
ಮೈಸೂರು; ಕಾವೇರಿ ನೀರು ನಿರ್ವಹಣಾ ಮಂಡಳಿಯು ತಮಿಳುನಾಡಿಗೆ ನೀರು ಬಿಡಲು ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕು, ಯಾವುದೇ ಒತ್ತಡಕ್ಕೆ ಮಣಿಯಬಾರದು, ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದೆಂದು ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಚಿತ್ರನಟ ಎಸ್.ಜಯಪ್ರಕಾಶ್ (ಜೆಪಿ) ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆಂದು ಆಗ್ರಹಿಸಿ ಶುಕ್ರವಾರ ಮೈಸೂರಿನ ಟೌನ್ ಹಾಲ್ ಮುಂಭಾಗದಲ್ಲಿ ಕಾವೇರಿ ಕ್ರಿಯಾ ಸಮಿತಿಯಿಂದ ನಡೆದ ಪ್ರತಿಭಟನಾ ಧರಣಿಯ ನೇತೃತ್ವವಹಿಸಿ ಮಾತನಾಡಿದ ಅವರು, ಈ ಹಿಂದಿನ ಮುಖ್ಯಮಂತ್ರಿಯಾಗಿದ್ದ
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ಬಾರಿ ಮಾಡಿದ ತಪ್ಪಿಂದಾಗಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಈ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದರು. ಮೈಸೂರಿನ ಟೌನ್ ಹಾಲ್ ಮುಂಭಾಗದಲ್ಲಿ ಕಳೆದ ಬಾರಿ ಕಾವೇರಿ ಕ್ರಿಯಾ ಸಮಿತಿಯು ಸತತವಾಗಿ 100 ದಿನಗಳ ಕಾಲ ಧರಣಿ ನಡೆಸಿದರೂ ಸಿದ್ದರಾಮಯ್ಯ ಅಥವಾ ಜಿಲ್ಲಾ ಉಸ್ತುವಾರಿ ಸಚಿವರುಗಳು, ಧರ್ಮೇಶ್ ತಾಳಕ್ಕೆ ಸೌಜನ್ಯಕ್ಕಾದರೂ ಭೇಟಿ ಮಾಡದಿರುವುದು ಈ ರಾಜ್ಯದ ಜೀವನದಿಯಾದ ಕಾವೇರಿ ನ ಸಂರಕ್ಷಣೆ ಮಾಡುವಲ್ಲಿ ವಿಫಲರಾದರು ಎಂದು ಆರೋಪಿಸಿದರು.
ಕಾವೇರಿ ಕ್ರಿಯಾ ಸಮಿತಿಯು ಮೊದಲೇ ಮೊದಲಿನಿಂದಲೂ ಕಾವೇರಿ ನೀರಿನ ಸಮಸ್ಯೆಗೆ ಹೊಸದಾಗಿ ನ್ಯಾಯಮಂಡಳಿಯನ್ನು ರಚಿಸಿ ವೈಜ್ಞಾನಿಕವಾಗಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ಸಿಗುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡವನ್ನು ಹೇರುತ್ತಿದೆ.
ಜಲ ಸಂಪನ್ಮೂಲ ಕೇಂದ್ರ ಸಚಿವ ಎಸ್ ಕೆ ಪಾಟೀಲ್ ರವರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಬಿಜೆಪಿ ಸಂಸದರು ಭೇಟಿ ಮಾಡಿ, ಕರ್ನಾಟಕ ರಾಜ್ಯಕ್ಕೆ ಕಾವೇರಿ ನೀರಿನ ವಿಷಯದಲ್ಲಿ ನ್ಯಾಯ ದೊರಕಿಸಿ ಕೊಡುವಂತೆ ಕೋರಿರುವುದನ್ನು ಕ್ರಿಯಾ ಸಮಿತಿಯು ಸ್ವಾಗತಿಸಿದೆ. ಅದೇ ರೀತಿ ಮುಖ್ಯಮಂತಿ ಡಿಕೆ ಶಿವಕುಮಾರ್ ಅವರು ಸರ್ವ ಪಕ್ಷದ ಸಭೆ ಕರೆದಿರುವುದು ಮತ್ತು ಸೋಮವಾರದ ವರೆಗೂ ನೀರನ್ನು ಬಿಡದಿರಲು ತೀರ್ಮಾನಿಸಿರುವುದನ್ನು ಸಹ ಕ್ರಿಯಾ ಸಮಿತಿಯು ಸ್ವಾಗತಿಸಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಮೂಗೂರು ನಂಜುAಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಸೋಮೇಗೌಡ, ಶಿವಲಿಂಗಯ್ಯ, ಮಂಜುಳಾ, ಗೋಲ್ಡನ್ ಸುರೇಶ್, ಪ್ರಭುಶಂಕರ, ಹನುಮಂತಯ್ಯ, ರಘು ಆಚಾರ್, ಮಧು, ಮಹೇಶ್, ಕೃಷ್ಣಪ್ಪ , ಹನುಮಂತೇಗೌಡ, ಪ್ರಭಾಕರ್, ಶಿವರಾಂ, ಚಂದ್ರಶೇಖರ್, ತ್ಯಾಗರಾಜ್, ದರ್ಶನ ಗೌಡ, ರವೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು