
ಮೈಸೂರು; ಎರಡು ಬೈಕ್ಗಳ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಒಬ್ಬ ಸಾವಿಗೀಡಾಗಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಅತ್ತಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಅತ್ತಹಳ್ಳಿ ಗ್ರಾಮದ ನಿವಾಸಿ ಉಮೇಶ್ ಮೃತಪಟ್ಟ ದುರ್ದೈವಿ.
ವೀರೇಶ್ ಎಂಬುವವರಿಗೆ ಗಂಭೀರ ಗಾಯಗಾಯಗೊಂಡಿದ್ದು, ಅವರನ್ನು ಬನ್ನೂರಿಗೆ ಚಿಕಿತ್ಸೆಗೆ ಕರೆತಂದಾಗ
ಇಲ್ಲಿ ಚಿಕಿತ್ಸೆ ಸಾಧ್ಯವಿಲ್ಲ, ಮೈಸೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರ ಸೂಚಿಸಿದರು. ಆದರೆ ಸಕಾಲಕ್ಕೆ ಆಂಬುಲೆನ್ಸ್ ಇಲ್ಲದೆ ಒಂದು ಗಂಟೆಕಾಲ ಕಾಯ್ದ ಕುಟುಂಬಸ್ಥರು, ಬನ್ನೂರು ಆಸ್ಪತ್ರೆಯಲ್ಲಿ ಪರದಾಡಿದರು. ಬಳಿಕ ಖಾಸಗಿ ವಾಹನದಲ್ಲಿ ಮೈಸೂರಿನ ಆಸ್ಪತ್ರೆಗೆ P್ಪರೆತಂದು ದಾಖಲಿಸಿದ್ದಾರೆ. ಘಟನೆ ಸಂಬAಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.