
ಮೈಸೂರು; ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಶ್ರಾವಣ ಮಾಸ ಅತ್ಯಂತ ಪ್ರಶಸ್ತವಾದುದು ಎಂದು ಮೈಸೂರು ಉಪ ಪೊಲೀಸ್‌ಆಯುಕ್ತರಾದ ಡಾ.ಹರ್ಷ ಪ್ರಿಯಂವದ ಹೇಳಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದ್ದ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರಾವಣ ಮಾಸ ಭಾರತೀಯರಿಗೆ ಅತ್ಯಂತ ವಿಶೇಷವಾದ ತಿಂಗಳು.ನಾನು ಮೂಲತಃ ಜಾರ್ಖಾಂಡ್‌ನವಳಾಗಿದ್ದು ಅಲ್ಲಿಯೂ ಕೂಡ ಈ ಮಾಸವನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಉತ್ಸಾಹಗಳಿಂದ ಆಚರಿಸಲಾಗುತ್ತದೆ.ಭಾರತೀಯರಲ್ಲಿ ಸಂಸ್ಕೃತಿ, ಪರಂಪರೆಮತ್ತು ಆಚರಣೆಗಳಲ್ಲಿ ಭಿನ್ನತೆಗಳು ಕಂಡುಬAದರೂ ಎಲ್ಲರ ಗುರಿ ಒಂದೇ ಆಗಿದೆ.ಅದು ಭಗವಂತನಲ್ಲಿ ಶರಣಾಗತಿಯನ್ನು ಹೊಂದುವುದಾಗಿದೆ.ನಮ್ಮಲ್ಲಿರುವ ಕೆಟ್ಟ ಆಲೋಚನೆಗಳನ್ನು ತೊಡೆದು ಹಾಕಿ, ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳಲು ಈ ಮಾಸ ಸಹಾಯಕವಾಗಲಿದೆ ಎಂದು ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಮಾತನಾಡಿ, ಮನುಷ್ಯ ಇಂದು ಒತ್ತಡದ ಜೀವನದಲ್ಲಿ ಜೀವಿಸುತ್ತಿದ್ದಾನೆ. ಅದರಿಂದ ಹೊರಬರಲು ಶ್ರಾವಣ ಮಾಸದಲ್ಲಿ ಆಯೋಜಿಸುವ ಇಂತಹ ಪ್ರವಚನಗಳು ಸಹಕಾರಿಯಾಗಿಲಿವೆ. ಮಠಗಳು ಮಾಡುವ ಇಂತಹ ಕಾರ್ಯಕ್ರಮಗಳು ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಧ್ಯಾನ, ಆಧ್ಯಾತ್ಮಿಕತೆ ಹಾಗೂ ಭಕ್ತಿಯ ಭಾವನೆಗಳನ್ನು ದೈನಂದಿನ ಜೀವನದಲ್ಲಿ ಅವಳವಡಿಸಿಕೊಳ್ಳಬೇಕು. ಶ್ರಾವಣ ಮಾಸ ಮುಂದಿನ ಯೋಜನೆಗಳಿಗೆ ಮತ್ತು ಉತ್ತಮ ಸಿದ್ಧಿ ಸಾಧನೆಗೆ ಅತ್ಯಂತ ಪವಿತ್ರವಾದುದಾಗಿದೆ.ಇಂತಹ ಸತ್ಸಂಗಗಳು ನನಗೂ ಸಹ ಸಾಕಷ್ಟು ಮನೋಬಲವನ್ನು ನೀಡಿವೆ. ಧೈರ್ಯದಿಂದ ಕರ್ತವ್ಯವನ್ನು ನಿರ್ವಹಿಸಲು ಅನುಕೂಲವಾಗಿವೆ ಎಂದರು.
ಮೇಲುಕೋಟೆ ಶ್ರೀ ವಂಗೀಪುರ ನಂಬಿ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ, ಒಳ್ಳೆಯದನ್ನು ಕೇಳಿದರೆ ಒಳ್ಳೆಯದೇ ಆಗುತ್ತದೆ.ಮಾಸ ಪೂರ್ತಿ ಇಲ್ಲಿ ಆಲಿಸುವ ಮಾತುಗಳನ್ನು ಮನನ ಮಾಡಬೇಕು ಮತ್ತು ಅವನ್ನು ಜೀವನದಲ್ಲಿ ಅಳವಡಿಸಿಕೊಂಡು, ಅದರಂತೆ ನಡೆಯಬೇಕು.ಸುತ್ತೂರು ಶ್ರೀಮಠ ಮಾಡುವಇಂತಹ ಕಾರ್ಯಗಳು ಸಾರ್ವಕಾಲಿಕವಾದುವು ಎಂದು ಹೇಳಿದರು.
ಡಾ. ಕೆ.ಅನಂತರಾಮು ಮಾತನಾಡಿ, ಶ್ರಾವಣಕ್ಕೂ-ಶ್ರವಣಕ್ಕೂ ಅವಿನಾಭಾವ ಸಂಬAಧವಿದೆ.ಈ ಮಾಸದಲ್ಲಿ ಸದ್ವಿಚಾರಗಳ ಚಿಂತನೆ ಮಾಡಿದರೆ ಸಾಲದು, ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು.ಸುಸಂಸ್ಕೃತರಾಗಿ ಬೆಳೆಯಲು ಇಂತಹ ಸತ್ಸಂಗಗಳು, ಪ್ರವಚನಗಳು ನಡೆಯುತ್ತಲೇಇರಬೇಕು.ಇದರಿಂದಚಿತ್ತಶುದ್ಧಿಯಾಗುತ್ತದೆ ಮತ್ತುಏಕಾಗ್ರತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಇಂದು ಪೀಳಿಗೆಯಿಂದ ಪೀಳಿಗೆಗೆ ಬುದ್ಧಿ ಬೆಳೆಯುತ್ತಿದೆ. ಆದರೆ ವಿವೇಕ ಬೆಳೆಯುತ್ತಿಲ್ಲ. ಶಾಲಾ-ಕಾಲೇಜುಗಳಲ್ಲಿ ಸರಿಯಾದ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಇಂದಿನ ಮಕ್ಕಳು ಕೇವಲ ಅಂಕದಾಹಕ್ಕೆ ಸಿಲುಕಿದ್ದಾರೆ.ಯುವಜನರುಇಂತಹ ಪ್ರವಚನ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದರು. ಬದುಕು ಉತ್ತಮ ಮೌಲ್ಯಗಳಿಂದ ರೂಪುಗೊಳ್ಳಬೇಕು.ಶ್ರಾವಣ ಮಾಸ ಭಕ್ತಿಯ ಬೀಜಗಳನ್ನು ಬಿತ್ತುವ ಕಾಲ.ಯಾವುದೇ ಕಾರ್ಯವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ನಿರಂತರವಾಗಿ ಮಾಡುವುದೇ ಅನುಷ್ಠಾನ. ಅಂತಹ ಅನುಷ್ಠಾನ ಶ್ರೀಮಠದಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.ಪೂಜ್ಯಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಅದಕ್ಕೆ ಸಾವಿರಪಟ್ಟು ವೇಗವನ್ನು ನೀಡಿದ್ದಾರೆಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ.ಮೊರಬದ ಮಲ್ಲಿಕಾರ್ಜುನ, ಎನ್.ಆರ್.ಶಿವಕುಮಾರ್, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.