Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ತ್ರಿಮತಸ್ಥ ಎಂಬ ಬೇದ ಮರೆತು, ಬ್ರಾಹ್ಮಣರೆಲ್ಲಾ ಒಂದಾಗಲು ಕರೆ


*ವಿಪಿಎಫ್ ಪದಾಧಿಕಾರಿಗಳ ಪದಗ್ರಹಣ, ವಿಪ್ರರತ್ನ ಪ್ರಶಸ್ತಿ ಪ್ರದಾನ
ಮೈಸೂರು;
ತ್ರಿಮತಸ್ಥರು ಎಂಬ ಭಿನ್ನತೆಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಮುನ್ನಡೆದರೆ ವಿಪ್ರ ಸಮಾಜದ ಶಕ್ತಿ ಹಲವು ಪಟ್ಟು ಹೆಚ್ಚಲಿದೆ. ಈ ಶಕ್ತಿ ಕೇವಲ ಸಮುದಾಯದ ಒಳಿತಿಗೆ ಸೀಮಿತವಾಗದೆ ಸಮಾಜಕ್ಕೆ ಬಳಕೆಯಾಗಲಿ ಎಂಬ ಸಂದೇಶ ವಿಪ್ರ ಪ್ರೊಫೆಷನಲ್ ಫೋರಂ(ವಿಪಿಎಫ್)ನ ಹತ್ತು ವರ್ಷಗಳ ಪಯಣ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಧ್ವನಿಸಿತು.
ನಗರದ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ವಿಪ್ರ ಪ್ರೊಫೆಷನಲ್ ಫೋರಂ ಆಯೋಜಿಸಿದ್ದ ಸಮಾರಂಭದಲ್ಲಿ ವಿಪಿಎಫ್ ಮಾಜಿ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಬೇಕೆಂಬ ಆಲೋಚನೆಯಿಂದ ವಿಪಿಎಫ್ ಆರಂಭವಾಯಿತು. ನಾವು ತ್ರಿಮತಸ್ಥರು ಎಂದು ಹೇಳಿಕೊಂಡು ಮೂರು ಭಾಗಗಳಾಗಿ ವಿಭಜನೆಯಾಗದೆ, `ವಿಪ್ರರು'' ಎಂಬ ಗುರುತಿನಲ್ಲಿ ಒಂದಾಗಬೇಕು. ವಿಪ್ರ ಎಂದರೆ ಒಂದು ಗುರುತಲ್ಲ, ಒಂದು ಶಕ್ತಿ,ಒಂದು ತಂಡವಾಗಿದ್ದು, ಪರಸ್ಪರ ಗೌರವ, ಸಹಕಾರದೊಂದಿಗೆ ಎಲ್ಲರೂ ಮುನ್ನಡೆಯುವ ಮೂಲಕ ಈ ಪಯಣವನ್ನು ಇಡೀ ಕರ್ನಾಟಕಕ್ಕೆ ಕೊಂಡೊಯ್ಯುವ ಸಂಕಲ್ಪದಿAದ ಸಾಗೋಣ ಎಂದು ಕರೆ ನೀಡಿದರು. ಚಿತ್ರ ನಟ ವಸಿಷ್ಠ ಸಿಂಹ ಮಾತನಾಡಿ, ತ್ರಿಮತಸ್ಥ ಬ್ರಾಹ್ಮಣ ಪರಂಪರೆಗಳಲ್ಲಿ ಭಿನ್ನ ತತ್ವಚಿಂತನೆಗಳಿದ್ದರೂ, ಸನಾತನ ಧರ್ಮದ ಸಂರಕ್ಷಣೆ, ಮುಂದಿನ ಪೀಳಿಗೆಗೆ ಪರಂಪರೆಯನ್ನು ಕೊಂಡೊಯ್ಯುವ ಉದ್ದೇಶ ಒಂದೇ ಆಗಿದೆ. ಆದ್ದರಿಂದ ಭಿನ್ನತೆಗಳನ್ನು ಗೌರವಿಸುತ್ತಾ ಎಲ್ಲರೂ ಒಟ್ಟಾಗಿ ಸಾಗಬೇಕು. ದತ್ತಾತ್ರೇಯ ಸ್ವಾಮಿ ಮೂರು ಮುಖಗಳು ಮೂರು ಗುರುಪರಂಪರೆಗಳ ಏಕತೆಯ ಪ್ರತೀಕವಾಗಿವೆ. ಶಂಕರ, ರಾಮಾನುಜ ಮತ್ತು ಮಧ್ವರ ಪರಂಪರೆಗಳನ್ನು ಏಕರೂಪದಲ್ಲಿ ನೋಡಬೇಕು. ಒಗ್ಗಟ್ಟಿನಲ್ಲಿ ಶಕ್ತಿಯಿದೆ, ಒಗ್ಗಟ್ಟಿನಲ್ಲಿ ನಮ್ಮ ಭವಿಷ್ಯವಿದೆ ಎಂದು ಹೇಳಿದರು. ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು, ವೃತ್ತಿಪರರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಸಮುದಾಯದ ಬಲವರ್ಧನೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೇ ಮರಳಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಧುನಿಕ ಶಿಕ್ಷಣದ ಜತೆಗೆ ಯುವ ಪೀಳಿಗೆಗೆ ಸಂಸ್ಕöÈತಿ ಮತ್ತು ಪರಂಪರೆಯ ಜ್ಞಾನವನ್ನು ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದಸ್ವಾಮಿ ಮಾತನಾಡಿ, ವಿಪ್ರರು ತಮ್ಮ ಸಮುದಾಯದ ಹಿತದ ಜೊತೆಗೆ ಇಡೀ ಸಮಾಜದ ಹಾಗೂ ವಿಶ್ವದ ಒಳಿತಿಗಾಗಿ ಚಿಂತಿಸುವವರು. ವಿಭಿನ್ನ ಆಚಾರ-ವಿಚಾರಗಳಿದ್ದರೂನಾವೆಲ್ಲರೂ ವಿಪ್ರರು’ ಎಂಬ ಏಕತೆಯ ಭಾವನೆಯಿಂದ ಮುನ್ನಡೆಯಬೇಕು. ವಿಪ್ರ ಸಮಾಜದ ಶಕ್ತಿ ಹೆಚ್ಚಬೇಕಾದರೆ ಧರ್ಮಾನುಷ್ಠಾನ, ಸಂಘಟನೆ ಮತ್ತು ಸೇವೆ ಈ ಮೂರನ್ನೂ ಅಳವಡಿಸಿಕೊಳ್ಳಬೇಕು. ಸಮುದಾಯದ ಯಾರೇ ಸಂಕಷ್ಟದಲ್ಲಿದ್ದರೂ ಅವರು ಸಹಾಯ ಕೇಳುವವರೆಗೆ ಕಾಯದೆ, ಅವರ ಅಗತ್ಯವನ್ನು ಗುರುತಿಸಿ ನೆರವಿನ ಹಸ್ತ ಚಾಚಬೇಕು. ಮಕ್ಕಳ ಶಿಕ್ಷಣ, ಆರ್ಥಿಕ ಸಂಕಷ್ಟ ಸೇರಿದಂತೆ ಅಗತ್ಯವಿರುವವರಿಗೆ ಸಾಧ್ಯವಾದಷ್ಟು ನೆರವು ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ವಿಪ್ರರತ್ನ ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಮುದಾಯದ ಸಾಧಕರಿಗೆ ವಿಪ್ರರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನುಪಮಾ ಬಿ. ಪಂಡಿತ್(ಶಿಕ್ಷಣ), ವೇದಬ್ರಹ್ಮ ಡಾ.ಎನ್. ಶಶಿಶೇಖರ ದೀಕ್ಷಿತ್(ಧಾರ್ಮಿಕ), ವಸಿಷ್ಠ ಸಿಂಹ(ಸಿನಿಮಾ), ವಿದ್ವಾನ್ ಆರ್.ಎಸ್. ನಂದಕುಮಾರ್ (ಸಂಗೀತ), ಕುಂದೂರು ಉಮೇಶ್ ಭಟ್(ಮಾಧ್ಯಮ), ನಾರಾಯಣ ಕೆ.ಭಟ್(ಅಡುಗೆ), ನಿತಿನ್ ರಾಜಾರಾಮ್ ಶಾಸ್ತಿç(ಗಾಯನ), ಪಂಡಿತ್ ಅನಿರುದ್ದಾಚಾರ್ಯ ಪಾಂಡುರAಗಿ(ಆಧ್ಯಾತ್ಮಿಕ), ಡಾ. ಕೆ.ಎಲ್. ಶಂಕರ ನಾರಾಯಣ ಜೋಯಿಸ್(ಗುರುಕುಲ), ವಿದೂಷಿ ಡಾ. ಕೃಪಾ ಫಡ್ಕೆ(ಭರತನಾಟ್ಯ), ಡಾ. ಎನ್. ಚಂದ್ರಶೇಖರ್(ವೈದ್ಯಕೀಯ), ತ್ರಿವಿಕ್ರಮ್ ನಾಗೇಶ್ (ಉದ್ಯಮ), ಡಾ. ಶೆಲ್ವಪಿಳ್ಳೆöÊ ಅಯ್ಯಂಗಾರ್(ಇತಿಹಾಸ), ಎಚ್. ರಾಮಚಂದ್ರ (ಸಮುದಾಯ) ಹಾಗೂ ಎ.ಪಿ. ಚಂದ್ರಶೇಖರ(ನೈಸರ್ಗಿಕ ಕೃಷಿ) ಅವರಿಗೆ ವಿಪ್ರರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಪದಾಧಿಕಾರಿಗಳ ಪದಗ್ರಹಣ:
ಇದಕ್ಕೂ ಮುನ್ನ ವಿಪ್ರ ಪ್ರೊಫೆಷನಲ್ ಫೋರಂನ 2026-28ನೇ ಸಾಲಿನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ನಿಟಕಪೂರ್ವ ಅಧ್ಯಕ್ಷರಾದ ಶ್ರೀಹರಿ ದ್ವಾರಕನಾಥ್ ಅವರು, ನೂತನ ಅಧ್ಯಕ್ಷ ಡಾ. ಎಸ್.ಮುರುಳಿ ಅವರಿಗೆ ದಂಡ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಇವರೊಂದಿಗೆ ಉಪಾಧ್ಯಕ್ಷರಾಗಿ ಎ. ಸುಧೀಂದ್ರ, ಕೆ.ಆರ್. ಸತ್ಯನಾರಾಯಣ, ಕೆ.ಆರ್. ಪ್ರಭಾಕರ ರಾವ್, ಕಾರ್ಯದರ್ಶಿ ಆರ್. ಮಂಜುನಾಥ್ ಶ್ರೀವತ್ಸ, ಖಜಾಂಚಿ ಸಿಎ ಎಸ್. ಅಚ್ಯುತ, ಜಂಟಿ ಕಾರ್ಯದರ್ಶಿ ಎಸ್. ಶ್ರೀನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎ. ಅಮೋಘ ಅಪ್ರಮೇಯ, ಎಚ್.ಎಸ್. ಅಶ್ವಿನಿ ಶಂಕರ್, ಎಚ್.ಎನ್. ಚಂದ್ರಶೇಖರ್, ಡಾ. ಹನುಮಂತ ಜೋಶಿ, ಡಾ. ವೈ. ಕಾರ್ತಿಕ್ ಪಂಡಿತ್, ಜಿ.ಎಸ್. ಗಣೇಶ್, ಎಸ್. ಹರ್ಷ, ಕೆ.ಎಸ್. ಶಿವಶಂಕರ್, ಎಚ್.ಆರ್. ಕೇಶವ, ಎನ್.ಆರ್. ಮಂಜುನಾಥ್, ಆರ್. ಮುರುಳಿ ಮೋಹನ್,ಡಿ.ನಾರಾಯಣ್, ಎ.ಆರ್. ರಘುರಾಮ್. ಎಂ.ಆರ್. ರೂಪಶ್ರೀ, ಸಮರ್ಥ್ ವೈದ್ಯ, ಸಿ.ಎಸ್. ಸತ್ಯಪ್ರಕಾಶ್, ಶಿವಪ್ರಸಾದ್, ಶ್ರೀರಾಮ್ ದ್ವಾರಕನಾಥ್ ಅವರು ವಿಪಿಎಫ್ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ನಾಗರಾಜ್, ಕೌಸ್ತುಭ, ಸುವ್ಯಕ್ತ ಹಾಗೂ ಧನುಷ್, ವಿಪಿಎಫ್ ಉಪಾಧ್ಯಕ್ಷ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.