
ಮೈಸೂರು: ನಗರದ ಕೇರ್ಗಳ್ಳಿಯಲ್ಲಿ ನಡೆಯುವನಿನಾದ ಗೃಹ ಸಂಗೀತ ಕಛೇರಿ ಸರಣಿಯ 18ನೆಯ ಕಾರ್ಯಕ್ರಮ ಆಗಸ್ಟ್ 16 ರಂದು, ಭಾನುವಾರ ಸಂಜೆ 6 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗ್ವಾಲಿಯರ್ ಘರಾಣೆಯ ಹಿರಿಯ ಸಂಗೀತಗಾರ ಪಂ.ಎA.ಪಿ. ಹೆಗಡೆ ಪಡಿಗೆರೆ ಇವರಿಂದ ಹಿಂದೂಸ್ತಾನಿ ಶಾಸ್ತಿçÃಯ ಗಾಯನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ತಬಲಾದಲ್ಲಿ ಭೀಮಾಶಂಕರ್ ಬಿದನೂರ್ ಹಾಗೂ ಹಾರ್ಮೋನಿಯಂನಲ್ಲಿ ಪಂ. ವೀರಭದ್ರಯ್ಯ ಹಿರೇಮಠ ಅವರುಗಳು ಸಹಕರಿಸಲಿದ್ದಾರೆ. ಕೇರ್ಗಳ್ಳಿಯನಿನಾದ ಸಂಗೀತ ಶಾಲೆ’ಯ ವಿದ್ಯಾರ್ಥಿ ಬಳಗದ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ 9449676014ನ್ನು ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.