Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶಿಕ್ಷಕರು ಮತ್ತು ಪೋಷಕರ ಸಹಕಾರ ಅಗತ್ಯವಾಗಿದೆ: ಸುರೇಶ್

ಪಿರಿಯಾಪಟ್ಟಣ : ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶಿಕ್ಷಕರು ಮತ್ತು ಪೋಷಕರ ಸಹಕಾರ ಅಗತ್ಯವಾಗಿದೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ತಿಳಿಸಿದರು.

 ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ನೂತನ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆಯ ಸಂದರ್ಭದಲ್ಲಿ ಮಾತನಾಡಿದ ಅವರು  ಶಾಲೆಯ ಅಭಿವೃದ್ಧಿಗೆ ಸಮಿತಿಯು ಸಂಪೂರ್ಣ ಶ್ರಮಿಸುತ್ತದೆ ಹಾಗೂ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಕೆಲಸಕ್ಕೆ ಶಿಕ್ಷಕರಿಗೆ ಸಹಕಾರ ನೀಡಲಾಗುವುದು. ಶಿಕ್ಷಣದ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಕೂಡ ತನ್ನ ಬೌದ್ಧಿಕ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಾಗಿದ್ದು ಇದಕ್ಕೆ ಶಿಕ್ಷಕರು ಮತ್ತು ಪೋಷಕರ ಸಹಕಾರ ಅಗತ್ಯವಾಗಿದೆ. ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಮೂಲಕ ಇತರೆ ಶಾಲೆಗಳಿಗೆ ಮಾದರಿ ಶಾಲೆಯಾಗಿಸುವ ಗುರಿಯನ್ನು ಸಮಿತಿಯು ಹೊಂದಿದೆ ಎಂದು ಹೇಳಿದರು.

ಸಮಿತಿಯ ಅಧ್ಯಕ್ಷರಾಗಿ ಸುರೇಶ್,ಉಪಾಧ್ಯಕ್ಷರಾಗಿ ರೂಪ ಅಣ್ಣಪ್ಪ ,ಸದಸ್ಯರುಳಾಗಿ ಸತೀಶ್, ಕೃಷ್ಣ,ಪಾಂಡು,ತಮ್ಮಯ್ಯ,ಮಾಳಗಯ್ಯ,ದಿನೇಶ್,ಅರುಣಾ,ಮಹದೇವ,ಮಹದೇವಿ, ನಾಗಮ್ಮ, ರಾಣಿ,ಕಾವ್ಯ, ಭಾಗ್ಯ,ಮಂಜುಳಾ,ಲಕ್ಷ್ಮಿ,ಮಮತಾ ರವರುಗಳನ್ನು ಆಯ್ಕೆ ಮಾಡಲಾಯಿತು.

 ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎಸ್.ಪಿ.ಪಾರ್ಥ, ಗ್ರಾಮದ ಮುಖಂಡರಾದ ಎಚ್.ಎಸ್.ಲೋಕೇಶ್, ರಾಜಯ್ಯ, ಸಣ್ಣಪ್ಪಜಯ್ಯ, ಗೋವಿಂದ, ವೀರಭದ್ರ, ರಾಮಯ್ಯ, ಮಹೇಶ್, ರಮೇಶ್, ರಾಮಕೃಷ್ಣ ಸೇರಿದಂತೆ ಇತರರು ಇದ್ದರು