
ಸರ್ಕಾರ ಬರ ಪರಿಹಾರ ಘೋಷಿಸಲಿ
ಪಿರಿಯಾಪಟ್ಟಣ :ರೈತರು ಪ್ರತಿ ಹಳ್ಳಿಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದು ಪ್ರತಿ ಲೀಟರ್ ಹಾಲಿಗೆ 50 ರೂಪಾಯಿಯನ್ನು ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿ ಗಂಡತ್ತೂರು ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೋಕು ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು ಹಸುಗಳಿಗೆ ನೀಡುವ ಮೇವು, ಪಶು ಆಹಾರ ಸೇರಿತಂತೆ ಅಗತ್ಯ ವಸ್ತುಗಳ ಬೆಲೆ ಗಗನಕೇರಿದ್ದು ಹೈನೋದ್ಯಮಕ್ಕೆ ರೈತರಿಗೆ ನೀಡುತ್ತಿರುವ ಹಣ ಸಾಕಾಗುವುದಿಲ್ಲ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸರ್ಕಾರ ಹಾಲಿಗೆ ಪ್ರೋತ್ಸಾಹ ಧನ ಸೇರಿ 60 ನಿಗದಿ ಪಡಿಸಿವೆ ಕರ್ನಾಟಕ ಸರ್ಕಾರ ಮತ್ತು ಕೆ.ಎಂ.ಎಫ್. ಒಕ್ಕೂಟಗಳು ಸೇರಿದಂತೆ ಪ್ರತಿ ಲೀಟರ್ ಹಾಲಿಗೆ 50 ರೂಪಾಯಿಗಳನ್ನು ತಕ್ಷಣ ಜಾರಿಗೊಳಿಸಬೇಕು. ಮುಂಗಾರು ವೈಫಲ್ಯದಿಂದ ಬರದ ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ಭಾರತೀಯ ಕಿಸಾನ್ ಸಂಘ ಜಿಲ್ಲಾಧ್ಯಂತ ವಿವಿಧ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ರೈತರ ಮೂಲಕ ಬೃಹತ್ ಅಂಚೆ ಚಳುವಳಿ ಹಮ್ಮಿಕೊಂಡಿದ್ದು ಆಗಸ್ಟ್ 29 ರಂದು ಮೈಸೂರಿನ ಮುಖ್ಯ ಹಾಲು ಮಹಾಮಂಡಳಿಯ ಹತ್ತಿರ ಬೃಹತ್ ಚಳುವಳಿ ಹಮ್ಮಿಕೊಂಡಿದೆ ರೈತರೆಲ್ಲರೂ ಸಹಕರಿಸಬೇಕೆಂದು ಎಂದು ಹೇಳಿದರು .
ಜಿಲ್ಲಾ ಕೋಶಧ್ಯಕ್ಷ ಚಂದ್ರೆಗೌಡ ಪಿ. ಸಿ.ಮಾತನಾಡಿ ರೈತರಿಗೆ ಉತ್ತಮ ಮಳೆ ಇಲ್ಲದೆ ಬೆಳೆ ಇಲ್ಲದೆ ಸಂಕಷ್ಟದಲ್ಲಿದು ಮಾನ್ಯ ಮುಖ್ಯಮಂತ್ರಿಗಳು ತುರ್ತು ಬರ ಪರಿಹಾರ ಘೋಷಣೆಮಾಡಿ ಪ್ರತಿ ಎಕರೆಗೆ 50 ಸಾವಿರ ನಿಗದಿ ಮಾಡಬೇಕು.
ರೈತರು ಜೀವನ ಉಪಯೋಗಕ್ಕಾಗಿ ಈಗಾಗಲೇ ಬಿತ್ತನೆ ಬೀಜ, ಗೊಬ್ಬರ, ಉಳುಮೆ ಸೇರಿದಂತೆ ರೈತರು ವಿವಿಧ ಬ್ಯಾಂಕ್ ಗಳಲ್ಲಿ ಸಾಲಮಾಡಿದ್ದು ಈ ಸಾಲ ಕಟ್ಟಲಾಗದೆ ಅರ್ಥಿಕ ಕಷ್ಟದಲ್ಲಿದ್ದಾರೆ ಮುಖ್ಯಮಂತ್ರಿಗಳು ಬರಪರಿಹಾರ ನೀಡಬೇಕೆಂದು ಅಂಚೆ ಚಳುವಳಿಯ ಮೂಲಕ ಆಗ್ರಹಮಾಡಲಾಗುವುದು ಎಂದರು
ಈ ಸಂದರ್ಭದಲ್ಲಿ ತಾಲೋಕು ಅಧ್ಯಕ್ಷ ಕೃಷ್ಣೆಗೌಡ, ಉಪಾಧ್ಯಕ್ಷ ಶಿವಪ್ಪ ಮಗ್ಲಿ, ಜಯರಾಮೇಗೌಡ, ಸಿ.ಟಿ ರಾಮೇಗೌಡ, ಕಾರ್ಯದರ್ಶಿ ಗಣೇಶ್ ಮರಡಿಯೂರು, ಅರವೇಗೌಡ, ಬೋರೆಹೊಸಹಳ್ಳಿ ಸ್ವಾಮಿ, ಮಹಾದೇವ ನಾಯಕ ಆರ್ ತುಂಗಾ ಸೇರಿದಂತೆ ವಿವಿಧ ಗ್ರಾಮಗಳಿಂದ ರೈತರು ಹಾಜರಿದ್ದರು