
ಮೈಸೂರು: ತೋಟಗಾರಿಕಾ ಪಿತಾಮಹಡಾ. ಎಂ. ಹೆಚ್. ಮರಿಗೌಡಅವರಜನ್ಮದಿನದ ಅಂಗವಾಗಿ ಐಸಿಎಆರ್–ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಐಸಿಎಆರ್–ಐಐಎಚ್ಆರ್ಕೇಂದ್ರೀಯತೋಟಗಾರಿಕಾ ಪ್ರಾಯೋಗಿಕಕೇಂದ್ರ, ಚೆಟ್ಟಹಳ್ಳಿ, ತೋಟಗಾರಿಕಾ ಇಲಾಖೆ, ಮೈಸೂರು ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ), ಮೈಸೂರು ಇವರ ಸಹಯೋಗದಲ್ಲಿರಾಷ್ಟ್ರೀಯತೋಟಗಾರಿಕಾ ದಿನಾಚರಣೆ ಹಾಗೂ ಬೆಣ್ಣೆಹಣ್ಣಿನಕ್ಷೇತ್ರೋತ್ಸವವನ್ನು ಶುಕ್ರವಾರ ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರುನಲ್ಲಿರುವ ಕೃಷಿ ವಿಜ್ಞಾನಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಕೃಷಿ ಜಂಟಿ ನಿರ್ದೇಶಕ Àಡಾ. ವಿಷಕಂಠ , ಇತ್ತೀಚಿನ ದಿನಗಳಲ್ಲಿ ಬೆಣ್ಣೆಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೆಚ್ಚುತ್ತಿದ್ದು, ಇದು ರೈತರಿಗೆ ಹೆಚ್ಚಿನ ಆದಾಯ ತಂದು ಕೊಡುವ ತೋಟಗಾರಿಕಾ ಬೆಳೆಯಾಗಿ ಹೊರಹೊಮ್ಮಿದೆ. ಆದರೆ ಮಾರುಕಟ್ಟೆಯ ಅಗತ್ಯತೆ, ಸೂಕ್ತ ತಳಿಗಳ ಆಯ್ಕೆ, ವೈಜ್ಞಾನಿಕ ಬೇಸಾಯ ಪದ್ಧತಿ ಹಾಗೂ ಗುಣಮಟ್ಟದ ಸಸಿಗಳ ಬಳಕೆಗೆ ಹೆಚ್ಚಿನಆದ್ಯತೆ ನೀಡಬೇಕು. ವೈಜ್ಞಾನಿಕ ಮಾರ್ಗದರ್ಶನದೊಂದಿಗೆ ಬೆಳೆ ಬೆಳೆದರೆ ಮಾತ್ರ ಉತ್ತಮ ಉತ್ಪಾದನೆ ಮತ್ತು ಸ್ಥಿರ ಆದಾಯ ಗಳಿಸಲು ಸಾಧ್ಯವಾಗುತ್ತದೆಎಂದು ಹೇಳಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ತೋಟಗಾರಿಕಾ ನಿರ್ದೇಶಕ ಶಿವಶಂಕರಪ್ಪ ಮಾತನಾಡಿ, ತೋಟಗಾರಿಕಾ ಪಿತಾಮಹಡಾ. ಎಂ. ಹೆಚ್. ಮಾರಿಗೌಡರ ಜೀವನ ಸಾಧನೆ, ಕರ್ನಾಟಕದಲ್ಲಿ ತೋಟಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿದ ಅಪಾರ ಕೊಡುಗೆ ಹಾಗೂ ಅವರೊಂದಿಗೆ ಕಾರ್ಯನಿರ್ವಹಿಸಿದ ಸಂದರ್ಭಗಳ ಅನುಭವವನ್ನು ಹಂಚಿಕೊAಡರು. ಮರಿಗೌಡ ಅವರ ದೂರದೃಷ್ಟಿಯ ಫಲವಾಗಿ ರಾಜ್ಯದಲ್ಲಿ ಹಲವಾರು ವಾಣಿಜ್ಯ ತೋಟಗಾರಿಕಾ ಬೆಳೆಗಳು ಜನಪ್ರಿಯವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿಎಆರ್–ಜೆಎಸ್ಎಸ್ ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದಡಾ. ಜ್ಞಾನೇಶ್ ಬಿ. ಎನ್. ಮಾತನಾಡಿ, ಬೆಣ್ಣೆಹಣ್ಣು ಬೆಳೆಯು ಭವಿಷ್ಯದಲ್ಲಿ ಉತ್ತಮ ವ್ಯವಹಾರಿಕಬೆಳೆಯಾಗಿ ಬೆಳೆಯುವ ಸಾಧ್ಯತೆಗಳಿದ್ದು, ರೈತರು ಗುಣಮಟ್ಟದ ಸಸಿಗಳನ್ನು ನೆಟ್ಟು, ಸಮಗ್ರ ಬೆಳೆ ನಿರ್ವಹಣೆ ಅಳವಡಿಸಿಕೊಂಡು ಹೆಚ್ಚಿನ ಆದಾಯ ಗಳಿಸಬೇಕು ಎಂದು ತಿಳಿಸಿದರು.
ನಂಜನಗೂಡು ಸಹಾಯಕತೋಟಗಾರಿಕಾ ನಿರ್ದೇಶಕÀ ಚಂದ್ರು ಮಾತನಾಡಿದರು,
ತಾಂತ್ರಿಕ ಅಧಿವೇಶನದಲ್ಲಿ ಐಸಿಎಆರ್–ಐಐಎಚ್ಆರ್, ಚೆಟ್ಟಹಳ್ಳಿಯ ವಿಜ್ಞಾನಿ ಡಾ. ಮುರಳೀಧರ ಅವರು ಬೆಣ್ಣೆಹಣ್ಣಿನಇತಿಹಾಸ, ತೋಟಗಾರಿಕಾ ಪಿತಾಮಹಡಾ. ಎಂ. ಹೆಚ್. ಮಾರಿಗೌಡ ಅವರುಕರ್ನಾಟಕದಲ್ಲಿ ಈ ಬೆಳೆಯನ್ನು ಜನಪ್ರಿಯಗೊಳಿಸಿದ ಹಿನ್ನೆಲೆ, ವಿವಿಧ ತಳಿಗಳು, ಮೌಲ್ಯವರ್ಧನೆ, ಪೌಷ್ಟಿಕ ಮಹತ್ವ, ಸಮಗ್ರ ಪೋಷಕಾಂಶ ನಿರ್ವಹಣೆ, ನೀರಾವರಿ ವ್ಯವಸ್ಥೆ, ಸಮಗ್ರಕೀಟ ಮತ್ತುರೋಗ ನಿರ್ವಹಣೆ, ಕೊಯ್ಲಿನ ನಂತರದ ನಿರ್ವಹಣೆ ಹಾಗೂ ದೇಶೀಯ ಮತ್ತುರಫ್ತು ಮಾರುಕಟ್ಟೆಯ ಅವಕಾಶಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಡಾ. ನಯನ್ ದೀಪಕ್ಅವರು ಬೆಣ್ಣೆಹಣ್ಣಿನ ಸಸ್ಯೋತ್ಪಾದನೆ, ಕಸಿ ತಯಾರಿಕೆ, ಗುಣಮಟ್ಟದ ನರ್ಸರಿ ನಿರ್ವಹಣೆ, ಪ್ರಮಾಣಿತ ಸಸಿಗಳ ಉತ್ಪಾದನೆ ಹಾಗೂ ನರ್ಸರಿಉದ್ಯಮದ ಮೂಲಕ ರೈತರು ಮತ್ತುಯುವ ಉದ್ಯಮಿಗಳು ಹೆಚ್ಚುವರಿಆದಾಯ ಗಳಿಸುವ ಅವಕಾಶಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ರವೀಂದ್ರ, ನಿವೃತ್ತ ಉಪಕುಲಪತಿ ಡಾ. ವಿಶ್ವನಾಥ್, ಡಾ. ವಿನಯ್ ಜಿ. ಎಂ.,ಡಾ. ಪ್ರಸಾದ್, ಡಾ. ದೀಪಕ್, ಡಾ. ರಕ್ಷಿತ್, ದಿವ್ಯಾ, ಶಾಮರಾಜ್, ಕೃಷಿ ವಿಜ್ಞಾನಕೇಂದ್ರದ ಸಿಬ್ಬಂದಿ, ತೋಟಗಾರಿಕಾಇಲಾಖೆಯ ಅಧಿಕಾರಿಗಳು, ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರು ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 120ಕ್ಕೂ ಹೆಚ್ಚು ರೈತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.