Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾದಲ್ಲಿ ಚಲನಚಿತ್ರೋತ್ಸವ ರದ್ದುಪಡಿಸುವುದನ್ನು ವಿರೋಧಿಸಿ ಪ್ರತಿಭಟನೆ


ಮೈಸೂರು ; ಈ ಬಾರಿ ನಡೆಯಲಿರುವ ನಾಡ ಹಬ್ಬ ಮೈಸೂರು ದಸರಾದಲ್ಲಿ ಚಲನಚಿತ್ರೋತ್ಸವವನ್ನು ರದ್ದು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಜಿಲ್ಲಾಧಿಕಾರಿಗಳ ಕಛೇರಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ನಾನಾ ಘೋಷಣೆಗಳನ್ನು ಕೂಗಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಬಾರಿ ಮೈಸೂರು ದಸರಾವನ್ನು ಬಹಳ ಅದ್ದೂರಿಯಾಗಿ ಹಾಗೂ ವಿನೂತನವಾಗಿ ಮಾಡುತ್ತೇವೆ ಎಂದು ಹೇಳಿ ಈಗ ದಸರಾ ಚಲನಚಿತ್ರೋತ್ಸವವನ್ನು ರದ್ದು ಮಾಡಲು ಹೊರಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಹಾಗೂ ಇದು ಸರ್ಕಾರದ ಏಕಪಕ್ಷೀಯ ನಿರ್ಧಾರವಾಗಿದ್ದು, ಕನ್ನಡ ಚಿತ್ರರಂಗ, ಸ್ಥಳೀಯ ಕಲಾವಿದರು ಹಾಗೂ ಚಲನಚಿತ್ರ ಪ್ರೇಮಿಗಳಿಗೆ ಎಸಗಿರುವ ಘೋರ ಅನ್ಯಾಯವಾಗಿದೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದರು.
ಹಲವಾರು ವರ್ಷಗಳಿಂದ ಈ ಚಲನಚಿತ್ರೋತ್ಸವವು ಮೈಸೂರು ದಸರೆಯ ಅವಿಭಾಜ್ಯ ಸಾಂಸ್ಕöÈತಿಕ ಅಂಗವಾಗಿ, ಅರ್ಥಪೂರ್ಣ ಸಂದೇಶಗಳನ್ನು ಸಮಾಜಕ್ಕೆ ನೀಡುವ ಹಲವಾರು ಕನ್ನಡ ಸಿನಿಮಾಗಳನ್ನು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಪ್ರದೇಶಿಸುತ್ತಾ ಬಂದಿದೆ.
ಚಲನ ಚಿತ್ರೋತ್ಸವದಿಂದ ನಷ್ಟ ಉಂಟಾಗುತ್ತದೆ, ಎನ್ನುವುದಕ್ಕೆ ಇದೇನು ವ್ಯಾಪಾರವಲ್ಲ. ಕಂಬಳದಿAದ ಏನಾದರೂ ಲಾಭವಿದೆಯೇ.? ಕನ್ನಡ ಸಂಸ್ಕöÈತಿಯನ್ನು ಯಾರಾದರೂ ವ್ಯಾಪಾರ ಮಾಡುತ್ತಾರೆಯೇ?. ಚಿತ್ತೋತ್ಸವ ಯಶಸ್ವಿಗೊಳಿಸಲು ನಮ್ಮ ದೇಶದ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡುವುದು ಮುಖ್ಯ. ಚಿತ್ರರಂಗದ ಹಿರಿಯರು ಹಾಗೂ ಸಿನಿಮಾ ಗೆ ಸಂಬAಧಪಟ್ಟವರನ್ನು, ಯಾರನ್ನೂ ಸಂಪರ್ಕಿಸದೆ, ಇಂತಹ ಪ್ರತಿಷ್ಠಿತ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು, ಕರ್ನಾಟಕ ಚಲನಚಿತ್ರ ಪರಂಪರೆಯ ಬಗ್ಗೆ ಸರ್ಕಾರಕ್ಕಿರುವ ಅಸಡ್ಡೆಯನ್ನು ತೋರುತ್ತದೆ. ಒಂದು ಕಡೆ ಮುಖ್ಯಮಂತ್ರಿಗಳು ಈ ಬಾರಿ ದಸರಾ ಜಂಬೂ ಸವಾರಿಯಲ್ಲಿ ಕನ್ನಡ ಚಲನಚಿತ್ರರಂಗದ ತಾರೆಯರು ಆಗಮಿಸುತ್ತಾರೆ ಎಂದು ಹೇಳಿ, ಈ ಕಡೆ ದಸರಾ ಚಲನಚಿತ್ರವನ್ನು ರದ್ದು ಮಾಡಲು ಹೊರಟಿರುವುದು ಹಾಸ್ಯಸ್ಪದ ಎಂದು ಹೇಳಿದರು.
ಸರ್ಕಾರ ಕೋಟ್ಯಂತರ ರೂ ವ್ಯಯಿಸಿ ಚಿತ್ರ ನಗರಿಯನ್ನು ಮೈಸೂರಿನಲ್ಲಿ ಸ್ಥಾಪಿಸಲು ಹೊರಟಿರುವ ಈ ಸಂದರ್ಭದಲ್ಲಿ ಚಲನಚಿತ್ರೋತ್ಸವವನ್ನು ರದ್ದು ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ಈ ಕೂಡಲೇ ಮುಖ್ಯಮಂತ್ರಿಗಳು ಎಂದಿನAತೆ, ಈ ಬಾರಿಯೂ ದಸರಾ ಚಲನಚಿತ್ರೋತ್ಸವ ವನ್ನು ನಡೆಸಬೇಕು, ಇಲ್ಲದಿದ್ದರೆ ದಸರಾ ಉದ್ಘಾಟನೆಯ ದಿನವೇ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ , ಪ್ರಭುಶಂಕರ್ ಎಂ ಬಿ, ಸಿಂದುವಳ್ಳಿ ಶಿವಕುಮಾರ್, ಗಿರೀಶ್ ಹೆಚ್, ಶಿವಲಿಂಗಯ್ಯ, ನೇಹಾ, ಮಧುವನ ಚಂದ್ರು, ಮಲ್ಲೇಶ್, ಸೋಮೇಗೌಡ, ಸುಜಾತಾ, ಕುಮಾರ್ ಗೌಡ, ವರಕೂಡು ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ , ಡಾ. ಶಾಂತರಾಜೇಅರಸ್, ರಾಧಾಕೃಷ್ಣ, ಹೊನ್ನೇಗೌಡ, ಪ್ರದೀಪ್, ತ್ಯಾಗರಾಜ್, ನಾಗರಾಜ್, ದರ್ಶನ್ ಗೌಡ, ಗಣೇಶ್ ಪ್ರಸಾದ್, ಹನುಮಂತೇಗೌಡ, ಆನಂದ್ ಗೌಡ ಬಸವರಾಜು, ಚಂದ್ರಶೇಖರ್, ಅರಸು, ದೇವೇಗೌಡ, ರಂಗಪ್ಪ, ನಾಗೇಶ್, ನಾರಾಯಣ್, ರವೀಶ್, ವಿಷ್ಣು ಸೇರಿದಂತೆ ಇನ್ನಿತರರು ಹಾಜರಿದ್ದರು