Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಯುವ ಜನತೆ ಮದ್ಯ ಹಾಗೂ ಮಾದಕ ವಸ್ತುಗಳ ದಾಸ್ಯಕ್ಕೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳಬಾರದು; ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ

ಮೈಸೂರು; ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನ ದುಶ್ಚಟಗಳಿಂದ ಯುವಸಮುದಾಯದ ಭವಿಷ್ಯವು ನಾಶವಾಗಲಿದೆ ಹಾಗಾಗಿ ಹದಿಹರೆಯದ ದಿನಗಳಂದೇ ಎಚ್ಚರಿಕೆ ವಹಿಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ ತಿಳಿಸಿದರು.
ಗುರುವಾರ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ, ಜ್ಞಾನೋದಯ ಪದವಿ ಪೂರ್ವ ಕಾಲೇಜು ಇವರುಗಳ ಸಹಯೋಗದಲ್ಲಿ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಡಾ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಧ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಯುವಸÀಮುದಾಯ ದೇಶದ ಸಂಪತ್ತು ಯಾವುದೇ ಸಹವಾಸ ದೋಷದಿಂದ ಅಥವಾ ಯಾವುದೇ ಭ್ರಮೆಯ ಪ್ರೇರಣೆಗಳಿಗೆ ಒಳಗಾಗಿ ಮಾದಕ ವಸ್ತು ಮದ್ಯಸೇವನೆ ಧೂಮಪಾನದಂತಹ ಚಟಗಳಿಗೆ ಬಲಿಯಾಗಬಾರದು ಎಂದು ಹೇಳಿದರು.

18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡುವಂತಿಲ್ಲ. ಮಾದಕ ವಸ್ತುಗಳ ಬಳಕೆ ಶಿಕ್ಷಾರ್ಹ ಅಪರಾಧ. ಮಾದಕ ವಸ್ತುಗಳ ತಡೆಗೆ ಮಾದಕ ವಸ್ತುಗಳ ಜಾರಿ ಸಂಸ್ಥೆ ಇದೆ. ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಇದರ ವಿರುದ್ಧ ಹೋರಾಟ ಮಾಡುತ್ತಿವೆ. ಶ್ರೀ ಮಹಾಂತೇಶ ಸ್ವಾಮೀಜಿ ಅವರು ವ್ಯಸನ ಮುಕ್ತ ಮಾಡಲು ಸಮಾಜ ನಿರ್ಮಾಣ ಮಾಡಲು ಜೋಳಿಗೆಯನ್ನು ತೆಗೆದುಕೊಂಡು ಹೋಗಿ ಮನೆ, ಮನೆಗೆ ಬೇಟಿ ನೀಡಿ ತಮ್ಮ ವ್ಯಸನಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಅರಿವು ಮೂಡಿಸಿದರು ಎಂದು ಹೇಳಿದರು.
ಮಾದಕ ವಸ್ತುಗಳಲ್ಲಿ ಸಿಂಚೆಟಿಕ್ ಡ್ರಗ್ಸ್, ಕೊಕೇನ್, ಎಂದು ಹಲವು ರೀತಿಯಲ್ಲಿ ಇವೆ. ಡಾರ್ಕ್ ವೆಬ್ ಸೈಟ್ ಗಳಲ್ಲಿ ಡ್ರಗ್ಸ್ ಮಾರಾಟ ಮಾಡಿ, ಯುವ ಜನತೆಯನ್ನು ಮಾದಕ ವಸ್ತುಗಳಿಗೆ ವ್ಯಸನ ಮಾಡುತ್ತಾರೆ. ಇದರಿಂದ ದೇಶದ ಆರ್ಥಿಕತೆಗೆ ಯುವ ಜನತೆ ಕೊಡುಗೆ ನೀಡಲು ಆಗುವುದಿಲ್ಲ. ಯುವ ಜನತೆ ಮಾದಕ ವಸ್ತುಗಳ ಸೇನನೆಗೆ ದಾಸನಾಗಿ ಅದನ್ನು ಕೊಂಡು ಕೊಳ್ಳಲು ಹಣವಿಲ್ಲದೆ, ಹಣದ ಹೊಂದಿಸುವಿಕೆಗೆ ಕಳ್ಳತನ, ದರೋಡೆ ಕೊಲೆ ಸುಲಿಗೆಗೆ ಇಳಿಯುತ್ತಾನೆ. ಇದರಿಂದ ಹಲವು ಅಪರಾಧಗಳಲ್ಲಿ ಭಾಗಿಯಾಗುತ್ತಾನೆ ಎಂದರು. ತಮ್ಮ ಸುತ್ತ ಮುತ್ತ ಯಾರಾದರೂ ಡ್ರಗ್ಸ್ ಬಳಕೆ ಹಾಗೂ ಮಾರಾಟ ಮಾಡುವುದು ಕಂಡುಬAದರೆ 1933 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ವಿನೋದ್ ಚಂದ್ರ ಮಾತನಾಡಿ,
ಇಂದಿನ ಸಮಾಜದಲ್ಲಿ ಯುವ ಸಮುದಾಯ ಹಲವು ದುಶ್ಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಯುವ ಸಮುದಾಯ ದೇಶದ ಆಸ್ತಿ. ಇಂತಹ ಸಮುದಾಯ ದಾರಿ ತಪ್ಪಬಾರದು ಎಂಬ ಸದುದ್ದೇಶದಿಂದ ಮಹಾಂತೇಶ ಸ್ವಾಮೀಜಿ ಅವರು ಊರು ಊರು ಸುತ್ತಿ ತಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಅರಿವು ಮೂಡಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನೋದಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ ಪದ್ಮ ವಹಿಸಿದ್ದರು. ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ ನಾಗೇಶ್ ಆರಾಧ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜು ಆರ್, ಮನೋರೋಗ ತಜ್ಞರಾದ ಡಾ ಮಂಜುಶ್ರೀ,
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ಪಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ (ಪದವಿ ಪೂರ್ವ) ಯ ಉಪ ನಿರ್ದೇಶಕಿ ನಾಗಮ್ಮ ಎಂ ಬಿ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಎಸ್ ಹೆಚ್ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ವೃಂದ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.