Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಲ್ಜೆöಮರ್ಸ್ ಕುರಿತು ಜಾಗೃತಿ ಮೂಡಿಸಿದ ನಮ್ಮ ನಡಿಗೆ ಆರೋಗ್ಯದೆಡೆಗೆ’

ಮೈಸೂರು; ವಿಶ್ವ ಅಲ್ಜೆ0ಮರ್ಸ್ ತಿಂಗಳ ಅಂಗವಾಗಿ ಅಲ್ಜೆöÊಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ , ಮೈಸೂರು ಶಾಖೆ, ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿ, ಹಾಗೂ ವಿವೇಕ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಚಾಮುಂಡಿ ಬೆಟ್ಟದ ಪಾದದಿಂದ ಬೆಟ್ಟದ ಮೇಲ್ಭಾಗದವರೆಗೆ ನಮ್ಮ ನಡಿಗೆ ಆರೋಗ್ಯದೆಡೆಗೆ’ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಟ್ರೆಕ್ಕಿಂಗ್ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಮಾತನಾಡಿ, ಅಲ್ಜೆöÊಮರ್ಸ್ ಸೇರಿದಂತೆ ಸ್ಮರಣಶಕ್ತಿ ಸಂಬAಧಿತ ಕಾಯಿಲೆಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು. ಈ ಕಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಸ್ಮರಣಶಕ್ತಿ ಕುಂಠಿತವಾಗುವುದನ್ನು ಸಾಮಾನ್ಯ ವಯೋಸಹಜ ಸಮಸ್ಯೆ ಎಂದು ಭಾವಿಸಿ, ನಿರ್ಲಕ್ಷಿಸುವುದರಿಂದ ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಜೆöÊಮರ್ಸ್ ಕಾಯಿಲೆಗೆ ಸಂಪೂರ್ಣ ಗುಣಪಡಿಸುವ ಚಿಕಿತ್ಸೆ ಸೀಮಿತವಾಗಿರುವುದರಿಂದ ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಗುರುತಿಸುವುದು ಮುಖ್ಯ ಎಂದು ಹೇಳಿದರು.
ಎಆರ್‌ಡಿಎಸ್‌ಐ ಮೈಸೂರು ಶಾಖೆಯ ಅಧ್ಯಕ್ಷ ಹಾಗೂ ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ. ಹನುಮಂತಾಚಾರ್ ಜೋಶಿ ಮಾತನಾಡಿ, ಅಲ್ಜೆöÊಮರ್ಸ್ ಕಾಯಿಲೆಯ ನಿರ್ವಹಣೆಯಲ್ಲಿ ಜಾಗೃತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಪ್ರಸ್ತುತ ಕೆಲವು ಔಷಧಿಗಳು ಲಭ್ಯವಿದ್ದರೂ ಅವುಗಳ ಪರಿಣಾಮ ಸೀಮಿತವಾಗಿದ್ದು, ಕೆಲವು ಔಷಧಿಗಳಿಗೆ ಅಡ್ಡಪರಿಣಾಮಗಳೂ ಇವೆ. ಹೀಗಾಗಿ ಔಷಧ ಚಿಕಿತ್ಸೆಯ ಜೊತೆಗೆ ಕಾಯಿಲೆಯ ಲಕ್ಷಣಗಳು, ಆರಂಭಿಕ ಪತ್ತೆ ಹಾಗೂ ರೋಗಿಗಳ ಆರೈಕೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ವಾಕಥಾನ್, ಟ್ರೆಕ್ಕಿಂಗ್, ಜಾಗೃತಿ ಸಭೆಗಳು ಹಾಗೂ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಜನರಲ್ಲಿ ಅಲ್ಜೆöÊಮರ್ಸ್ ಕಾಯಿಲೆಯ ಕುರಿತು ನಿರಂತರ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಹಾಗೂ ವಿಶೇಷವಾಗಿ ಸ್ಮರಣಶಕ್ತಿ ತಪಾಸಣಾ ಪರೀಕ್ಷೆಗಳನ್ನು ನಡೆಸಲಾಯಿತು. ಇದರ ಮೂಲಕ ತಮ್ಮಲ್ಲಿ ಸ್ಮರಣಶಕ್ತಿಗೆ ಸಂಬAಧಿಸಿದ ಸಮಸ್ಯೆಗಳಿವೆಯೇ ಎಂಬುದನ್ನು ಪ್ರಾಥಮಿಕವಾಗಿ ತಿಳಿದುಕೊಂಡು ಅಗತ್ಯವಿದ್ದಲ್ಲಿ ವೈದ್ಯಕೀಯ ಸಲಹೆ ಪಡೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಮೈಸೂರು ಕಾರ್ಯದರ್ಶಿ ಸಮೀರ್ ಕಶ್ಯಪ್, ಶಾರದಾ ವಿಲಾಸ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್ನ ಗೌರವ ಕಾರ್ಯದರ್ಶಿ ಆರ್. ದಿನೇಶ್, ವಿವೇಕ ಆಸ್ಪತ್ರೆಯ ಪ್ರತಿನಿಧಿಗಳು, ಇನ್ನರ್ ವೀಲ್ ಅಧ್ಯಕ್ಷ ಚೈತ್ರ ಅರುಣ್ , ಅರುಣ್ ಕುಮಾರ್ ವಿವೇಕ ಚೇತನ್ಯ ಫೌಂಡೇಶನ್ ಮೈಸೂರು ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.