Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನೈಪುಣ್ಯದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ


ಮೈಸೂರು; ಪುಟಾಣಿ ಶ್ರೀ ಕೃಷ್ಣನ ಅವತಾರದಲ್ಲಿ ಕುಣಿದು ಕುಪ್ಪಳಿಸಿದ ಚಿಣ್ಣರು… ಬೆಣ್ಣೆ ತಿಂದು ಸಂಭ್ರಮಿಸಿದರು…!
ಮೈಸೂರಿನ ಕನಕದಾಸನಗರದಲ್ಲಿರುವ ನೈಪುಣ್ಯ ಶಾಲೆ ಆವರಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿತ್ತು. ಬಾಲ ಕೃಷ್ಣ ಮತ್ತು ರಾಧೆಯ ಅವತಾರದಲ್ಲಿ ನೃತ್ಯಪ್ರದರ್ಶನ ನೀಡಿದ ಪುಟಾಣಿ ಮಕ್ಕಳು ಶ್ರೀ ಕೃಷ್ಣ ಬಾಲಲೀಲೆಗಳನ್ನು ಅನಾವರಣಗೊಳಿಸಿದರು. ಮಕ್ಕಳೊಂದಿಗೆ ಪೋಷಕರು ಭಾಗವಹಿಸಿ ನೃತ್ಯ ಪ್ರದರ್ಶನ ನೀಡುವ ಮೂಲಕ ಬಹುಮಾನಗಳನ್ನು ಗೆದ್ದು ಸಂಭ್ರಮಿಸಿದರು.
ಶ್ರೀ ಕೃಷ್ಣ ಕುರಿತಾದ ಹತ್ತಾರು ಜನಪ್ರಿಯ ಹಾಡು-ಭಜನೆಗಳಿಗೆ ಹೆಜ್ಜೆ ಹಾಕಿದ ಮಕ್ಕಳು, ನೆರೆದಿದ್ದವರಿಂದ ಶಿಳ್ಳೆ- ಚಪ್ಪಾಳೆ ಗಿಟ್ಟಿಸಿದರೆ, ಮಕ್ಕಳೊಂದಿಗೆ ಮಕ್ಕಳಾದ ಪೋಷಕರು ಕುಣಿದು ಕುಪ್ಪಳಿಸಿದರು.