Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಾಮುಂಡಿಬೆಟ್ಟಕ್ಕೆ ಡಿಸೆಂಬರ್ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ನೀರಿನ ಸೌಲಭ್ಯ


*ಬೆಟ್ಟದ ತಪ್ಪಲಿನ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತೆ ಕಾಪಾಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ
ಮೈಸೂರು: ಗ್ರಾಮಾಂತರ ಪ್ರದೇಶಗಳಲ್ಲಿ ಬತ್ತಿಹೋಗಿರುವ ಬೋರ್‌ವೆಲ್‌ಗಳನ್ನು ರೀಡ್ರಿಲ್ ಮಾಡಿಸುವುದು, ಹೊಸದಾಗಿ ಪಾಯಿಂಟ್ ಗುರುತಿಸಿ ಬೋರ್‌ವೆಲ್‌ಗಳನ್ನು ಕೊರೆಸಲು ಮುಂದಾಗಬೇಕು. ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಾಕೀತು ಮಾಡಿದರು. ನಗರದ ಶಾರದಾದೇವಿನಗರದಲ್ಲಿರುವ ನಗರಪಾಲಿಕೆ ವಲಯ ಕಚೇರಿ ಮೂರರಲ್ಲಿ ಶುಕ್ರವಾರ ಕ್ಷೇತ್ರದ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು,ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ,ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಹಳ್ಳಿಗಳಲ್ಲಿಬೋರ್‌ವೆಲ್‌ಗಳು ಬತ್ತಿ ಹೋಗಲು ಶುರುವಾಗಿದೆ. ಕೆಲವು ಕಡೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನಗರದ ಹೊರವಲಯದ ಹಳ್ಳಿಗೆ ಕಾವೇರಿ,ಕಬಿನಿ ನದಿಯಿಂದ ಕೊಡುತ್ತಿರುವ ನೀರಿನ ಜತೆಗೆ, ಬೋರ್‌ವೆಲ್‌ಗಳನ್ನು ಕೊರೆಸಿ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಿದರು. ಚಾಮುಂಡಿಬೆಟ್ಟದ ತಪ್ಪಲಿನ ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿರುವುದನ್ನು ತಡೆಯಬೇಕು. ರಸ್ತೆಗಳಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಕಸ ಹಾಕದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಚಾಮುಂಡಿಬೆಟ್ಟದಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆ ಕುರಿತು ಗಂಭೀರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು, ದಸರಾ ಮುನ್ನವೇ ಕುಡಿಯುವ ನೀರು,ಸ್ವಚ್ಛತೆ ಬಗ್ಗೆ ಗಮನಿಸಬೇಕು. ಸಿಎಂ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು. ಪಿಡಿಒ ರುಕ್ಮಾಂಗದ ಮಾತನಾಡಿ,ಚಾಮುಂಡಿಬೆಟ್ಟಕ್ಕೆ ಮೂರುದಿನ,ಐದು ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ನಗರಪಾಲಿಕೆಯಿಂದ ಕೊಡುತ್ತಿರುವ 1.50 ಲಕ್ಷ ಲೀಟರ್‌ನಲ್ಲಿ ಭಕ್ತರು,ದಾಸೋಹ,2500 ನಿವಾಸಿಗಳಿಗೆ ಹಂಚಿಕೆ ಮಾಡಬೇಕಿದೆ. ನಮಗೆ ಕೊಡುವ ನೀರಿನ ಪ್ರಮಾಣ ಜಾಸ್ತಿ ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಈ ವೇಳೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಾರ್ಯಪಾಲಕ ಅಭಿಯಂತರ ಇಕ್ಬಾಲ್ ಮೊಹಮ್ಮದ್ ಆಸೀಫ್ ಮಾತನಾಡಿ,ಹೊಸದಾಗಿ ಪೈಪ್‌ಲೈನ್ ಕಾಮಗಾರಿಗೆ 8ಕೋಟಿ ರೂ.ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು,ಡಿಸೆಂಬರ್ ಅಂತ್ಯಕ್ಕೆ ಮುಗಿಸಲಾಗುವುದು. ಮೊದಲು ಟೆಂಡರ್ ಕರೆದಿದ್ದಾಗ ಪೈಪ್‌ಲೈನ್ ಅಳವಡಿಸಲು ಆಕ್ಷೇಪಣೆಯಾಗಿತ್ತು.ಈಗ ಬೇರೆ ಪಾಯಿಂಟ್ ಮೂಲಕ ಕಾಮಗಾರಿ ನಡೆಯಲಿದೆ ಎಂದರು. ಇದನ್ನು ಆಲಿಸಿದ ಡಿಸಿ, ಡಿಸೆಂಬರ್ ತಿಂಗಳಲ್ಲಿ ಮುಗಿಸುತ್ತೇವೆಂದು ಹೇಳಿ ನಿಧಾನ ಮಾಡಬಾರದು. ನಿಗದಿತ ಸಮಯದಲ್ಲಿ ಮುಗಿಸಬೇಕು ಎಂದು ಸೂಚಿಸಿದರು.
ನಗರಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಮಾತನಾಡಿ, ಈಗಾಗಲೇ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದೇನೆ. ಎಲ್ಲೆಲ್ಲಿ ಕಸ ಸುರಿಯಲಾಗುತ್ತಿದೆ ಎನ್ನುವ ಪ್ರದೇಶಗಳಲ್ಲಿ ಸ್ವಚ್ಛತೆ ಮಾಡಿ,ನಂತರ ಜಂಟಿಯಾಗಿ ತಡೆಯುವ ಪ್ರಯತ್ನ ಮಾಡಲಾಗುವುದು. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಬಂಡೀಪಾಳ್ಯದಿAದ ರಸ್ತೆಗೆ ತಂದು ಸುರಿಯದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಜಿ.ಲಕ್ಷಿ÷್ಮÃಕಾಂತ್ ರೆಡ್ಡಿ,ತಾಪಂ ಇಒ ಕೃಷ್ಣ, ಎಂಡಿಎ ಆಯುಕ್ತ ಬಿ.ಆರ್.ಮಹೇಶ್, ಅಧೀಕ್ಷಕ ಅಭಿಯಂತರ ಕೆ.ಜೆ.ಸಿಂಧು, ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್,ಮೋಹನ್ ಮತ್ತಿತರರು ಹಾಜರಿದ್ದರು.