Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಚಿವ ಸತೀಶ್ ಜಾರಕಿ ಮನೆ ಮೇಲೆ ಇಡಿ ದಾಳಿ ಖಂಡಿಸಿ ದಲಿತ ಸಂಘಟನೆಗಳಿ0ದ ಪ್ರತಿಭಟನೆ

ಮೈಸೂರು: ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ, ಆಪ್ತರು ಹಾಗೂ ವಿವಿಧ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯನ್ನು ಖಂಡಿಸಿ ದಲಿತ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.ನಗರದ ಟೌನ್‌ಹಾಲ್ ಮುಂಭಾಗದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಹಾಗೂ ಇಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ನಗರಪಾಲಿಕೆಯ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ಧವಾಗಿ ಬೆಳೆದಿರುವ ಸಚಿವ ಸತೀಶ್ ಜಾರಕಿಹೊಳಿ…

Read More

ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ: ಮೈಮುಲ್ ವಿಸ್ತರಣಾಧಿಕಾರಿ ಬಿ.ಎನ್‌.ನಿಶ್ಚಿತ್

ಪಿರಿಯಾಪಟ್ಟಣ: ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಸರ್ಕಾರ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಿದ್ದು ಈ ಯೋಜನೆಯಲ್ಲಿ ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮೈಮುಲ್ ವಿಸ್ತರಣಾಧಿಕಾರಿ ಬಿ.ಎನ್.ನಿಶ್ಚಿತ್ ತಿಳಿಸಿದರು. ತಾಲ್ಲೂಕಿನ ಬೆಟ್ಟದ ತುಂಗಾ ಮೇಗಳ ಕೊಪ್ಪಲು ಹಾಗೂ ಮೇಲೂರು ಗ್ರಾಮಗಳ್ಳಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ದೊರೆಕೆರೆ ಗ್ರಾಮದಲ್ಲಿ ಮಾತನಾಡಿದ ಅವರು ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಯಶಸ್ವಿನಿ…

Read More

‘ಮನೆ ಕೊಡಿ ಹೋಗುತ್ತೇವೆ, ಇಲ್ಲ ವಿಷ ಕೊಡಿ ಸಾಯುತ್ತೇವೆ’ಆತಂಕದಲ್ಲಿ ಕುರಿಮಂಡಿ ಎರಡನೇ ಪಾರ್ಕ್ ಗುಡಿಸಲು ನಿವಾಸಿಗಳು

ಮೈಸೂರು : ಪರಿಸರ ಉಳಿಸುವ ನೆಪದಲ್ಲಿ 20 ವರ್ಷಗಳಿಂದ ಯಾವುದೇ ಮೂಲ ಸೌಲಭ್ಯಗಳಿಲ್ಲದೆ, ಪ್ರಾಣಿಗಳಂತೆ ಬದುಕುತ್ತಿರುವ ನಿರ್ಗತಿಕ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದ್ದು, ನಾವು ಯಾವುದೇ ಕಾರಣಕ್ಕೂ ಇಲ್ಲಿಂದ ಕದಲುವುದಿಲ್ಲ, ನಮಗೆ ಮನೆ ಕೊಡಿ ಹೋಗುತ್ತೇವೆ, ಇಲ್ಲವೇ ವಿಷ ಕೊಡಿ ಸಾಯುತ್ತೇವೆ ಎಂದು ವೃದ್ಧರು ಅವಲತ್ತುಕೊಂಡ ಘಟನೆ ಕುರಿಮಂಡಿ ಎರಡನೇ ಪಾರ್ಕಿನಲ್ಲಿ ಗುರುವಾರ ಬೆಳಗ್ಗೆ ನಡೆಯಿತು.ಮೈಸೂರಿನ ಪರಿಸರ ಉಳಿಸಿ ಸಮಿತಿ ಸದಸ್ಯರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ಉದ್ಯಾನವನದ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಮಾಡುತ್ತಿರುವ ಜನರನ್ನು ತೆರವು…

Read More

ಪಾಶ್ಚಾತ್ಯರಿಂದ ಅನುಕರಿಸುತ್ತಿರುವ ಭೋಗ ಸಂಸ್ಕೃತಿ ಸಮಾಜದಲ್ಲಿ ದುರಾಸೆ, ಸ್ವಾರ್ಥ ಮತ್ತು ಕೂಡಿಹಾಕುವ ಮನಸ್ಥಿತಿಯನ್ನು ಸೃಷ್ಟಿಸಿದೆ; ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಮೈಸೂರು; ಪಾಶ್ಚಾತ್ಯರಿಂದ ಅನುಕರಿಸುತ್ತಿರುವ ಭೋಗ ಸಂಸ್ಕೃತಿ ಸಮಾಜದಲ್ಲಿ ದುರಾಸೆ, ಸ್ವಾರ್ಥ ಮತ್ತು ಕೂಡಿಹಾಕುವ ಮನಸ್ಥಿತಿಯನ್ನು ಸೃಷ್ಟಿಸಿದೆ. ಈ ಸವಾಲನ್ನು ಎದುರಿಸಲು ಆತ್ಮ ಸಂಯಮ ಬಹುಮುಖ್ಯವಾಗಿದೆ ಎಂದು ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಕನ್ನಡ ವಿಭಾಗ, ಅಭಿನವ ಬೆಂಗಳೂರು, ಎಸ್.ಟಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳು, ಚಿನಕುರಳಿ ಹಾಗೂ ವಿಸ್ಮಯ ಅಡ್ವರ್ಟೈಸರ್ಸ್ ಸಹಯೋಗದೊಂದಿಗೆ ಕನ್ನಡ ವಿವೇಕ ಪರಂಪರೆ ಮತ್ತು ಕುವೆಂಪು’ ಎಂಬ ವಿಷಯ ಕುರಿತು ಆಯೋಜಿಸಲಾಗಿದ್ದ ಎರಡು ದಿನದ…

Read More

ಪತ್ರಿಕಾ ವಿತರಕರ ಸೇವೆ ಸಮಾಜಕ್ಕೆ ಮಾದರಿ: ಪ್ರಶಾಂತ್ ಗೌಡ

ಮೈಸೂರು : ಸಮಾಜಕ್ಕೆ ಅಗತ್ಯವಾದ ಮಾಹಿತಿ ಮತ್ತು ಸುದ್ದಿಗಳನ್ನು ಪ್ರತಿದಿನ ಮನೆಮನೆಗೆ ತಲುಪಿಸುವ ಪತ್ರಿಕಾ ವಿತರಕರ ಸೇವೆ ಅತ್ಯಂತ ಶ್ಲಾಘನೀಯ ಹಾಗೂ ಮಾದರಿಯಾಗಿದೆ ಎಂದು ಮೈಸೂರು ನಗರಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್‌ಗೌಡ ಹೇಳಿದರು.ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ದೇವರಾಜ ಅರಸು ರಸ್ತೆಯಲ್ಲಿಹಿರಿಯ ಪತ್ರಿಕಾ ವಿತರಕರಾದ ಕನಕರತ್ನ ,ರಾಘು,ಚಂದ್ರಶೇಖರ್,ಓA ದೇವ್ ,ಶ್ರೀಕಾಂತ,ಸತೀಶ್ ಅವರುಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಪತ್ರಿಕಾ ವಿತರಕರು ಪ್ರತಿದಿನ ಮುಂಜಾನೆ ಎದ್ದು, ಮಳೆ, ಗಾಳಿ, ಚಳಿ ಹಾಗೂ ಬೇಸಿಗೆಯನ್ನು…

Read More

ದಸರಾ ಆಹಾರ ಮೇಳವನ್ನು ನಗರದ ಹೊರಭಾಗದಲ್ಲಿ ಆಯೋಜಿಸಿ, ಹೋಟೆಲ್‌ಗಳಿಗೆ ರಾತ್ರಿ 12 ರವರೆಗೆ ಅವಕಾಶ ನೀಡಲು ಒತ್ತಾಯ.

ಮೈಸೂರು; ದಸರಾ ಆಹಾರ ಮೇಳವನ್ನು ನಗರದ ಹೊರಭಾಗದಲ್ಲಿ ಆಯೋಜಿಸಿ, ಹೋಟೆಲ್‌ಗಳಿಗೆ ರಾತ್ರಿ 12 ರವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಬೇಕೆಂದು ಮೈಸುರು ಹೋಟೆಲ್ ಮಾಲೀಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.ಈ ಕುರಿತು ಗುರುವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಯುವ ದಸರಾದಲ್ಲಿ ವರ್ಷದಿಂದ ವರ್ಷಕ್ಕೆ ಯುವ ದಸರಾಕ್ಕೆ ಆಗಮಿಸುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.ಈ ಹಿಂದೆ ಯುವ ದಸರಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ ಹೆಚ್ಚುತ್ತಿರುವ…

Read More

ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದ ವಿದ್ಯಾರ್ಥಿಗಳು

ಮೈಸೂರು; ನಗರದ ಸರಸ್ವತಿಪುರಂನಲ್ಲಿರುವ ವಿಜಯ ವಿಠ್ಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳು 2026 ಜಿಲ್ಲಾ ಮಟ್ಟದ ಈಜು ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೂರು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬೆನಕ ಅರಸ್ ಮೂರುಚಿನ್ನದ ಪದಕಗಳನ್ನು ಗೆದ್ದುಕೊಂಡರೆ, ವಿಗ್ನೇಶ್ ನಾಯಕ್ ಮತ್ತು ಅದ್ವಿಕ್‌ಆರ್ಯ ತಲಾ ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಅದ್ಭುತ ಪ್ರದರ್ಶನದೊಂದಿಗೆ ಬೆನಕ ಅರಸ್‌ಅವರು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

Read More

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ನಗರ ಯುವ ಘಟಕದ ಅಧ್ಯಕ್ಷರಾಗಿ ಬಿ.ಎಂ.ಸ0ತೋಷ್ ಕುಮಾರ್ ನೇಮಕ

ಮೈಸೂರು; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ನಗರ ಯುವ ಘಟಕದ ಅಧ್ಯಕ್ಷರಾಗಿ ಬಿ.ಎಂ.ಸ0ತೋಷ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.ನೇಮಕಗೊಂಡ ಈ ಸಂಧರ್ಭದಲ್ಲಿ ಸೇಪ್ ವೀಲ್ ಪ್ರಶಾಂತ್, ಸಮಾಜದ ಮುಖಂಡರಾದ ಮಾರ್ಬಳ್ಳಿ ಕುಮಾರ್, ಜಿಲ್ಲಾ ವಕ್ತಾರ ಡಾ ವಸಂತ್ ಕುಮಾರ್, ಉದ್ಯಮಿಗಳಾದ ಮಹದೇವಸ್ವಾಮಿ, ರಾಗಿಬೋಮ್ಮನಹಳ್ಳಿ ರಾಷ್ಟಿçÃಯ ಯುವ ಘಟಕದ ಸದಸ್ಯರಾದ ಷಡಕ್ಷರಿ, ಯುವ ಮುಖಂಡ ನಂಧೀಶ್ ಕನ್ನಹಳ್ಳಿ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗಂಗಾಧರ್, ಪ್ರಸನ್ನ ಕುಮಾರ್, ದಕ್ಷಿಣ ಮೂರ್ತಿ, ನಮೋಬ್ರಿಗೇಡ್ ಯತೀಶ್ ಉಪಸ್ಥಿತರಿದ್ದರು.

Read More