Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಉದ್ಯೋಗಾಕಾಂಕ್ಷಿಗಳ ಲಾಭಕ್ಕಾಗಿ 08 ನೇ ಸಮಗ್ರ ಅಣುಕು ಪರೀಕ್ಷೆ

ಮೈಸೂರು; ಆಗಸ್ಟ್ 02 ರಂದು ರಾಜ್ಯಾದ್ಯಂತ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ಗಳ ನೇಮಕಾತಿಗಾಗಿ ಸರ್ಕಾರದಿಂದ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಗೆ ಹಾಜರಾಗುತ್ತಿರುವ ಉದ್ಯೋಗಾಕಾಂಕ್ಷಿಗಳ ಉಪಯೋಗಕ್ಕಾಗಿ ಈವರೆವಿಗೂ ಮೈಸೂರಿನ ನಗರ ಕೇಂದ್ರ ಗ್ರಂಥಾಲಯ ಪೀಪಲ್ಸ್ ಪಾರ್ಕ್ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಉಚಿತವಾಗಿ 07 ಅಣಕು ಪರೀಕ್ಷೆಗಳನ್ನು ನಡೆಸಲಾಗಿದ್ದು, ಗುರುವಾರ 08 ನೇ ಸಮಗ್ರ ಅಣುಕು ಪರೀಕ್ಷೆಯನ್ನು ಉದ್ಯೋಗಾಕಾಂಕ್ಷಿಗಳ ಲಾಭಕ್ಕಾಗಿ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆಸಲಾಯಿತು.
ಸದರಿ ಅಣಕು ಪರೀಕ್ಷೆಗೆ ಸುಮಾರು 150 ಉದ್ಯೋಗಾಕಾಂಕ್ಷಿಗಳು ಹಾಜರಾಗಿದ್ದರು. ಪರೀಕ್ಷೆ ಮುಕ್ತಾಯಗೊಂಡ ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಉದ್ಯೋಗಾಕಾಂಕ್ಷಿಗಳು ಶಿಸ್ತಿನಿಂದ ಪರೀಕ್ಷೆ ಎದುರಿಸಿದ್ದನ್ನು ಪ್ರಶಂಸಿಸಿದರು. ಅಂತಿಮ ಅಣುಕು ಪರೀಕ್ಷೆಯು ಇಷ್ಟು ಶಿಸ್ತಿನಿಂದ ನಡೆಯುವುದೇ ಎಂದು ಸೋಜಿಗಪಟ್ಟರು.
ಶ್ರಮ, ಶಿಸ್ತು ಮತ್ತು ಪ್ರಾಮಾಣಿಕತೆ ವ್ಯಕ್ತಿಯೊಬ್ಬರ ಜೀವನವನ್ನು ರೂಪಿಸಲು ಬಹು ಅಗತ್ಯ. ಉದ್ಯೋಗಾಕಾಂಕ್ಷಿಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವಾಗ ಉತ್ತಮ ಸ್ನೇಹಿತ ವೃಂದವನ್ನು ಹೊಂದಿರಬೇಕು. ಹಾಗೆಯೇ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆ ಮತ್ತು ಇತರೆ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಹೆಚ್ಚು ಕನ್ನಡಿಗರು ಬರದಿರುವುದು ವಿಷಾದನೀಯ ಎಂದರು.
ಅಣಕು ಪರೀಕ್ಷೆಗಳು ಅಭ್ಯರ್ಥಿಯ ಮನೋಸ್ಥೆöÊರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಗರ ಕೇಂದ್ರ ಗ್ರಂಥಾಲಯ ನಡೆಸಿರುವ 08 ಅಣುಕು ಪರೀಕ್ಷೆಗಳು ಉದ್ಯೋಗಾಕಾಂಕ್ಷಿಗಳಲ್ಲಿ ಸಾಕಷ್ಟು ವಿಶ್ವಾಸ ಮೂಡಿಸಿರಲು ಸಾಧ್ಯ ಎಂದರು. ಇಡೀ ರಾಜ್ಯದಲ್ಲಿ ಇಂತಹ ಅಣಕು ಪರೀಕ್ಷೆ ನಡೆಯುತ್ತಿರುವುದು ಮೈಸೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಮಾತ್ರ. ಇದಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿರುವ ನಗರ ಕೇಂದ್ರ ಗ್ರಂಥಾಲಯದ ಅಧಿಕಾರಿಗಳ ಶ್ರಮ ಪ್ರಶಂಸನೀಯ ಎಂದರು. ಹಾಗೆಯೇ ಈ ಕಾರ್ಯದಲ್ಲಿ ನಗರ ಕೇಂದ್ರ ಗ್ರಂಥಾಲಯಕ್ಕೆ ಬೆಂಬಲ ನೀಡಿರುವ ಶ್ರೀ ರಮೇಶ್ ನರಸಯ್ಯ ಮತ್ತು ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಕಾರ್ಯವನ್ನು ಸಹ ಶ್ಲಾಘಿಸಿದರು.
ಸಮಾರಂಭದಲ್ಲಿ ಮಾತನಾಡಿದ ಉಪನಿರ್ದೇಶಕ ಮಂಜುನಾಥ್ ಬಿ ಮಾತನಾಡಿ, ನಗರ ಕೇಂದ್ರ ಗ್ರಂಥಾಲಯದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮ ಸಹಾಯಕ ಅಧಿಕಾರಿ ಪರೀಕ್ಷೆ, ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ, ಪೋಲೀಸ್ ಸಬ್ ಇನ್ಸ್ ಪೆಕ್ಟರ ಪರೀಕ್ಷೆ ಮುಂತಾದವುಗಳಿಗೂ ಸಹ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ನಗರ ಕೇಂದ್ರ ಗ್ರಂಥಾಲಯ ನಡೆಸಿದ ಅಣಕು ಪರೀಕ್ಷೆಗಳ ಮಾದರಿಯಲ್ಲೇ ಪರೀಕ್ಷೆಗಳನ್ನು ನಡೆಸಲು ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ರವರು ಕೋರಿರುವುದಾಗಿ ಹೇಳಿದರು. ಸಮಾರಂಭದ ಮತ್ತೊಬ್ಬ ಅತಿಥಿಯಾದ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಶೈಕ್ಷಣಿಕ ನಿರ್ದೇಶಕಿ ವೈ.ವಿ. ಗಾಯತ್ರಿ ರವರು ಮೈಸೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಮುಂಬರುವ ದಿನಗಳಲ್ಲಿ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬAಧಿಸಿದ ತರಬೇತಿಗೆ ಉಚಿತವಾಗಿ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟರು.