
ಮೈಸೂರು :ಅಂತೂ ಇಂತೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೀವನದ ಕನಸೊಂದು ನನಸಾಗಿದೆ. ತಮ್ಮ ತವರು ಜಿಲ್ಲಾ ಕೇಂದ್ರವಾದ ಮೈಸೂರಿನಲ್ಲಿ ಸ್ವಂತದೊAದು ಮನೆಯನ್ನು ಕಟ್ಟಿಸಿ, ವಾಸಿಸಬೇಕೆಂಬ ಅವರ ಆಸೆ ಇದೀಗ ಈಡೇರಿದೆ. ಹೌದು ಗಣೇಶ ಚತುರ್ಥಿಯ ದಿನದಂದೇ ವಿಘ್ನ ನಿವಾರಕ ವಿನಾಯಕನಿಗೆ ಅಗ್ರಪೂಜೆ ಸಲ್ಲಿಸಿ, ಮಾಜಿ ಸಿಎಂ ಸಿದ್ದರಾಮಯ್ಯನವರ ಕನಸಿನ ಮನೆಯ ಗೃಹ ಪ್ರವೇಶದ ಕೆಲಸ ಶಾಸ್ತೊçÃಕ್ತವಾಗಿ ನಡೆದಿದೆ. ಮೈಸೂರಿನ ಕುವೆಂಪು ನಗರದಲ್ಲಿ ನಿರ್ಮಿಸಿರುವ ಈ ನೂತನ ನಿವಾಸಕ್ಕೆ ಸರಳವಾಗಿ ಗೃಹಪ್ರವೇಶವನ್ನು ತಮ್ಮ ಕುಟುಂಬದೊAದಿಗೆ ಸಿದ್ದರಾಮಯ್ಯನವರು ಮಾಡಿದ್ದಾರೆ. ಆದರೆ ಈ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಯಾವುದೇ
ರಾಜಕೀಯ ನಾಯಕರು ಮತ್ತು ಸಾರ್ವಜನಿಕರಿಗೆ ಆಹ್ವಾನ ನೀಡದೆ, ಕುಟುಂಬಕ್ಕೆ ಮಾತ್ರ ಸೀಮಿತವಾಗಿ ಗೃಹ ಪ್ರವೇಶ ಮಾಡಿಕೊಂಡಿದ್ದಾರೆ.
ಅತ್ಯಂತ ಸರಳ ಮತ್ತು ಖಾಸಗಿಯಾಗಿ ಈ ಪೂಜಾ ಕೈಂಕರ್ಯಗಳು ನೆರವೇರಿವೆ. ಆಮೂಲಕ, ತಮ್ಮ ಪತ್ನಿ ಪಾರ್ವತಿಯವರ ಬಹುದಿನದ ತವರಿನಲ್ಲಿ ಸ್ವಂತ ಮನೆಯ ಕನಸನ್ನು ಸಿದ್ದರಾಮಯ್ಯ ನನಸಾಗಿಸಿದ್ದಾರೆ. ಪುತ್ರ ಮತ್ತು ಸಚಿವ ಡಾ. ಯತೀಂದ್ರ ಸೇರಿ, ಕುಟುಂಬದವರಿಗೆ ಮತ್ತು ಅತ್ಯಂತ ಆಪ್ತರಿಗೆ ಮಾತ್ರ ಈ ಕಾರ್ಯಕ್ರಮಕ್ಕೆ ಕರೆಯಲಾಗಿತ್ತು.
ಸೆ. 13 ಭಾನುವಾರ ರಾತ್ರಿಯಿಂದಲೇ, ಸಿದ್ದರಾಮಯ್ಯನವರ ನೂತನ ಮನೆಯಲ್ಲಿ ಗಣಪತಿ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.. ಅತ್ಯಂತ ಸಾಂಪ್ರದಾಯಿಕವಾಗಿ ಈ ಗೃಹ ಪ್ರವೇಶದ ಕಾರ್ಯಗಳು ನಡೆದಿವೆ. ಸೋಮವಾರ ಮುಂಜಾನೆ ಮಾಜಿ ಸಿಎಂ ಮತ್ತು ಅವರ ಪತ್ನಿ ಪಾರ್ವತಿ ಅವರ ನೇತೃತ್ವದಲ್ಲಿ ಪೂರ್ಣಾಹುತಿ ಮತ್ತು ಗೃಹಪ್ರವೇಶದ ವಿಧಿಗಳು ಮುಕ್ತಾಯಗೊಂಡವು.
ಮೂರು ಅಂತಸ್ತಿನ ಬೃಹತ್ ಬಂಗಲೆ;
ಮೈಸೂರಿನ ಕುವೆಂಪು ನಗರದ ಪ್ರಮುಖ ರಸ್ತೆಯಲ್ಲಿನ 120 ್ಠ 80 ಚದರಡಿ ವಿಸ್ತೀರ್ಣದ ಸೈಟಿನಲ್ಲಿ, ಮೂರು ಅಂತಸ್ತಿನ ಬೃಹತ್ ಬಂಗಲೆಯನ್ನು ನಿರ್ಮಿಸಲಾಗಿದೆ. ಖಾಸಗಿತನ ಕಾಯ್ದುಕೊಳ್ಳಲು, ಗೃಹ ಪ್ರವೇಶದ ವೇಳೆ, ಮನೆಯ ಸುತ್ತಲೂ ಪರದೆ ಹಾಕಿ ಮುಚ್ಚಲಾಗಿತ್ತು. ಧಾರ್ಮಿಕ ಆಚರಣೆಗೆ ಮಾತ್ರ ಆದ್ಯತೆ ನೀಡಲಾಗಿದ್ದ ಈ ಕಾರ್ಯಕ್ರಮದ ವೇಳೆ, ಮನೆಯ ಹೊರಭಾಗದ ಸ್ವಾಗತ ಕಮಾನು ಅತ್ಯಂತ ಆಕರ್ಷಣೀಯವಾಗಿತ್ತು. ಗಣೇಶನ ಆಕರ್ಷಕ ಚಿತ್ತಾರವನ್ನು ಕಮಾನಿನ ಮೇಲೆ ಹಾಕಲಾಗಿತ್ತು. ತೆಂಗಿನಗರಿ ಮತ್ತು ಕಬ್ಬನ್ನು ಬಳಸಿ ಅಲಂಕಾರವನ್ನು ಮಾಡಲಾಗಿತ್ತು.
ಸಾಕಷ್ಟು ವರ್ಷಗಳಿಂದ ಸ್ವತಃ ಸಿದ್ದರಾಮಯ್ಯನವರೇ ಉಸ್ತುವಾರಿ ವಹಿಸಿ ತಮ್ಮ ಕನಸಿನ ಮನೆಯನ್ನು ಕಟ್ಟಿಸಿದ್ದರು. ಮೈಸೂರಿಗೆ ಬಂದಾಗಲೆಲ್ಲಾ, ಮನೆಯ ಕೆಲಸಕಾರ್ಯಗಳನ್ನೆಲ್ಲಾ ವೀಕ್ಷಿಸಿ ಬರುತ್ತಿದ್ದರು. ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಅವರ ಪರಮಾಪ್ತ ಮರಿಸ್ವಾಮಿಯವರ ನಿವಾಸದಲ್ಲೇ ಇಷ್ಟು ವರ್ಷ ಸಿದ್ದರಾಮಯ್ಯ ವಾಸ್ತವ್ಯವನ್ನು ಹೂಡುತ್ತಿದ್ದರು. ನನ್ನ ಸ್ನೇಹಿತ ಮರಿಸ್ವಾಮಿಯ ಹೃದಯವಂತಿಕೆ ನನಗೆ ಮತ್ತು ನನ್ನ ಮಗನಿಗೆ ಆಶ್ರಯವನ್ನು ನೀಡಿದೆ ಎಂದು ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದರು.
ಒಸಿ ಪಡೆಯದ ಹಿನ್ನಲೆಯಲ್ಲಿ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ
ಸಿದ್ದರಾಮಯ್ಯನವರ ಈ ಮನೆಯ ನಿರ್ಮಾಣದ ವೇಳೆ, ಸಾಕಷ್ಟು ವಿವಾದಗಳು ಎದುರಾಗಿದ್ದವು. ಮುಡಾ ಹಗರಣ, ರಾಷ್ಟç ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇನ್ನು, ಒಸಿ (ಔಛಿಛಿuಠಿಚಿಣioಟಿ ಅeಡಿಣiಜಿiಛಿಚಿಣe) ಪಡೆಯದ ಕಾರಣ, ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ. ಬಳಿಕ ಕೆಲಸಗಳು ಪೂರ್ಣಗೊಂಡಿದ್ದವು. ಅತ್ಯಂತ ಸರಳವಾಗಿ ಗೃಹ ಪ್ರವೇಶ ಕೆಲಸ ನಡೆಯಲಿದೆ ಖುದ್ದು ಸಿದ್ದರಾಮಯ್ಯ ಹೇಳಿದ್ದರು. ಅದರಂತೆಯೇ, ಹೆಚ್ಚಿನ ಜನರನ್ನು ಆಹ್ವಾನಿಸದೇ, ಶಾಸ್ತೊçÃಕ್ತವಾಗಿ ಸಿದ್ದರಾಮಯ್ಯ, ಮನೆ ಪ್ರವೇಶದ ಕೆಲಸವನ್ನು ಗಣೇಶ ಹಬ್ಬದ ದಿನದಂದು ನೆರವೇರಿಸಿದ್ದಾರೆ.