
ಮೈಸೂರು: ಬ್ರಾಹ್ಮಣ ವಿವಿಧ ಸಂಘಟನೆಗಳು ಮೈಸೂರು, ಮಂಗಳಸೂತ್ರ ಫೌಂಡೇಶನ್,ಸಪ್ತಪದಿ ಫೌಂಡೇಶನ್ ಟ್ರಸ್ಟ್, ಹಾಗೂ ಶ್ರೀರಾಮ ಮಂದಿರ ಸಹಕಾರದೊಂದಿಗೆ ರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶವನ್ನು ಸೆ. 19 ಹಾಗೂ 20 ರಂದು ಭಾನುವಾರ ಎರಡು ದಿನಗಳು ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಶ್ರೀನಿವಾಸ್.ಎಸ್ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಕೃಷ್ಣಮೂರ್ತಿಪುರಂ ನ್ಯೂ ಕಾಂತರಾಜ ರಸ್ತೆ ಇಲ್ಲಿರುವ ಶ್ರೀರಾಮ ಮಂದಿರದಲ್ಲಿ ಬೆಳಗ್ಗೆ 9 ರಿಂದ ಸಂಜೆ 5:ರವರೆಗೆ ಸಮಾವೇಶ ಹಾಗೂ ಕಲ್ಯಾಣ ಪ್ರಾಪ್ತಿಗಾಗಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿದೆ.
ಆಸಕ್ತ ವಧು-ವರರು 1ಪೋಸ್ಟ್ ಕಾರ್ಡ್ ಸೈಜ್ ಫೋಟೋ, ಬಯೋಡೇಟಾ, ಜಾತಕದೊಂದಿಗೆ ಭಾಗವಹಿಸಬಹುದು ಹೆಚ್ಚಿನ ಮಾಹಿತಿಗಾಗಿ 8088843300/9449425536 ಸಂಚಾಲಕರಾದ ಶ್ರೀನಿವಾಸ್ ಭಾರದ್ವಾಜ್ ಸಂಪರ್ಕಿಸಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಸಮಾಜಸೇವಕ ಡಾ. ರಘುರಾಮ್ ವಾಜಪೇಯಿ, ಮಾಧವರಾವ್, ಶ್ರೀನಿವಾಸನ್ ಗುರೂಜಿ, ವೇಣುಗೋಪಾಲ್, ರಾಘವೇಂದ್ರ ಪ್ರಸಾದ್, ಬ್ರಾಹ್ಮಣ ಸಂಘಗಳ ಸಂಚಾಲಕ ಶ್ರೀನಿವಾಸ್ ಎಸ್ ಭಾರದ್ವಾಜ್ ಉಪಸ್ಥಿತರಿದ್ದರು.