
ಚಾಮುಂಡಿಬೆಟ್ಟದಲ್ಲಿ ಅನ್ನದಾಸೋಹ ನಡೆಸಲು ಬಂದ ಉದ್ಯಮಿ ಮೇಲೆ ಪೊಲೀಸರು, ನೌಕರರಿಂದ ದಬ್ಬಾಳಿಕೆ;
ಮೈಸೂರು; ಆಷಾಢ ಮಾಸದ ಕೊನೆಯ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಕಳೆದ ಐದು ವರ್ಷಗಳಿಂದ ಅನ್ನ ದಾಸೋಹ ಮಾಡುತ್ತಿರುವ ತನ್ನೊಂದಿಗೆ ಅಲ್ಲಿನ ದೇವಸ್ಥಾನದ ಅಧಿಕಾರಿಗಳು, ನೌಕರರು, ಪೊಲೀಸರು ನಡೆದುಕೊಂಡ ಅನ್ಮಚಿತ ವರ್ತನೆ, ದೌರ್ಜನ್ಯ, ದಬ್ಬಾಳಿಕೆಗಳು ನನಗೆ ತೀವ್ರ ನೋವುಂಟು ಮಾಡಿದೆ ಎಂದು ಬೆಂಗಳೂರಿನ ಜಿ. ಕೆ. ಫೌಂಡೇಷನ್ ಮುಖ್ಯಸ್ಥರಾದ ಉದ್ಯಮಿ ಮಹೇಶ್ ಜಿ ಬೇಸರ ವ್ಯಕ್ತಪಡಿಸಿದರು.
ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಪ್ರತಿ ವರ್ಷ ಆಷಾಢ ಮಾಸದ ನಾಲ್ಕನೇ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಅನ್ನದಾನ ಮಾಡುತ್ತಿದ್ದೇನೆ, ಇದಕ್ಕಾಗಿ ವಾರ್ಷಿಕವಾಗಿ ಸುಮಾರು 30 ಲಕ್ಷ ರೂ. ವೆಚ್ಚ ಮಾಡುತ್ತಿದ್ದೇನೆ. ಆದರೆ ಈ ಬಾರಿ ಅನ್ನದಾನಕ್ಕಾಗಿ ಆಗಮಿಸಿದ್ದ ತಮ್ಮ ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಈ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವ್ಯವಸ್ಥೆ ಸರಿಯಿಲ್ಲ ಎಂಬ ಕಾರಣಕ್ಕೆ ನೋವಾಗಿದೆ ಎಂದು ಪ್ರಾಧಿಕಾರದ ಹಾಗೂ ಪೊಲೀಸ್ ಇಲಾಖೆಯ ಆಡಳಿತದ ವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ,
ದಾಸೋಹದ ಹಿಂದಿನ ದಿನ ಪ್ರಾಧಿಕಾರದವರು ‘ನಾಳೆ ಬೆಳಗ್ಗೆ ನೀವು 5 ಗಂಟೆಗೆ ಬನ್ನಿ ನಿಮಗೆ ವಾಹನ ಅನುಮತಿ ಮತ್ತು ದರ್ಶನದ ವ್ಯವಸ್ಥೆಯನ್ನು ನಾವು ಮಾಡಿಕೊಡುತ್ತೇವೆ’ ಎಂದು ಹೇಳಿದ್ದರು. ಅದರಂತೆ ನಾವು ತಾವರೆಕಟ್ಟೆಗೆ ಬಂದಾಗ ಪೊಲೀಸರು ನಾಕಾಬಂಧಿ ಹಾಕಿದ್ದು ನಮ್ಮ ಗಾಡಿಯನ್ನು ತಡೆದು ನಿಲ್ಲಿಸಿರು. ಆಗ ನಾವು ಪೊಲೀಸರಿಗೆ ‘ನಾವು ಇಂದು ದಾಸೋಹ ಸೇವೆ ನಡೆಸುವವರು ಪ್ರಾಧಿಕಾರದವರು ಈ ಸಮಯದಲಿ, ಬರಲು ಹೇಳಿದ್ದರು’ ಎಂದು ಎಷ್ಟೇ ಮನವರಿಕೆ ಮಾಡಿದರು, 30 ನಿಮಿಷ ತಡೆದು ನಿಲ್ಲಿಸಿದರು. ನಂತರ ಒಬ್ಬ ಪೊಲೀಸ್ ಬಂದು ನಿಮ್ಮ ಗಾಡಿಯ ಅನುಮತಿ ಇದೆ ಎಂದು ಹೇಳಿ ಒಳಗಡೆ ಬಿಟ್ಟರು. ಮಹಿಷಾಸುರ ಮೂರ್ತಿ ಇರುವ ಜಾಗಕ್ಕೆ ಬಂದಾಗ ಅಲ್ಲಿ ಪೊಲೀಸರು ನಮ್ಮನ್ನು ತಡೆದು ನಿಲ್ಲಿಸುತ್ತಾರೆ, ಆಗ ಆ ಸ್ಥಳಕ್ಕೆ ಪ್ರಾಧಿಕಾರದ ಕಾರ್ಯದರ್ಶಿ ರೂಪ, ನಮ್ಮ ಕುಟುಂಬದ ಸದಸ್ಯರ ಎದುರಿಗೆ ನನಗೆ ಅವಮಾನ ಮಾಡಿದರು. ನಂತರ ನಮ್ಮ ಜೊತೆ ಬಂದವರೆಲ್ಲ 2000 ರೂ ಟಿಕೇಟ್ ತೆಗೆದು ತಾಯಿಯ ದರ್ಶನ ಮಾಡಿದರು.
ಅನ್ನದಾಸೋಹ ನಡೆಯುವ ಸಂದರ್ಭದಲ್ಲಿ ಬೆಳೆಗೆ 7 ರಿಂದ 8 ಗಂಟೆಯ ಸುಮಾರಿಗೆ ಎರಡು ಜನ ನಮ್ಮ ಅನುಮತಿ ಇಲ್ಲದೆ ನಮ್ಮ ಪಾಕ ಶಾಲೆಗೆ ನುಗ್ಗಿ ನಾವು ತಯಾರಿಸಿದ ಉಪಹಾರವನ್ನು ದೊಡ್ಡ ಪಾತ್ರೆಗಳಲ್ಲಿ ತುಂಬಿಸುತಿದ್ದರು. ಪ್ರಶ್ನಿಸಿದ್ದಕ್ಕೆ ಮೇಲ್ವಿಚಾರಕನ ಮೇಲೆ ಕೈಮಾಡಲು ಪ್ರಯತ್ನಿಸಿದರು, ರಘು ಎಂಬ ಪೊಲೀಸ್ ಪೇದೆ ನಮ್ಮ ಕಾರ್ಯಕರ್ತರ ಮೇಲೆ ದರ್ಪ ತೋರಿಸಿ, ದಬ್ಬಾಳಿಕೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಹಿರಿಯ ಪೊಲೀಸ್ ಅಧಿಕಾರಿ ನನ್ನ ಮಗನ ಮೇಲೆ ಕೈ ಮಾಡಿ ದೂಡಿರುತ್ತಾರೆ, ಆಗ ಅಲ್ಲಿದ್ದ ಸ್ಥಳೀಯ ಪತ್ರಕರ್ತರು ಮತ್ತು ಭಕ್ತಾಧಿಗಳು ಹಿರಿಯ ಪೊಲೀಸ್ ಅಧಿಕಾರಿ ಮತ್ತು, ಪೊಲೀಸರನ್ನು ತರಾಟೆಗೆ ತೆಗೆದು ಕೊಂಡರು. ಮನನೊಂದ ನನ್ನ ಮಗ ನನಗೆ ದರ್ಶನ ಬೇಡ. ನಾನು ಇಲಿಂದಲೇ ತಾಯಿಗೆ ಕೈ ಮುಗಿಯುತ್ತೇನೆ ಎಂದು ಹೇಳಿ ಕಣ್ಣೀರಿಟ್ಟು ಹೊರ ಬಂದನು.
ಈ ವರ್ಷ ನಮಗೆ ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ರೂಪ ರವರು ಮತ್ತು ಸಿಬ್ಬಂದಿಗಳು ಈ ತರಹದ ಅವಮಾನ ಮತ್ತು ಪೊಲೀಸರು ನಮ್ಮ ಮೇಲೆ ತೋರಿದ ದರ್ಪ ದಬ್ಬಾಳಿಕೆಯನ್ನು ತಾಯಿ ಚಾಮುಂಡೇಶ್ವರಿಗೆ ನೋಡಿಕೊಳ್ಳಬೇಕು ಎಂದು ಹೇಳಿದರು.