
ದಸರಾ ಉದ್ಘಾಟಕರ ಆಯ್ಕೆಯನ್ನು ನಾನೇ ಮಾಡುತ್ತೇನೆ;
ಮೈಸೂರು; ರಾಜ್ಯವನ್ನು ಆವರಿಸಿರುವ ಬರಗಾಲದ ನೆಪದಲ್ಲಿ ಸರಳವಾಗಿ ನಾಡ ಹಬ್ಬ ಮೈಸೂರು ದಸರಾ ಮಾಡುವುದಿಲ್ಲ. ಆದರೆ, ವಿಭಿನ್ನವಾಗಿ ಈ ಬಾರಿ ದಸರಾ ಮಾಡುತ್ತೇವೆ. ದಸರಾದ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಶನಿವಾರ ಮೈಸೂರಿನ ಓವಲ್ ಗ್ರೌಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದ ಕೊನೆ ದಿನ ನಡೆಯಲಿರುವ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ ಮಿಲಿಟರಿ, ಸೇನಾ ಪಡೆಗಳು ಇರಲಿವೆ. ಇದರ ಜೊತೆಗೆ ಕನ್ನಡದ ನಟ, ನಟಿಯರು ಕೂಡ ಮೆರವಣಿಗೆಯಲ್ಲಿ ಸಾಗಲಿದ್ದು, ಒಂದೇ ತರದ ಜನಪದ ಕಲಾ ಪ್ರಕಾರಗಳಿಗೆ ಅವಕಾಶವಿಲ್ಲ. ಈಗ ಕಾಲ ಬದಲಾದಂತೆ ದಸರಾ ಮೆರವಣಿಗೆಯ ಸ್ವರೂಪವನ್ನೂ ಬದಲಾಯಿಸಿತ್ತೇವೆ ಎಂದರು.
ಈ ಬಾರಿ ದಸರಾದಲ್ಲಿ ಕಂಬಳ ಮಾಡುವ ಬಗ್ಗೆ ನಾನು ಯಾವುದೇ ಪ್ರತಿಷ್ಠೆಯನ್ನು ತೆಗೆದುಕೊಂಡಿಲ್ಲ. ಆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಂಬಳದಿAದ ಪರಿಸರ ಹಾನಿ ಹಾಗೂ ನೀರು ಖರ್ಚಾಗುತ್ತದೆ ಎಂಬ ಆರೋಪ ಸರಿಯಲ್ಲ. ಸುಮ್ಮನೆ ಕಂಬಳದ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇನೆ ಎಂದರು.
ಬರಗಾಲದ ನೆಪದಲ್ಲಿ ಸರಳ ದಸರಾ ಮಾಡುವುದಿಲ್ಲ.ಯಾಕೇಂದರೆ ದಸರಾದ ಮೇಲೆ ಮೈಸೂರಿನ ಪ್ರವಾಸೋದ್ಯಮ ನಿಂತಿದೆ. ಹಾಗಾಗಿ ಸಾಂಪ್ರದಾಯಿಕ ಹಾಗೂ ಅದ್ಧೂರಿ ದಸರಾ ಮಾಡುತ್ತೇವೆ. ಈ ಬಾರಿ ದಸರಾ ಉದ್ಘಾಟಕರ ವಿಚಾರದಲ್ಲಿ ಹಲವರ ಜೊತೆ ಚರ್ಚೆ ಮಾಡಿದ್ದೇವೆ. ಅಂತಿಮ ತೀರ್ಮಾನ ನಾನೇ ಮಾಡುತ್ತೇನೆ ಎಂದು ತಿಳಿಸಿದರು
ಕಾವೇರಿ ನೀರಿನ ಸಮಸ್ಯೆ ಇದ್ದ ಕಾರಣ U್ವ್ರÃಟರ್ ಮೈಸೂರು ರಚನೆ ಕಡೆ ಗಮನ ಹರಿಸಲಿಲ್ಲ. ಮೈಸೂರು ಬಹಳ ಅಚ್ಚುಕಟ್ಟಾದ ನಗರ, ಇದನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಭವಿಷ್ಯದ ದೃಷ್ಟಿಯಿಂದ ಮೈಸೂರಿಗಾಗಿ ಹಲವು ಯೋಜನೆಗಳನ್ನ ಚಿಂತನೆ ಮಾಡಿದ್ದೇನೆ. ಸಿದ್ದರಾಮಯ್ಯ ಗ್ರೇಟರ್ ಮೈಸೂರು ಬಗ್ಗೆ ಭರವಸೆ ಕೊಟ್ಟಿದ್ದರು. ಅದನ್ನು ಈಡೇರಿಸುವುದು ನನ್ನ ಜವಾಬ್ದಾರಿ. ಕೆಲವು ದಿನಗಳಲ್ಲೇ ಈ ಭಾಗದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.