Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಾಲ್ಮೀಕಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಆಗಬೇಕು; ಸಚಿವ ಡಾ.ಯತೀಂದ್ರಸಿದ್ದರಾಮಯ್ಯ


ರಾಮಕೃಷ್ಣನಗರ ಐ ಬ್ಲಾಕ್‌ನಲ್ಲಿ ಶ್ರೀಮಹರ್ಷಿ ವಾಲ್ಮೀಕಿ ನಾಯಕ ಚಾರಿಟಬಲ್ ಟ್ರಸ್ಟ್ ಕಚೇರಿ ಉದ್ಘಾಟನೆ
ಮೈಸೂರು:
ವಾಲ್ಮೀಕಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಆಗಬೇಕು. ಇತರೆ ಸಮಾಜಗಳಂತೆ ವಾಲ್ಮೀಕಿ ಸವಾಜಕೂಡ ಸರ್ವತೋಮುಖ ಅಭಿವೃದ್ಧಿ ಆಗಬೇಕಿದೆ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರಸಿದ್ದರಾಮಯ್ಯ ಹೇಳಿದರು.
ಭಾನುವಾರ ಮೈಸೂರಿನ ರಾಮಕೃಷ್ಣನಗರ ಐ ಬ್ಲಾಕ್‌ನ ವಾಸು ಬಡಾವಣೆಯಲ್ಲಿ ನೂತನವಾಗಿ ಶ್ರೀಮಹರ್ಷಿ ವಾಲ್ಮೀಕಿ ನಾಯಕ ಚಾರಿಬಟಲ್ ಟ್ರಸ್ಟ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ನಾಯಕರಾಗುವ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಸಾವಾಜಿಕ ಶೈಕ್ಷಣಿಕ ಆರ್ಥಿಕವಾಗಿ ತೀರಾ ಹಿಂದುಳಿದಿದೆ.ಅದಕ್ಕಾಗಿ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು. ನಾಯಕ ಸಮಾಜದ ಬಗ್ಗೆ ನನಗೆ ಗೊತ್ತಿದೆ. ಶಿಕ್ಷಣ ಪಡೆದಷ್ಟು ಸರ್ಕಾರಿ ಕೆಲಸಗಳನ್ನು ಪಡೆಯಬಹುದು. ಮುಂದಿನ ದಿನಗಳಲ್ಲಿ ಉನ್ನತಮಟ್ಟದ ಸ್ಥಾನಗಳನ್ನು ಅಲಂಕರಿಸಬೇಕಾದರೆ ಶಿಕ್ಷಣವೇ ಮುಖ್ಯವಾಗಿದೆ ಎಂದರು.
ಸಾಮಾಜಿಕ,ಶೈಕ್ಷಣಿಕ,ಆರ್ಥಿಕವಾಗಿ ನಾಯಕ ಸಮಾಜ ಮುಂದುವರಿಯುವAತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ನಮ್ಮ ತಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಐದು ಎಕರೆ ಜಾಗವನ್ನು ಮಂಜೂರು ಮಾಡಿದ್ದರು. ಈ ಐದು ಎಕರೆ ಜಮೀನನ್ನು ದುರಸ್ತಿಪಡಿಸಿ ಶೀಘ್ರದಲ್ಲೇ ಹಸ್ತಾಂತರ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮಾಜದ ಮುಖಂಡರೊAದಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು 25 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದ್ದು, ಅದು ಕೂಡ ಯಾವ ಹಂತದಲ್ಲಿ ಇದೆ ಎಂಬುದನ್ನು ಪರಿಶೀಲಿಸಿ ತಕ್ಷಣವೇ ಬಿಡುಗಡೆ ವಾಡಲು ಗಮನಹರಿಸಲಾಗುವುದು. ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕೋಚಿಂಗ್ ಸೆಂಟರ್ ಸ್ಥಾಪಿಸಲು ಮುಂದಾಗಿರುವುದು ಸರಿಯಾಗಿದೆ ಎಂದರು. ಹಿರಿಯ ಮುಖಂಡ ಎಸ್.ಸಿ. ಬಸವರಾಜು ಅವರಿಗೆ ಅಧಿಕಾರ ಸಿಕ್ಕಿದರೆ ನನಗೆ ತುಂಬಾ ಸಂತೋಷ ಆಗಲಿದೆ ಎಂದರು.
ವರುಣ ಕ್ಷೇತ್ರದ ಬಹುತೇಕ ಕಾರ್ಯಕ್ರಮಗಳ ಹೊಣೆಯನ್ನು ಅವರೇ ನೋಡಿಕೋಳ್ಳುವ ಕಾರಣ, ನನಗೆ ಬಲ ಮತ್ತು ಶಕ್ತಿ ಸಿಗಲಿದೆ. ಸಾಮಾಕ ನ್ಯಾಯದಂತೆ ಎಲ್ಲರಿಗೂ ಅವಕಾಶ ಕೊಡಬೇಕು.ಅದೇ ರೀತಿ ಬಸವರಾಜು ಅವರು ಹಿರಿಯರಾಗಿರುವ ಕಾರಣ ಪರಿಷತ್‌ಸ್ಥಾನಕ್ಕೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿದ್ದರಾಜು ವಾತನಾಡಿ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸಿದ್ದರಾಮಯ್ಯ ಅವರು ಹತ್ತು ಎಕರೆ ಜಮೀನು ಮಂಜೂರು ಮಾಡಿದರೂ, ಜಿಲ್ಲಾಡಳಿತದಿಂದ 5ಎಕರೆ ಮಾತ್ರ ಮಂಜೂರು ಮಾಡಲು ಅವಕಾಶವಿದೆ ಎನ್ನುವ ಮಾತನ್ನಾಡಿ ಸವಾಜಕ್ಕೆ ಐದು ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. 25 ಕೋಟಿ ರೂಪಾಯಿ ಕೊಡಲು ಒಪ್ಪಿಗೆ ನೀಡಿದ್ದು,ತಕ್ಷಣವೇ ಮಂಜೂರು ಮಾಡಿಕೊಡಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಶಾಸಕ ಅನಿಲ್ ಚಿಕ್ಕವಾದು ಅವರಿಗೆ ಸಚಿವ ಸ್ಥಾನವನ್ನು ಕೊಡಬೇಕು. ಬಿಜೆಪಿಯಿಂದ ನಾನು ಮತ್ತು ಜಾ.ದಳದಿಂದ ಎಸ್. ಚಿಕ್ಕವಾದು ಅವರಿಗೆ ಪರಿಷತ್ ಸದಸ್ಯರನ್ನಾಗಿ ಅವಕಾಶ ನೀಡಲಾಗಿತ್ತು. ಅದೇ ರೀತಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿದ್ದಾಗ ಜಿಪಂ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.ಹಾಗಾಗಿ,ಮುಂದೆ ತೆರವಾಗುವ ಐದು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಎಸ್.ಬಸವರಾಜು ಅವರಿಗೆ ನೀಡಬೇಕು ಎಂದು ಸಮಾಜದ ಪರವಾಗಿ ಯತೀಂದ್ರ ಅವರಿಗೆ ಬೇಡಿಕೆ ಇಟ್ಟರು.
ಟ್ರಸ್ಟ್ ಕಾರ್ಯದರ್ಶಿ ದೇವರಾಜ ಟಿ.ಕಾಟೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೈಸೂರು, ಚಾಮರಾಜನಗರ, ಮಂಡ್ಯ,ಕೊಡಗು,ಹಾಸನ ಜಿಲ್ಲೆಗಳಲ್ಲಿ ವಾಲ್ಮೀಕಿ ನಾಯಕ ಸಮಾಜದ ಯಾವುದೇ ಟ್ರಸ್ಟ್ ರಚನೆಯಾಗಿರಲಿಲ್ಲ.ಇದೀಗ ಒಂದು ಟ್ರಸ್ಟ್ ರಚನೆ ಮಾಡಿ ಈಗ ಸವಾಜದ ಸಂಘಟನೆ ಮಾಡಲು ಕಚೇರಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಸರ್ಕಾರ ಹಾಗೂ ನಗರಾಭಿವೃದ್ದಿ ಸಚಿವರು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್, ಶಾಸಕರಾದ ಅನಿಲ್‌ಚಿಕ್ಕಮಾದು, ಟಿ.ಎಸ್.ಶ್ರೀವತ್ಸ, ದರ್ಶನ್ ಧ್ರುವನಾರಾಯಣ್, ಎಚ್.ಎಂ.ಗಣೇಶ್ ಪ್ರಸಾದ್,ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಮಾಜಿ ಮೇಯರ್ ಶಿವಕುಮಾರ್, ಮಾಜಿ ಸದಸ್ಯ ಲೋಕೇಶ್ ಪಿಯಾ, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ, ತಲಕಾಡು ಮಂಜುನಾಥನ್, ಟ್ರಸ್ಟ್ ಅಧ್ಯಕ್ಷ ಬಿ.ಶಿವಣ್ಣ, ಖಜಾಂಚಿ ಸುರೇಶ್‌ಬಾಬು,ಡಾ.ಜಿ.ಪ್ರಶಾಂತನಾಯಕ, ಡಾ.ಬಿ.ನಂಜುAಡಸ್ವಾಮಿ, ಜಿ.ಶ್ರೀನಿವಾಸ್,ಎ.ಆರ್.ರಾಜನಾಯಕ, ವೈ.ಪಿ.ಜಗದೀಶ್ ಮೂರ್ತಿ, ನಿಂಗರಾಜು, ಕೆ.ಎನ್.ಅಶೋಕ್, ಕೆ.ಎಂ.ಕುಮಾರ್, ರಾಜಶೇಖರ್, ಎನ್.ಹರೀಶ್, ಶಿವಪ್ರಸಾದ್, ಎಚ್.ಸಿ.ಕುಮಾರ್ ಮತ್ತಿತರರು ಹಾಜರಿದ್ದರು.

—-ಕೋಟ್ —
ವಾಲ್ಮೀಕಿ ಸಮಾಜಕ್ಕೆ ದೊಡ್ಡ ಇತಿಹಾಸವಿದೆ. ಈ ಸಮಾಜದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವಂತ ಮಾಡಲು ಸಂಗ್ರಹಾಲಯ ಸ್ಥಾಪನೆ ಮಾಡುವುದು ಅಗತ್ಯವಿದೆ. ಅದಕ್ಕೆ ಬೇಕಾದ ನೆರವನ್ನು ಕೊಡಲಾಗುವುದು. ಟ್ರಸ್ಟ್ ನಿರ್ಮಿಸುವ ಕಟ್ಟಡಕ್ಕೆ ಬೇಕಾದ ಅನುದಾನವನ್ನು ಸಂಸದರ ನಿಧಿಯಿಂದ ಬಿಡುಗಡೆ ಮಾಡುವೆ.

-ಯದುವೀರ್‌ಕೃಷ್ಣದತ್ತಚಾಮರಾಜ ಒಡೆಯರ್,ಸಂಸದ.

ನಾಯಕ ಸಮಾಜ ಶೈಕ್ಷಣಿಕ,ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ದಿ ಹೊಂದಲು ರಚನಾತ್ಮಕ ಚಟುವಟಿಕೆಗಳನ್ನು ಮಾಡಬೇಕಾಗಿದೆ. ಸಮಾಜ ಹಿಂದುಳಿದಿರುವುದರಿAದ ಶಿಕ್ಷಣ ಕೊಡಿಸಬೇಕು. ಮುಂದಿನ ದಿನಗಳಲ್ಲಿ ಕೋಚಿಂಗ್ ಸೆಂಟರ್,ವಸತಿನಿಲಯ ಸೇರಿದಂತೆ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಬೇಕಾದ ನೆರವು ಕಲ್ಪಿಸಲಾಗುವುದು.

-ಅನಿಲ್ ಚಿಕ್ಕಮಾದು,ಶಾಸಕರು.