
ಮೈಸೂರು; ದೇಶದ ಪ್ರತಿಯೊಬ್ಬರ ಮನ, ಮನಗಳಲ್ಲಿ ದೇಶಭಕ್ತಿಯ ತರಂಗ ಪುಟಿದೇಳಬೇಕೆಂದು ಮೈಸೂರು ಗ್ರಾಮಾಂತರ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಕರೆಯಂತೆ, ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಗುರುವಾರ ತಮ್ಮ ಪುತ್ರಿ ಜೊತೆಗೂಡಿ ಅವರ ಸ್ವಗೃಹದಲ್ಲಿ ಅತ್ಯಂತ ಹೆಮ್ಮೆ ಮತ್ತು ದೇಶಭಕ್ತಿಯ ಭಾವದಿಂದ ರಾಷ್ಟçಧ್ವಜವನ್ನು ಹಾರಿಸಿ, ದೇಶಭಕ್ತಿಯ ಗೌರವ ಮೆರೆದರು.
ಬಳಿಕ ಮಾತನಾಡಿದ ಅವರು, ದೇಶದ ಮನೆ , ಮನೆಯಲ್ಲೂ ರಾಷ್ಟç ಧ್ವಜ’ ಅಭಿಯಾನ ನಡೆಯುತ್ತಿದೆ. ನಡೆಯಲೇಬೇಕು. ಪ್ರತಿಯೊಬ್ಬ ಭಾರತೀಯನಲ್ಲಿ ಭಾರತದ ಬಗ್ಗೆ ಭಕ್ತಿ, ಸ್ವಾಭಿಮಾನ ಮತ್ತು ಒಗ್ಗಟ್ಟಿನ ನವ ಚೈತನ್ಯವನ್ನು ಮೂಡಿಸುತ್ತದೆ. ನಮ್ಮ ತ್ರಿವರ್ಣ ಧ್ವಜ ಭಾರತೀಯರ ಅಸ್ಮಿತೆ, ಸ್ವಾತಂತ್ರ÷್ಯ ಪ್ರೇಮ. ಅದಕ್ಕಾಗಿ ಹೋರಾಡುವ ಬದ್ಧತೆ, ಕೋಟ್ಯಂತರ ದೇಶಭಕ್ತರ ತ್ಯಾಗ, ಬಲಿದಾನಗಳು, ಭಾರತದ ಸಾಧನೆಯ ಹಿರಿಮೆ ಗರಿಮೆಗಳ ಹೆಮ್ಮೆಯ ಪ್ರತೀಕವಾಗಿ ರಾರಾಜಿಸುತ್ತಿದೆ ಎಂದು ಹೇಳಿದರು.
ನಮ್ಮ ನಮ್ಮ ಮನೆಗಳ ಮೇಲೆ ಹೆಮ್ಮೆಯಿಂದ ರಾಷ್ಟçಧ್ವಜವನ್ನು ಹಾರಿಸೋಣ, ವಿಕಸಿತ ರಾಷ್ಟç ನಿರ್ಮಾಣದೆಡೆಗೆ ನಮ್ಮ ಪ್ರಾಮಾಣಿಕ ಕರ್ತವ್ಯಗಳ ನಿರ್ವಹಣೆಯ ಸಂಕಲ್ಪ ತೊಡೋಣ, ಮಾತೃಭೂಮಿಯ ಸೇವೆಗೆ ಸಮರ್ಪಿಸಿಕೊಳ್ಳುವ ದೃಢನಿಶ್ಚಯ ತಾಳೋಣ, ಸ್ವಾತಂತ್ರೋತ್ಸವವನ್ನು ಸಂಭ್ರಮಿಸುವ ನಮ್ಮ ರಾಷ್ಟಿçÃಯ ಹಬ್ಬದಲ್ಲಿ ಭಾಗಿಯಾಗೋಣ ಎಂದು ಕರೆ ನೀಡಿದರು.