
ಮೈಸೂರು; ನಗರದ ಜಯ ಲಕ್ಷ್ಮಿಪುರಂ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ.29ರಿಂದ 31ರವರೆಗೆ ಶ್ರೀಗುರು ರಾಘವೇಂದ್ರಸ್ವಾಮಿಯವರ 355ನೇ ಆರಾಧನಾ ಮಹೋತ್ಸವವನ್ನು ಆಯೋಜಿಸಲಾಗಿದೆ.
ಆರಾಧನಾ ದಿನಗಳಲ್ಲಿ ಬೆಳಿಗ್ಗೆ 5.30ಕ್ಕೆ ಸುಪ್ರಭಾತ, 7ರಿಂದ 7.45ರವರೆಗೆ ಮಹಾಪಂಚಾಮೃತಅಭಿಷೇಕ, 8ರಿಂದ 10ರವರೆಗೆ ಕನಕಾಭಿಷೇಕ, ಸರ್ವಸೇವೆ, ಇತ್ಯಾದಿ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, 12.30ರಿಂದ 2ರವರೆಗೆ ಪ್ರಸಾದ ವಿನಿಯೋಗ, ಸಂಜೆ 7ಕ್ಕೆ ಸ್ವಸ್ತವಾಚನ, ಶ್ರೇಯಪ್ರಾರ್ಥನೆ, ಮಹಾಮಂಗಳಾರತಿ ಇರುತ್ತದೆ.
ಆ.31ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಜಯಲಕ್ಷಿö್ಮÃಪುರಂ ಪ್ರಮುಖ ಬೀದಿಗಳಲ್ಲಿ ಶ್ರೀ ಗುರುರಾಯರ ಮಹಾರಥೋತ್ಸವವನ್ನು ಏರ್ಪಡಿಸಲಾಗಿದೆ.
ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆ.29ರಂದು ಸಂಜೆ 5.30ರಿಂದ 6.30ರವರೆಗೆ ಸ್ಪೂರ್ತಿ ಮಹಿಳಾ ಬಳಗದವರಿಂದ ಭಜನೆ, ಸಂಜೆ 6.30ರಿಂದ 8.30ರವರೆಗೆ ವಿದುಷಿ ಅನುಕೃಪ ಮತ್ತು ಸಂಗಡಿಗರಿAದದಾಸವಾಣಿ, ಆ.30ರಂದು ಭಾನುವಾರ ಸಂಜೆ 5ರಿಂದ 6ರವರೆಗೆ ಸತ್ಯಧಾನ ಭಜನಾ ಮಂಡಳಿ ಇವರಿಂದ ಭಜನಾಕಾರ್ಯಕ್ರಮ, ಸಂಜೆ 6.30ರಿಂದ 8.30ರವರೆಗೆ ವಿದ್ವಾನ್ ಡಿ.ಆರ್.ನಿರಂಜನ್‌ತAಡದವರಿAದಗಾಯನ. ಇವರಿಗೆ ಪಕ್ಕವಾದ್ಯದಲ್ಲಿ ವಯೋಲಿನ್‌ನಲ್ಲಿ ವಿದುಷಿ ಸಿ.ವಿ.ಶೃತಿ, ಮೃದಂಗದಲ್ಲಿ ವಿದ್ವಾನ್ ಶಿವಶಂಕರಸ್ವಾಮಿ ಹಾಗೂ ಘಟಂನಲ್ಲಿ ವಿದ್ವಾನ್ ಎಂ.ಆರ್.ಮAಜುನಾಥ್ ಸಹಕಾರ ನೀಡಲಿದ್ದಾರೆ.
ಆ.31ರಂದು ಸೋಮವಾರ ಸಂಜೆ 5.30ರಿಂದ 6.30ರವರೆಗೆ ಲಹರಿಗಾನವೃಂದಇವರಿAದ ಭಜನಾಕಾರ್ಯಕ್ರಮ, ಸಂಜೆ 6.30ರಿಂದ 8.30ರವರೆಗೆ ವಿದುಷಿ ಅಶ್ವಿನಿ ಸತೀಶ್‌ತಂಡದವರಿAದ ಸಂಗೀತಕಾರ್ಯಕ್ರಮ.ಇವರಿಗೆ ಪಕ್ಕವಾದ್ಯದಲ್ಲಿ ವಯೋಲಿನ್‌ನಲ್ಲಿ ವಿದುಷಿ ಸಿ.ವಿ.ಶೃತಿ ಹಾಗೂ ಮೃದಂಗದಲ್ಲಿ ವಿದ್ವಾನ್‌ಎ.ರಾಧೇಶ್ ಸಹಕಾರ ನೀಡಲಿದ್ದಾರೆ.
ಶ್ರೀ ಗುರುರಾಯರಭಕ್ತಮಹಾಶಯರೆಲ್ಲರೂ ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಯರಆರಾಧನಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ರಾಘವೇಂದ್ರಸ್ವಾಮಿ ಸೇವಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.