Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಾಣ್ಯಶಾಸ್ತ್ರ ಪ್ರವೀಣ ಡಾ.ಎ.ವಿ.ನರಸಿಂಹ ಮೂರ್ತಿ ನಿಧನ

ಮೈಸೂರು: ನಾಣ್ಯಶಾಸ್ತ್ರ ದಲ್ಲಿ ಪರಿಣತರಾಗಿದ್ದ ಡಾ.ಎ.ವಿ.ನರಸಿಂಹ ಮೂರ್ತಿ (ಅಲಂಬಡ ವೆಂಕಟಶಾಸ್ತಿç ನರಸಿಂಹ ಮೂರ್ತಿ) ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.ಅವರಿಗೆ 91ವರ್ಷ ವಯಸ್ಸಾಗಿತ್ತು. ಪತ್ನಿ ಕಮಲಾಂಬಾ, ಪುತ್ರ ನಗರದ ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಎ.ಎನ್. ಸಂತೋಷಕುಮಾರ್ ಹಾಗೂ ಪುತ್ರಿ ಅಮೆರಿಕದಲ್ಲಿರುವ ಡಾ.ಸವಿತಾ ಇದ್ದಾರೆ.ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಫುಲ್ ಬ್ರೆöÊಟ್ ಸ್ಕಾಲರ್ ಶಿಪ್ ಪಡೆದು ಸಂಶೋಧನೆ ನಡೆಸಿದ್ದರು. ಆಂಧ್ರ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದ ಅವರು…

Read More

ತ್ರಿಮತಸ್ಥ ಎಂಬ ಬೇದ ಮರೆತು, ಬ್ರಾಹ್ಮಣರೆಲ್ಲಾ ಒಂದಾಗಲು ಕರೆ

*ವಿಪಿಎಫ್ ಪದಾಧಿಕಾರಿಗಳ ಪದಗ್ರಹಣ, ವಿಪ್ರರತ್ನ ಪ್ರಶಸ್ತಿ ಪ್ರದಾನಮೈಸೂರು; ತ್ರಿಮತಸ್ಥರು ಎಂಬ ಭಿನ್ನತೆಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಮುನ್ನಡೆದರೆ ವಿಪ್ರ ಸಮಾಜದ ಶಕ್ತಿ ಹಲವು ಪಟ್ಟು ಹೆಚ್ಚಲಿದೆ. ಈ ಶಕ್ತಿ ಕೇವಲ ಸಮುದಾಯದ ಒಳಿತಿಗೆ ಸೀಮಿತವಾಗದೆ ಸಮಾಜಕ್ಕೆ ಬಳಕೆಯಾಗಲಿ ಎಂಬ ಸಂದೇಶ ವಿಪ್ರ ಪ್ರೊಫೆಷನಲ್ ಫೋರಂ(ವಿಪಿಎಫ್)ನ ಹತ್ತು ವರ್ಷಗಳ ಪಯಣ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಧ್ವನಿಸಿತು.ನಗರದ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ವಿಪ್ರ ಪ್ರೊಫೆಷನಲ್ ಫೋರಂ ಆಯೋಜಿಸಿದ್ದ ಸಮಾರಂಭದಲ್ಲಿ ವಿಪಿಎಫ್ ಮಾಜಿ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್ ಮಾತನಾಡಿ,…

Read More

ನಿನಾದ ಗೃಹ ಸಂಗೀತದಲ್ಲಿ ಪಂಡಿತ್ ಎಂ.ಪಿ. ಹೆಗಡೆ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ

ಮೈಸೂರು: ನಗರದ ಕೇರ್ಗಳ್ಳಿಯಲ್ಲಿ ನಡೆಯುವನಿನಾದ ಗೃಹ ಸಂಗೀತ ಕಛೇರಿ ಸರಣಿಯ 18ನೆಯ ಕಾರ್ಯಕ್ರಮ ಆಗಸ್ಟ್ 16 ರಂದು, ಭಾನುವಾರ ಸಂಜೆ 6 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗ್ವಾಲಿಯರ್ ಘರಾಣೆಯ ಹಿರಿಯ ಸಂಗೀತಗಾರ ಪಂ.ಎA.ಪಿ. ಹೆಗಡೆ ಪಡಿಗೆರೆ ಇವರಿಂದ ಹಿಂದೂಸ್ತಾನಿ ಶಾಸ್ತಿçÃಯ ಗಾಯನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ತಬಲಾದಲ್ಲಿ ಭೀಮಾಶಂಕರ್ ಬಿದನೂರ್ ಹಾಗೂ ಹಾರ್ಮೋನಿಯಂನಲ್ಲಿ ಪಂ. ವೀರಭದ್ರಯ್ಯ ಹಿರೇಮಠ ಅವರುಗಳು ಸಹಕರಿಸಲಿದ್ದಾರೆ. ಕೇರ್ಗಳ್ಳಿಯನಿನಾದ ಸಂಗೀತ ಶಾಲೆ’ಯ ವಿದ್ಯಾರ್ಥಿ ಬಳಗದ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ…

Read More

ಅಪರಿಚಿತ ವಾಹನದ ಹಿಟ್ ಅಂಡ್ ರನ್‌ಗೆ ಇಬ್ಬರು ಸಾವು

ಹನೂರು ; ಅಪರಿಚಿತ ವಾಹನದ ಹಿಟ್ ಅಂಡ್ ರನ್‌ಗೆ ಇಬ್ಬರು ಸಾವಿಗೀಡಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಯುವರಾಜ್ (50) ಮತ್ತು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಎ ಕೋಡಹಳ್ಳಿ ಗ್ರಾಮದ ಶಶಾಂಕ್ (25) ಮೃತಪಟ್ಟವರು. ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು ಸ್ಥಳದಲ್ಲೇ ಇಬ್ಬರು ಸವಾರರು ಕೊನೆಯುಸಿರೆಳೆದಿದ್ದಾರೆ.ಸುದ್ದಿ ತಿಳಿದ ತಕ್ಷಣ ರಾಮಪುರ ಠಾಣೆ ಪೊಲೀಸರು ಸ್ಥಳಕ್ಕೆ…

Read More

ಕಾಡಾನೆ ದಾಳಿಯಿಂದ ಅರಣ್ಯ ವೀಕ್ಷಕ ಸಾವು

ಹನೂರು; ಕಾಡಾನೆ ದಾಳಿಯಿಂದ ಅರಣ್ಯ ವೀಕ್ಷಕ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಪೊನ್ನಾಚಿ ಅರಣ್ಯ ವಲಯದ ಹುಣಸೆಬಯಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ನಿವಾಸಿ ಮಹಾದೇವಸ್ವಾಮಿ (48) ಮೃತ ದುರ್ದೆÊವಿ. ಇವರು ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಅರಣ್ಯ ವೀಕ್ಷಕರಾಗಿ ಸುಮಾರು 20 ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಹುಣಸೆಬಯಲು ಅರಣ್ಯ ಪ್ರದೇಶದ ಕಳ್ಳ ಬೇಟೆ ತಡೆ ಶಿಬಿರದಲ್ಲಿದ್ದ ವೇಳೆ ಆನೆ ಶಬ್ದ ಕೇಳಿ ಹೊರಬಂದಾಗ ದಿಢೀರನೇ ಕಾಡಾನೆ…

Read More

ವಿಶ್ವ ಕರ್ಮ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಮೈಸೂರು: ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯಿಂದ ಆ. 16ರಂದು ಮೈಸೂರಿನ ಜಗನ್ನೋಹನ ಅರಮನೆ ಸಭಾಂಗಣದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕೆ. ಕೆಂಡಗಣ್ಣ ವಿಶ್ವಕರ್ಮ ತಿಳಿಸಿದರು.ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ನಡೆಯುವ ಈ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಗಳಿಸಿದ ಮೈಸೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ 230…

Read More

ಅ. 12ರಂದು ‘ಜಾನಕಿ ನಮನ’ ಸಂಗೀತ ಕಾರ್ಯಕ್ರಮ

ಮೈಸೂರು: ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಮತ್ತು ಚಿರಾಗ್ ಇವೆಂಟ್ಸ್ ಸಹಯೋಗದಲ್ಲಿ ಅ. 12ರಂದು ನಗರದ ವಿನೋಬಾರಸ್ತೆಯ ಕಲಾಮಂದಿರದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನೆನಪಿನಲ್ಲಿ ‘ಜಾನಕಿ ನಮನ’ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗಾಯಕ ಸುಚೇತನ್ ರಂಗಸ್ವಾಮಿ ತಿಳಿಸಿದರು.ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಎಸ್.ಜಾನಕಿ ಅವರು ಹಾಡಿರುವ ಜನಪ್ರಿಯ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಾಗುವುದು. 20ಕ್ಕೂ ಹೆಚ್ಚು ಪಕ್ಕವಾದ್ಯ ಸಂಗೀತ ಕಲಾವಿದರು. 50ಕ್ಕೂ ಹೆಚ್ಚು…

Read More

ಎಐ ತಂತ್ರಜ್ಞಾನ ಬಳಸಿಕೊಂಡು ಗ್ರಂಥಾಲಯ ಸೇವೆ ವೇಗ ಹೆಚ್ಚಿಸಿ: ಡಾ.ಈ.ಸಿ.ನಿಂಗರಾಜ್ ಗೌಡ

ಮೈಸೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಂಥಾಲಯದ ಸೇವೆಗಳನ್ನು ವೇಗವಾಗಿ, ಸುಲಭವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನೀಡಬೇಕು ಎಂದು ಮೈಲಿಸಾ ಅಧ್ಯಕ್ಷ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.ನಗರದ ಮಾನಸಗಂಗೋತ್ರಿಯ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಎಐ ಬಳಸಿಕೊಂಡು ಗ್ರಂಥಾಲಯ ಸೇವೆ ಒದಗಿಸುವ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಕಾಲಕ್ಕೆ ತಕ್ಕಂತೆ ನಾವು ಗ್ರಂಥಾಲಯದ ಸೇವೆಗಳನ್ನು ಉತ್ತಮ ಪಡಿಸಬೇಕು. ಓದುಗರ ಕೈಗೆ ಸುಲಭವಾಗಿ ಸಿಗುವಂತೆ ಮಾಡ ಬೇಕು. ಕೃತಕ ಬುದ್ದಿಮತ್ತೆ ತಂತ್ರಜ್ಞಾನ…

Read More

ಟೀಂ ಮೈಸೂರು ಹಸಿರು ಮೈಸೂರು ಅಭಿಯಾನಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಚಾಲನೆ

ಮೈಸೂರು; ಟೀಂ ಮೈಸೂರು ವತಿಯಿಂದ ಹಸಿರು ಮೈಸೂರು’ ಅಭಿಯಾನದ ಅಂಗವಾಗಿ ನಗರದ ಗನ್ ಹೌಸ್ ಎದುರಿನಿಂದ ಪ್ರಾರಂಭಗೊಳ್ಳುವ ನಂಜನಗೂಡು ರಸ್ತೆಯಲ್ಲಿ ವಿವಿಧ ಜಾತಿಯ 31 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಟೀಂ ಮೈಸೂರು ತಂಡವು ಕಳೆದ ಹಲವು ವರ್ಷಗಳಿಂದ ಮೈಸೂರು ನಗರದಲ್ಲಿ ಹಲವು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಅದರಲ್ಲೂಹಸಿರು ಮೈಸೂರು’ ಅಭಿಯಾನವನ್ನು ಅತ್ಯಂತ ಶಿಸ್ತುಬದ್ಧವಾಗಿ ಹಾಗೂ…

Read More

ನಾನು ಕಿಕ್ ಬ್ಯಾಕ್ ಪಡೆದಿದ್ದರೆ ತನಿಖೆ ಮಾಡಲಿ. ನನ್ನನ್ನಾಗಲಿ, ದೇವೇಗೌಡರನ್ನಾಗಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಮೈಸೂರು: ನಾನು ಕಿಕ್ ಬ್ಯಾಕ್ ಪಡೆದಿದ್ದರೆ ತನಿಖೆ ಮಾಡಲಿ. ನನ್ನನ್ನಾಗಲಿ, ದೇವೇಗೌಡರನ್ನಾಗಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದರು.ಭಾನುವಾರ ಬೆಳಗ್ಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಅವರು, ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಬಳಿಕ ಡಿಎಲ್‌ಎಫ್ ಕಂಪನಿಯಿAದ ಕಿಕ್ ಬ್ಯಾಕ್ ಪಡೆದಿದ್ದಾರೆ’ ಎಂಬ ತಮ್ಮ ವಿರುದ್ಧದ ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ‘ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿಗೂ, ಪ್ರಧಾನಿಯಾಗಲು ಹೊರಟಿರುವ ದೆಹಲಿಯ ವ್ಯಕ್ತಿಗೂ-ಡಿಎಲ್‌ಎಫ್‌ಗೂ ಸಂಬAಧವೇನು ಎಂಬುದನ್ನು ಹೇಳಲಿ,…

Read More