Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪಾಶ್ಚಾತ್ಯರಿಂದ ಅನುಕರಿಸುತ್ತಿರುವ ಭೋಗ ಸಂಸ್ಕೃತಿ ಸಮಾಜದಲ್ಲಿ ದುರಾಸೆ, ಸ್ವಾರ್ಥ ಮತ್ತು ಕೂಡಿಹಾಕುವ ಮನಸ್ಥಿತಿಯನ್ನು ಸೃಷ್ಟಿಸಿದೆ; ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ


ಮೈಸೂರು; ಪಾಶ್ಚಾತ್ಯರಿಂದ ಅನುಕರಿಸುತ್ತಿರುವ ಭೋಗ ಸಂಸ್ಕೃತಿ ಸಮಾಜದಲ್ಲಿ ದುರಾಸೆ, ಸ್ವಾರ್ಥ ಮತ್ತು ಕೂಡಿಹಾಕುವ ಮನಸ್ಥಿತಿಯನ್ನು ಸೃಷ್ಟಿಸಿದೆ. ಈ ಸವಾಲನ್ನು ಎದುರಿಸಲು ಆತ್ಮ ಸಂಯಮ ಬಹುಮುಖ್ಯವಾಗಿದೆ ಎಂದು ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಕನ್ನಡ ವಿಭಾಗ, ಅಭಿನವ ಬೆಂಗಳೂರು, ಎಸ್.ಟಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳು, ಚಿನಕುರಳಿ ಹಾಗೂ ವಿಸ್ಮಯ ಅಡ್ವರ್ಟೈಸರ್ಸ್ ಸಹಯೋಗದೊಂದಿಗೆ ಕನ್ನಡ ವಿವೇಕ ಪರಂಪರೆ ಮತ್ತು ಕುವೆಂಪು’ ಎಂಬ ವಿಷಯ ಕುರಿತು ಆಯೋಜಿಸಲಾಗಿದ್ದ ಎರಡು ದಿನದ ಅಂತÀರರಾಷ್ಟಿçÃಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ತೋರಣ ನಾಂದಿಯ ನುಡಿಗಳನ್ನಾಡುತ್ತಾ, ಕುವೆಂಪು ಅವರು ಹೊಸ ಆಲೋಚನೆ, ಪ್ರಜ್ಞೆಯ ಮೂಲಕ ಒಂದು ಜನಾಂಗದ ಕಣ್ಣನ್ನು ತೆರೆಸಿದ ವ್ಯಕ್ತಿ. ಇಂದಿನ ಸಮಾಜದಲ್ಲಿ ಜಡತ್ವ, ಹಿಂಸೆ, ಕ್ರೌರ್ಯ ದಬ್ಬಾಳಿಕೆ ಹಾಗೂ ಕೊಳ್ಳುಬಾಕ ಸಂಸ್ಕೃತಿ ರಾರಾಜಿಸುತ್ತಿದೆ. ಈ ಸವಾಲುಗಳನ್ನು ಎದುರಿಸುವಲ್ಲಿ ಹೊಸ ತಲೆಮಾರು ಕುವೆಂಪು ಅವರು ರಚಿಸಿರುವ ಸಾಹಿತ್ಯವನ್ನು ಓದಬೇಕು. ಆಗ ಮಾತ್ರ ಬದಲಾವಣೆ ತರಲು ಸಾಧ್ಯ. ಕುವೆಂಪು ಅವರ ಬರಹಗಳನ್ನು ಓದುವುದರಿಂದ ಆತ್ಮವಿಶ್ವ್ವಾಸ ಮತ್ತು ಆತ್ಮಗೌರವವನ್ನು ಹೆಚ್ಚಿಸಿಕೊಳ್ಳಬಹುದು ಎಂದರು. ಪುಸ್ತಕಗಳಿಲ್ಲದ ಮನೆ ಸ್ಮಶಾನದಂತೆ, ಪುಸ್ತಕ ಓದುವುದರಿಂದ ಚಿಂತನೆಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಮನಸ್ಸನ್ನು ಕ್ರಿಯಾಶೀಲವಾಗಿಡಬಹುದು. ಸಮಾಜದಲ್ಲಿರುವ ಜಡತ್ವವನ್ನು ನಿವಾರಿಸಲು ಪ್ರತಿಯೊಬ್ಬರು ನಿರಂಕುಶಮತಿಗಳಾಬೇಕು. ರಾಜಕೀಯ ಮತ್ತು ಧರ್ಮಕ್ಕೆ ಅಧೀನರಾಗದೆ ಸ್ವಾಯತ್ತ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಇಂತಹ ಬದಲಾವಣೆ ಸಾಹಿತ್ಯದ ಮೂಲಕವೇ ಸಾಧ್ಯ, ಇದರಿಂದ ಸಮಾಜದಲ್ಲಿ ಜಾಗೃತಿ ಹಾಗೂ ಬದಲಾವಣೆ ತರಬಹುದು ಎಂದು ತಿಳಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ನುಡಿ ಚಾಲನೆ ನೆರವೇರಿಸಿ ಮಾತನಾಡಿ, ಕುವೆಂಪು ಅವರೊಬ್ಬ ದಾರ್ಶನಿಕ ಕವಿ ಎಂದು ಕುವೆಂಪು ಅವರ ಹಿರಿಮೆಯನ್ನು ಕೊಂಡಾಡಿದರು. ಭಾರತ ದೇಶ ಜಾನಪದ ಕಥೆಗಳಿಂದ ಸಂಮೃದ್ಧವಾಗಿದ್ದು, ಯಾವ ದೇಶದಲ್ಲಿಯೂ ಇಂತಹ ಸಂಮೃದ್ದವಾದ ಕಥೆಗಳನ್ನು ಹೇಳುವ, ಕಟ್ಟುವ ಮತ್ತು ವಿಸ್ತರಿಸುವ ಕಥಾನ ಪರಂಪರೆ ಕಂಡು ಬಂದಿಲ್ಲ ಎಂದರು. ಇಷ್ಟವಾದ ಕೃತಿಯನ್ನು ತನ್ನದಾಗಿಸಿಕೊಂಡ ತನ್ನ ಬದುಕಿಗೆ ಪ್ರಸ್ತುತವಾಗುವಂತೆ ಕಾಲಕಾಲಕ್ಕೆ ಅರ್ಥೈಸಿಕೊಂಡ, ತನ್ನ ಸಂದರ್ಭದ ಸಾಮಗ್ರಿಯಲ್ಲಿ ಸಾಕ್ಷಾತ್ಕರಿಸಿಕೊಂಡ ಉಪಾಯಗಳು ಪ್ರತಿಯೊಂದು ಸಂಸ್ಕೃತಿಯಲ್ಲೂ ಇರುತ್ತವೆ. ಮಹಾಭಾರತ, ರಾಮಾಯಣಗಳನ್ನು ನಾವು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದುದು ಈ ನಿಷ್ಠೆಯಿಂದ. ಇಂಥ ಉಪಾಯಗಳಿಂದ. ಓದಿದ ತಕ್ಷಣವೇ ತಕ್ಕಡಿಯಲ್ಲಿಟ್ಟು ಬೆಲೆಗಟ್ಟುವುದು ನಮ್ಮ ಜಾಯಮಾನವಲ್ಲ. ಓದುತ್ತ, ಆಸ್ವಾದಿಸುತ್ತ, ಅನುಭವದಿಂದ ಒರೆಗೆ ಹಚ್ಚುತ್ತ ನಮ್ಮದಾಗಿಸಿಕೊಳ್ಳುವುದು ಭಾರತೀಯರ ಪದ್ಧತಿ ಎಂದು ಹೇಳಿದರು. ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ಗೌಡ ಮಾತನಾಡಿ, ಸಮಾಜದಲ್ಲಿ ಕೋಮುವಾದ, ಭ್ರಷ್ಟಾಚಾರದಂತಹ ಸಮಸ್ಯೆಗಳು ಅಧಿಕವಾಗಿದ್ದು, ಸಮಾಜ ಬದಲಾವಣೆಗೊಳ್ಳಬೇಕಾದರೆ ಕುವೆಂಪು ಅವರಂತಹ ಶ್ರೇಷ್ಠ ಸಾಹಿತಿಗಳ ಬರಹಗಳು ಅತ್ಯಾವಶ್ಯಕ. ಯುವ ಜನಾಂಗಕ್ಕೆ ಶ್ರೇಷ್ಠ ಬರಹಗಳ ಪರಿಚಯ ಮಾಡಿಸುವುದು ಬಹುಮುಖ್ಯವಾಗಿದೆ ಎಂದರು. ಕಾಲೇಜಿನ ದಿನಗಳಿಂದಲೇ ವಿದ್ಯಾರ್ಥಿಗಳು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಾದರೆ, ಎಲ್ಲಾ ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮದ ಜೊತೆಗೆ ಕನ್ನಡ ಸಾಹಿತ್ಯದ ಬರಹಗಳನ್ನು ಪರಿಚಯಿಸುತ್ತಾ, ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಅತ್ಯಗತ್ಯ ಎಂದರು. ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಟಿ. ವಿಜಯಲಕ್ಷಿö್ಮ ಮುರಳೀಧರ್ ಮಾತನಾಡಿ, ಕನ್ನಡ ಪರಂಪರೆಯನ್ನು ಆಧುನಿಕ ಕಾಲದ ಬೆಳಕಿನಲ್ಲಿ ಮರು ಚಿಂತನೆ ಒಡ್ಡಿದವರು ಕುವೆಂಪು. ಅವರನ್ನು ರಾಷ್ಟçಕವಿ, ಮಹಾಕವಿ, ವಿಶ್ವಮಾನವ ಎಂದು ಕರೆಯುವುದರ ಜತೆಗೆ “ಕನ್ನಡ ವಿವೇಕ ಪರಂಪರೆಯ ಆಧುನಿಕ ಚಿಂತಕ” ಎಂದು ಕರೆಯುವುದು ಅರ್ಥಪೂರ್ಣವಾದದ್ದು ಎಂದು ಭಾವಿಸಿದ್ದೇನೆ. ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಕಳೆದ ದಿನಗಳ ಪ್ರಭಾವದಿಂದ ಪರಂಪರೆಯನ್ನು ಪ್ರಶ್ನಿಸುತ್ತಾ ಪರಿಷ್ಕರಿಸುತ್ತಾ, ಹೊಸ ಅರ್ಥನೀಡುವ ಮಹತ್ವದ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ ಎಂದು ತಿಳಿಸಿದರು. ವಿಚಾರ ಸಂಕಿರಣದ ಉದ್ಘಾಟನೆಗೂ ಮುನ್ನ ಬೆಳ್ಳಿ ರಥದಲ್ಲಿ ಶ್ರೀ ರಾಮಯಣ ದರ್ಶನಂ’ ಮಹಾಕಾವ್ಯ ಇರುವ ಅಕ್ಷರ ನಡಿಗೆ'ಗೆ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ಗೌಡ ಹಾಗೂ ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಧಿಕೃತ ಚಾಲನೆಯನ್ನು ನೀಡಿದರು. ಈ ಮೆರವಣಿಗೆಯಲ್ಲಿ ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ, ಕಂಸಾಳೆ ಹಾಗೂ ಪಟ್ಟಕುಣಿದಂತಹ ಜಾನಪದ ಕಲೆಗಳನ್ನು ಪ್ರದರ್ಶಿಸುತ್ತಾ, ಕಾಲೇಜಿನಿಂದ ಮೆರವಣಿಗೆ ಹೊರಟು ಜಯಲಕ್ಷಿö್ಮÃಪುರಂನ ಪ್ರಮುಖ ರಸ್ತೆಗಳಲ್ಲಿ ಸಾಗಿ ವಿಚಾರದ ಸಂಕಿರಣದ ಸ್ಥಳವಾದ ಸ್ವಾಮಿ ವಿವೇಕಾನಂದ ಸಭಾಂಗಣಕ್ಕೆ ತಲುಪಿತು. ಕಾರ್ಯಕ್ರಮದಲ್ಲಿ ಬಾ ಕುವೆಂಪು ದರ್ಶನಕೆ’ ಕೃತಿಯ ಮೂರನೇ ಮುದ್ರಣವನ್ನು ಜನಾರ್ಪಣೆಗೊಳಿಸಲಾಯಿತು. ಇದರ ಜೊತೆಗೆ ಕಾಲೇಜಿನ `ಮಂದಾರ ವಾರ್ಷಿಕ ಸಂಚಿಕೆ’ಯನ್ನು ಲೋಕಾರ್ಪಣೆಗೊಳಿಸಿದರು.
ವೇದಿಕೆಯಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ, ಕಾರ್ಯನಿರ್ವಹಣಾಧಿಕಾರಿ ಡಾ. ಎಸ್.ಆರ್. ರಮೇಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದೇಸೀ ಕಲಾವಿದರಾದ ಪ್ರಕಾಶ್ ಚಿಕ್ಕಪಾಳ್ಯ ಅವರನ್ನು ಗೌರವಿಸಲಾಯಿತು.