Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿವಿಧ ಸಂಘ, ಸಂಸ್ಥೆಗಳಿ0ದ ಕರ್ನಾಟಕ ಬಂದ್‌ಗೆ ಪರೋಕ್ಷ ಬೆಂಬಲ; ಮೌನ ಪ್ರತಿಭಟನೆ


ಮೈಸೂರು; ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಆ.13 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಪರೋಕ್ಷ ಬೆಂಬಲವನ್ನು ವ್ಯಕ್ತಪಡಿಸಿರುವ ನಗರದ ವಿವಿಧ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.
ಬುಧವಾರ ನಗರದ ಕೋಟೆ ಆಂಜನೇಯ ಸ್ವಾಮಿ ಮುಂಭಾಗವಿರುವ ರಾಜಕುಮಾರ್ ಪಾರ್ಕ್ ನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗು ವಿದ್ಯಾರ್ಥಿ ಒಕ್ಕೂಟಗಳ ಸಹಯೋಗದೊಂದಿಗೆ ಸಭೆ ಸೇರಿ, ಕರ್ನಾಟಕ ಬಂದ್ ವಿಚಾರವಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಆ.13 ರ ಬಂದ್‌ಗೆ ಪರೋಕ್ಷ ಬೆಂಬಲ ನೀಡಲು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್‌ಗೌಡ, ಆ.13ರ ಬಂದ್ ಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸುವ ಮೂಲಕ, ರಾಜ್ಯ ಸರ್ಕಾರವು ಎಲ್ಲಾ ಕನ್ನಡ ಸಂಘ-ಸAಸ್ಥೆಗಳನ್ನು ತಾಳ್ಮೆಯಿಂದ ಇರುವಂತೆ, ಎಲ್ಲ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ತೆಗೆದುಕೊಳ್ಳುತ್ತೇವೆ ಎಂಬ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಗುರುವಾರದ ಬಂದ್ ನಲ್ಲಿ ಕನ್ನಡಪರ ಸಂಘಟನೆಗಳು ಕೈಕಟ್ಟಿ, ಬಾಯಿ ಮುಚ್ಚಿ ಮೌನವಹಿಸಿ, ಒಂದು ಗಂಟೆಗಳ ಕಾಲ ಆರ್.ಗೇಟ್ ವೃತ್ತದಲ್ಲಿ ಸಾಂಕೇತಿಕವಾಗಿ ನಿದ್ರಾ ವ್ಯವಸ್ಥೆಗೆ ಜಾರುವ ಮೂಲಕ ವಿನೂತನ ಪ್ರತಿಭಟನೆ ಮಾಡಿ, ರಾಜ್ಯ ಸರ್ಕಾರದ ಕಾರ್ಯ ಚಟುವಟಿಕೆಗಳನ್ನ ಗಮನಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುವ ನಿರ್ಣಯವನ್ನು ಕೈಗೊಂಡರು,
ಈ ಸಭೆಯಲ್ಲಿ ವಿವಿಧ ಸಂಘ, ಸಂಸ್ಥೆಗಳ ಮುಖಂಡರುಗಳಾದ ದ್ಯಾವಪ್ಪನಾಯಕ, ಟಿ.ರವಿಗೌಡ, ಮಹದೇವಸ್ವಾಮಿ, ಮಂಡಕಳ್ಳಿ ಚಾಮರಾಜು, ಬೋಗಾದಿ ಸಿದ್ದೇಗೌಡ, ಟಿ ರವೀಂದ್ರ, ಗೋವಿಂದರಾಜು, ಲಾಲಾಬೀದಿ ರವಿ, ವಕೀಲ ಡಿ.ಆರ್.ಕರಿಗೌಡ, ಅರುಣ್ ಕುಮಾರ್, ಬಿ.ಮಹದೇವ, ಮೂಗೂರು ನಂಜುAಡಸ್ವಾಮಿ, ಎಸ್.ಸಿದ್ದಪ್ಪ, ಬಸವರಾಜು, ಜೆ.ಉಮೇಶ, ಕೆ.ಜಿ.ಕೊಪ್ಪಲ್ ಶಂಕರ್, ಮಿಲ್ಕ್ ಮಂಜು, ಸಂಜಯ್, ಮದನ್, ಮಹೇಶ್ ಕುಮಾರ್, ತೇಜಸ್ವಿ, ವಿಷ್ಣು, ಡಿಪಿಕೆ ಪರಮೇಶ್, ಎಂ.ಹರೀಶ್, ರಾಜಶೇಖರ್.ಬಿ.ಬಿ, ಎಸ್‌ನಾಗೇಶ್ ಯಾದವ್, ಜೆ.ಮಂಜುನಾಥ್, ಮೈನಾ ಲೋಕೇಶ್, ಪಾಲಹಳ್ಳಿ ರಾಮಕೃಷ್ಣ, ಎಸ್ ಬಾಲಕೃಷ್ಣ, ಎಂ.ರಮೇಶ, ಕೆ.ಮುಕುಂದ್, ಜಿ.ಪ್ರಕಾಶ್, ಎಂ.ವಿ.ಶ್ರೀನಿವಾಸಮಿತ್ರ, ಮಂಜುನಾಥ, ಆರ್.ಶ್ರೀನಿವಾಸ್, ಪ್ಯಾಲೇಸ್ ಬಾಬು, ಎಸ್.ವಿ.ಶಿವನಾಯಕ, ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.