಳಿಯ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು, ಇನ್ನು ವಿಭಾಗೀಯ ಹಂತದ ಪಂದ್ಯಗಳಲ್ಲಿ ಸ್ಪರ್ಧಿಸಲಿವೆ.
ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ತೋರಿದ ಉತ್ಸಾಹಭರಿತ ಹಾಗೂ ಲವಲವಿಕೆಯ ಮನೋಭಾವವನ್ನು ಪರಿಗಣಿಸಿ, ಸಂಪೂರ್ಣ ಕ್ಲಸ್ಟರ್ ಮಟ್ಟದ ಕಾರ್ಯಕ್ರಮದಲ್ಲಿ ಹೇಮಂತ್ ಗೌಡ ಮತ್ತು ಗೀತಾ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಯಿತು.
ಅಂತರರಾಷ್ಟಿçÃಯ ಪ್ಯಾರಾ ಬ್ಯಾಡ್ಮಿಂಟನ್ ತರಬೇತುದಾರ ಆನಂದ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದು, ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವಿಗಳಾದ ಸಂಜಯ್ ಮತ್ತು ವೀರೇಶ್ ಉಪಸ್ಥಿತರಿದ್ದರು. ನಂಜುAಡೇಶ್ವರ ರೈತ ಉತ್ಪನ್ನ ಸಂಸ್ಥೆಯ ನಿರ್ದೇಶಕ ಉಮಾಶಂಕರ್, ಜೆಎಸ್‌ಎಸ್ ಪದವಿ ಕಾಲೇಜು ಪ್ರಿನ್ಸಿಪಾಲ್ ಹೊನ್ನೇಗೌಡ, ಆಶಾ, ಈಶ ಪ್ರತಿನಿಧಿ ಸುಜಾತಾ ಉಪಸ್ಥಿತರಿದ್ದರು.