
ಮೈಸೂರು: ನಾಣ್ಯಶಾಸ್ತ್ರ ದಲ್ಲಿ ಪರಿಣತರಾಗಿದ್ದ ಡಾ.ಎ.ವಿ.ನರಸಿಂಹ ಮೂರ್ತಿ (ಅಲಂಬಡ ವೆಂಕಟಶಾಸ್ತಿç ನರಸಿಂಹ ಮೂರ್ತಿ) ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
ಅವರಿಗೆ 91ವರ್ಷ ವಯಸ್ಸಾಗಿತ್ತು. ಪತ್ನಿ ಕಮಲಾಂಬಾ, ಪುತ್ರ ನಗರದ ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಎ.ಎನ್. ಸಂತೋಷಕುಮಾರ್ ಹಾಗೂ ಪುತ್ರಿ ಅಮೆರಿಕದಲ್ಲಿರುವ ಡಾ.ಸವಿತಾ ಇದ್ದಾರೆ.
ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಫುಲ್ ಬ್ರೆöÊಟ್ ಸ್ಕಾಲರ್ ಶಿಪ್ ಪಡೆದು ಸಂಶೋಧನೆ ನಡೆಸಿದ್ದರು. ಆಂಧ್ರ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದ ಅವರು ಉದ್ಯೋಗ ಆರಂಭಿಸಿದ್ದು ಪುರಾತತ್ವ ಇಲಾಖೆಯಲ್ಲಿ. ನಂತರ ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಫೆಲೊ ಆಗಿ ಅವರನ್ನು ಮೈಸೂರು ವಿಶ್ವವಿದ್ಯಾನಿಲಯ ಮುಂದುವರೆಸಿತು. ಯುಜಿಸಿಯ ಹಿರಿಯ ಎಮಿರೆಟ್ಸ್ ಆಗಿದ್ದ ಅವರ ಬಳಿ 48 ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದರು. ಅಲ್ಲದೆ ದಕ್ಷಿಣ ಭಾರತ ಮತ್ತು ಭಾರತದ ನಾಣ್ಯ ಶಾಸ್ತ್ರ ಮಂಡಳಿ ಅಧ್ಯಕ್ಷರಾಗಿದ್ದರು.
ರಾಷ್ಟçಕವಿ ಗೋವಿಂದ ಪೈ ಪುರಸ್ಕಾರ, ಎ.ಎಸ್.ಅಲಸ್ಕರ್ ಚಿನ್ನದ ಪದಕ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಪುರಾತತ್ವ ರತ್ನ ಪ್ರಶಸ್ತಿ ಪುರಸ್ಕöÈತರಾಗಿದ್ದರು.
ಬೆಂಗಳೂರಿನಲ್ಲಿ ನಡೆದ ಮೂರನೆಯ ರಾಜ್ಯ ನಾಣ್ಯಶಾಸ್ತç ಸಮ್ಮೇಳನ ಹಾಗೂ ವಾರಣಾಸಿಯಲ್ಲಿ ನಡೆದ 70ನೇ ನಾಣ್ಯಶಾಸ್ತç ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಮೈಸೂರಿನ ಭಾರತೀಯ ವಿದ್ಯಾಭವನದ ಅಧ್ಯಕ್ಷರಾಗಿ 20 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ್ದರು.
ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಹರಿಶ್ಚಂದ್ರ ಘಾಟ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ