Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗಜ ಪಯಣದ ಮೂಲಕ ಕಾಡಿನಿಂದ ಅರಮನೆ ನಗರಿಗೆ ಆಗಮಿಸಿದ ಗಜಪಡೆ


*ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ

ಮೈಸೂರು; ಈ ಬಾರಿ ಅದ್ಧೂರಿಯಾಗಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನಡಿಯಾಗಿ ಗಜಪಯಣಕ್ಕೆ ಬುಧವಾರ ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಲಾಯಿತು. ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವೀರನಹೊಸಹಳ್ಳಿ ಮುಖ್ಯದ್ವಾರದ ಮುಂಭಾಗ ಇಂದು ಬೆಳಗ್ಗೆ 10 ರಿಂದ 10.28 ಒಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಸಾಲಾಗಿ ನಿಂತ ಗಜಪಡೆಗೆ ಪುಷ್ಪಾರ್ಚನೆ ಮಾಡಿ, ಸಾಂಪ್ರದಾಯಿಕ ಪೂಜೆ ನೆರವೇರಿಸಿದರು.
ಗಜಪೂಜೆ ನಂತರ ಸಚಿವ ಡಾ.ಯತೀಂದ್ರ ಆನೆಗಳಿಗೆ ಬೆಲ್ಲ, ಕಬ್ಬು ನೀಡಿ ಗಜಪಯಣಕ್ಕೆ ಚಾಲನೆ ನೀಡಿದರು. ಆನೆಗಳು ಸಾಂಕೇತಿಕವಾಗಿ ಹೆಜ್ಜೆ ಹಾಕಿದವು.
ಮೆರಗು ನೀಡಿದ ಕಲಾತಂಡಗಳ ವೈಭವ, ವಿದ್ಯಾರ್ಥಿಗಳ ನೃತ್ಯ:
ಗಜಪಯಣಕ್ಕೆ ಜಾನಪದ ಕಲಾ ತಂಡಗಳಾದ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ ತಂಡಗಳು ಅದ್ಧೂರಿ ಪ್ರದರ್ಶನ ನೀಡಿದವು. ಜೊತೆಗೆ ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಾಡಗೀತೆ, ಜಾನಪದ ನೃತ್ಯ ಪ್ರದರ್ಶಿಸಿ ಮೆರಗು ನೀಡಿ ಕಣ್ಮನ ಸೆಳೆದರು.
ಸುಮಾರು 170 ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಎನ್.ಟಿ.ಆರ್ ಗೇಟ್ ನಿಂದ ವೇದಿಕೆಯವರೆಗೆ ಸುಮಾರು 1 ಕಿ.ಮೀ ಮಿನಿ ಮೆರವಣಿಗೆ ನಡೆಯಿತು. ಬಳಿಕ
ಮೊದಲ ಹಂತದಲ್ಲಿ 9 ಆನೆ ಗಳಾದ ಮಹೇಂದ್ರ, ಶ್ರೀಕಂಠ, ಲಕ್ಷಿ÷್ಮÃ, ಏಕಲವ್ಯ, ಧನಂಜಯ, ಗೋಪಿ, ಕಾವೇರಿ, ಪ್ರಶಾಂತ, ಶ್ರೀರಾಮ ಆನೆಗಳನ್ನು ಲಾರಿಗೆ ಹತ್ತಿಸಿಕೊಂಡು ಸಚಿಜೆಯ ವೇಳೆಗೆ ಮೈಸೂರು ಅರಣ್ಯ ಭವನಕ್ಕೆ ಕರೆ ತಂದು ವಾಸ್ತವ್ಯ ಹೂಡಿಸಲಾಯಿತು.
ಗಜಪಯಣದಲ್ಲಿ ಸುಗ್ರೀವ ಆನೆ ಬದಲಿಗೆ ಶ್ರೀಕಂಠ ಆನೆಯನ್ನು ಗಜಪಯಣದ ಮೂಲಕ ಕರೆತರಲಾಯಿತು. ಎರಡನೆ ತಂಡದಲ್ಲಿ ಬರಬೇಕಾಗಿದ್ದ ಶ್ರೀಕಂಠ ಮೊದಲ ತಂಡದಲ್ಲಿ ಆಗಮಿಸಿದ್ದು, ಮೊದಲ ತಂಡದಲ್ಲಿ ಬರಬೇಕಿದ್ದ ಸುಗ್ರೀವ ಎರಡನೇ ತಂಡದಲ್ಲಿ ಆಗಮಿಸುತ್ತಿದ್ದಾನೆ.
ಅಭಿಮನ್ಯುವಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ: ಕಳೆದ 25 ವರ್ಷದಿಂದ ಮೈಸೂರು ದಸರಾದಲ್ಲಿ ಭಾಗವಹಿಸಿದ್ದ 6 ಬಾರಿ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಗಜಪಡೆಯ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ ಅಭಿಮನ್ಯು ಆನೆಗೆ 60 ವರ್ಷ ಆಗಿರುವುದರಿಂದ ನಿವೃತ್ತಿ ಪಡೆದಿದ್ದಾನೆ. ಗಜಪಯಣದ ಸಂದರ್ಭದಲ್ಲಿ ಎರಡೂ ಕಡೆ ಗಜಪಡೆಯನ್ನು ನಿಲ್ಲಿಸಿ, ಅಭಿಮನ್ಯು ಆನೆ ನಡೆಯುವಾಗ ಹೂಮಳೆ ಸುರಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಅಭಿಮನ್ಯು ತನ್ನ ಸೊಂಡಿಲನ್ನು ಎತ್ತಿ ವಂದಿಸಿದರೆ, ಅದರ ಮಾವುತ ವಸಂತ ಸೆಲ್ಯೂಟ್ ಹೊಡೆದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅಭಿಮನ್ಯು ದೇಶದ ಹಲವಾರು ರಾಜ್ಯಗಳಲ್ಲಿ ಕಾಡಾನೆ ಹಾಗೂ ಇತರ ಕಾಡು ಪ್ರಾಣಿಗಳ ಸೆರೆ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿ ಕೂಂಬಿAಗ್ ಕಿಂಗ್ ಎಂದೇ ಹೆಸರು ಗಳಿಸಿದ್ದಾನೆ.
ಕಾರ್ಯಕ್ರಮದಲ್ಲಿ ಅರಣ್ಯ ವಸತಿ ವಿಹಾರಧಾಮಗಳ ಅಧ್ಯಕ್ಷರು ಹಾಗೂ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಕುಮಾರ್ ಸಿ, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಡಿ ಹರೀಶ್ ಗೌಡ, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಾದ ಡಿ ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಪ್ರದೇಶಿಕ ಆಯುಕ್ತರಾದ ನಿತೀಶ್ ಪಾಟೀಲ್, ದಕ್ಷಿಣ ವಲಯದ ಐ ಜಿ ಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿಗಳಾದ ಜಿ ಲಕ್ಷಿ÷್ಮÃಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್ ಯುಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

———-ಕೋಟ್ —
ತುಲಾ ಲಗ್ನದಲ್ಲಿ ಗಜಪಡೆಗೆ ಪೂಜೆ: ”ವಿನಾಯಕನ ಪ್ರತಿರೂಪವಾದ ಗಜಪಡೆಗೆ ಸಾಂಪ್ರದಾಯಿಕವಾಗಿ ನಾಡಿಗೆ ಒಳ್ಳೆಯದಾಗಲಿ ಎಂದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಮೊದಲು ಗಜಪಡೆಗೆ ಪಾದ ತೊಳೆದು, ಅರಿಶಿನ, ಕುಂಕುಮ ಹಾಗೂ ಗಂಧವನ್ನು ಹಚ್ಚಿ ಬಳಿಕ ಗಣಪತಿಗೆ ಇಷ್ಟವಾದ ತಿಂಡಿಗಳಿAದ ನೈವೇದ್ಯ ಮಾಡಿ ಪುಷ್ಪಾರ್ಚನೆಯ ನಂತರ ಆನೆಗಳಿಗೆ ಕಬ್ಬು-ಬೆಲ್ಲ ನೀಡಿ ದಸರಾ ಯಾವುದೇ ವಿಘ್ನವಿಲ್ಲದೇ ನಡೆಯಲಿ ಎಂದು ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸಲಾಯಿತು

  • ಗಜಪಡೆಯ ಅರ್ಚಕ ಪ್ರಹ್ಲಾದ್ ರಾವ್
    —ಕೋಟ್——
    ”ಈ ಬಾರಿ ಗಜಪಯಣದಲ್ಲಿ 9 ಆನೆಗಳನ್ನು ಮೊದಲ ತಂಡದಲ್ಲಿ ಕರೆತರಲಾಗಿದೆ. ಅಭಿಮನ್ಯು ಆನೆಗೆ ಸೇವೆ ಪರಿಗಣಿಸಿ ಸರ್ಕಾರದ ಆದೇಶದಂತೆ ಗಜಪಯಣದ ದಿನವೇ ಬೀಳ್ಕೊಡುಗೆ ಕೊಟ್ಟಿದ್ದೇವೆ. ಅಭಿಮನ್ಯುವನ್ನು ಈ ಬಾರಿ ದಸರಾಗೆ ಕರೆದುಕೊಂಡು ಬರುವ ಬಗ್ಗೆ ತೀರ್ಮಾನಿಸಿಲ್ಲ. ಸರ್ಕಾರದ ಆದೇಶ ಪಾಲಿಸುತ್ತೇವೆ. 60 ವರ್ಷ ಪೂರೈಸಿದ ಆನೆಗಳನ್ನು ಬಳಸದಂತೆ ಕೋರ್ಟ್ ಆದೇಶವಿದೆ ಅದನ್ನು ಪಾಲಿಸಲಾಗುವುದು. ಆಗಸ್ಟ್ 28ರಂದು ಬೆಳಗ್ಗೆ 8:45ಕ್ಕೆ ಮೈಸೂರಿನ ಅರಣ್ಯ ಭವನದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿ, ಬಳಿಕ ಅರಮನೆಗೆ ಕರೆತರಲಾಗುವುದು-
    ಡಿಸಿಎಫ್ ಪ್ರಭುಗೌಡ