Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಒಂದು ವಾರ ಕಾಲ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಗಾಂಧಿ ಶಿಲ್ಪ ಬಜಾರ್ ಕರಕುಶಲ ಮೇಳ

ಮೈಸೂರು; ನಗರದ ಹೆಬ್ಬಾಳ್‌ನಲ್ಲಿರುವ ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ- ಗಾಂಧೀ ಶಿಲ್ಪ ಬಜಾರ್‌ನ್ನು ಜುಲೈ 28 ರಿಂದ ಮೇ 3ರ ತನಕ ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಬಿ.ಇಳಂಗೋವನ್ ತಿಳಿಸಿದರು.ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಆಯುಕ್ತರು (ಕರಕುಶಲ), ಜವಳಿ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ ಕಚೇರಿಯ ಪ್ರಾಯೋಜಕತ್ವದಲ್ಲಿ, ಜೆಎಸ್‌ಎಸ್ ಮೈಸೂರು…

Read More

ಕಬ್ಬು ಬೆಳೆಗಾರರ ಮುತ್ತಿಗೆ ಕಾರ್ಖಾನೆ ಗೇಟ್ ಮೇಲೇರಿ ಬನ್ನಾರಿ ಕಾರ್ಖಾನೆಗೆ ನುಗ್ಗಿದ ರೈತರು ; ಕಬ್ಬಿನ ಬಾಕಿ ಹಣ ವಸೂಲಿಗಾಗಿ ಆಗ್ರಹಿಸಿ ಪ್ರತಿಭಟನೆ

ನಂಜನಗೂಡು; ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವಂತೆ ನಂಜನಗೂಡು ತಾಲೂಕಿನ ಬನ್ನಾರಿ ಸಕ್ಕರೆ ಕಾರ್ಖಾನೆಗೆ ರೈತರು ಸೋಮವಾರ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.ಕಾರ್ಖಾನೆಯ ಮುಖ್ಯ ಗೇಟ್ ಬಾಗಿಲು ಮುಚ್ಚಿದ ಕಾರಣ ಗೇಟ್ ಮೇಲೇರಿ ಒಳ ನುಗ್ಗಿದ ರೈತರು ಕಾರ್ಖಾನೆ ಆಡಳಿತ ಕಚೇರಿ ಮುಂದೆ ಜಮಾಯಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಪ್ರತಿಭಟನೆಯ ನೇತೃತ್ವದ ವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ಮಾತನಾಡಿ, 1966 ಸಕ್ಕರೆ ನಿಯಂತ್ರಣ ಕಾಯ್ದೆ ಪ್ರಕಾರ, ಸಕ್ಕರೆ ಕಾರ್ಖಾನೆ ಆರಂಭಕ್ಕೂ ಮುನ್ನ…

Read More

ಮಾದಕ ವ್ಯಸನ ಮುಕ್ತ ಸಮಾಜಕ್ಕೆ ಯುವಪೀಳಿಗೆಯ ಸಹಕಾರ ಅಗತ್ಯ: ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮಾದಕ ವಸ್ತು ನಿರ್ಮೂಲನೆಗೆ ಕೇವಲ ಸರ್ಕಾರ ಮತ್ತು ಪೊಲೀಸರು ಮಾತ್ರ ಹೋರಾಟ ಮಾಡಿದರೆ ಸಾಲದು, ಯುವಪೀಳಿಗೆಯೂ ಸಹ ಸಹಕರಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಸೋಮವಾರ ಮೈಸೂರಿನ ನಗರ ಪೊಲೀಸ್ ಮತ್ತು ಟೆರಿಷಿಯನ್ ಕಾಲೇಜು ಎನ್.ಎಸ್.ಎಸ್ ಘಟಕ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡ್ರಗ್ಸ್ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಭವಿಷ್ಯವಿರುವುದು ಯುವ ಜನತೆಯಲ್ಲಿ, ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ದೃಢವಿದ್ದಾಗ ಮಾತ್ರ ನಮ್ಮ ದೇಶ ಯಶಸ್ಸು ಕಾಣಲು…

Read More

ಮೈಸೂರು ದಸರಾ ಮಹೋತ್ಸವಕ್ಕೆ 17 ಉಪಸಮಿತಿಗಳ ರಚನೆ: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ

• ಈ ಬಾರಿಯ ದಸರಾದಲ್ಲಿ ವಿಐಪಿಗಳಿಗೆ ಉಚಿತ ಗೋಲ್ಡ್ ಪಾಸ್ ಇಲ್ಲ!ಮೈಸೂರು: ಈ ಬಾರಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.ಸೋಮವಾರ ನಗರದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯ ಪ್ರಮುಖ ನಿರ್ಧಾರಗಳು ಹಾಗೂ ದಸರಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.ಈ…

Read More

ಗಿಡಗಳನ್ನು ನೆಡುವ ಮೂಲಕ ಕಾರ್ಗಿಲ್ ವಿಜಯ ದಿವಸ ಆಚರಣೆ

ಮೈಸೂರು; ಕಾರ್ಗಿಲ್ ವಿಜಯ ದಿವಸವನ್ನು ಇಂದು ಟೀಂ ಮೈಸೂರು ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರು, ಇಂದಿರಾನಗರ ಜೊತೆಗೂಡಿ ೪೦ ಗಿಡಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.ಇಟ್ಟಿಗೆಗೂಡಿನ ಮಕ್ಕಳ ಉದ್ಯಾನವನದಲ್ಲಿ ೪೦ ಗಿಡಗಳನ್ನು ನೆಟ್ಟು ವೀರ ಯೋಧರಿಗೆ ಗೌರವ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರನ್ನು ಸ್ಮರಿಸಲಾಯಿತು.ಈ ವೇಳೆ ಮಾತನಾಡಿದ ತಂಡದ ಮುಖಂಡ ಗೋಕುಲ್ ಗೋವರ್ಧನ್,ಯೋಧರು ದೇಶವನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿರುತ್ತಾರೆ, ಆದರೆ ದೇಶದ ಒಳಗೆ ಇರುವ ನಾಗರೀಕರು ಪರಿಸರ ಸಂರಕ್ಷಣೆ ಹಾಗೂ ಹಸಿರು…

Read More

ಶ್ರೀ ಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ವಿಶೇಷ ಸಾಂಸ್ಕöತಿಕ ಕಾರ್ಯಕ್ರಮ

ನಂಜನಗೂಡು; ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಶ್ರೀ ಕಂಠೇಶ್ವರ ಸ್ವಾಮಿ ದೇವಸ್ಥಾನ ನಂಜನಗೂಡು ಇವರ ಸಂಯುಕ್ತಾಶ್ರಯದಲ್ಲಿ ನಂಜನಗೂಡಿನ ಶ್ರೀಶ್ರೀ ಕಂಠೇಶ್ವರ ದೇವಸ್ಥಾನದ ದೇವಸ್ಥಾನದ ಆವರಣದಲ್ಲಿ ಕಲಾ ನಡಿಗೆ ನಿಮ್ಮ ಕಡೆಗೆ ಎಂಬ ವಿಶೇಷ ಸಾಂಸ್ಕöÈತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮೈಸೂರು ಗಾಯಕರಾದ ಅಮ್ಮ ರಾಮಚಂದ್ರ ಮತ್ತು ತಂಡವು ದೇವಸ್ಥಾನ ಆವರಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಸಂಗೀತದ ಹಿಂಪಿನ ಮೂಲಕ ಕಾರ್ಯಕ್ರಮಕ್ಕೆ ಮೆರಗನು ನೀಡಿತ್ತು. ಹಾಗೂ ಮೈಸೂರು ಚಾಮರಾಜನಗರ ಭಾಗದ ವಿಶೇಷ ಕಲೆಯಾಗದ ಕಂಸಾಳೆ ಕಲೆಯನ್ನು ಪುಟ್ಟಮಾದನಾಯಕ ಮತ್ತು ತಂಡವು…

Read More

ಕಾರ್ಗಿಲ್ ವಿಜಯ ದಿವಸ್ ಭಾರತೀಯರ ಅವೀಸ್ಮರಣಿಯ ದಿನ: ಮಾಜಿ ಸೈನಿಕ ಸಂಘದ ಅಧ್ಯಕ್ಷ ನರಸೇಗೌಡ 

ಪಿರಿಯಾಪಟ್ಟಣ: ಕಾರ್ಗಿಲ್ ವಿಜಯ ದಿವಸ್ ದೇಶ ಪ್ರೇಮ ಸಾರುವ ದೇಶದ ಹೆಮ್ಮೆಯ ಸಂಕೇತದ ದಿನವಾಗಿದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನರಸೇಗೌಡ ತಿಳಿಸಿದರು. ಪಟ್ಟಣದ ಜಿಜೆಸಿಪಿ ಶಾಲಾ ಆವರಣದಲ್ಲಿ  ಪಿರಿಯಾಪಟ್ಟಣ ತಾಲ್ಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಬೇದಾರ್ ಕೆ ಪಿ ಬೆಳ್ಳಿಯಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ನಮ್ಮ ದೇಶದ ಸೈನಿಕರು ಪಾಕಿಸ್ತಾನದ ವಿರುದ್ಧ ಶೌರ್ಯವನ್ನು ಮೆರೆದ ಈ ದಿನ ಮುಂದಿನ ಪೀಳಿಗೆಗೆ…

Read More