Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಭತ್ತದ ಬೆಳೆಯಲ್ಲಿ ಆರಿಸಿ ನೀರುಬಿಡುವ ಪದ್ಧತಿ ಹಾಗೂ ಕಾರ್ಬನ್‌ಕ್ರೆಡಿಟ್ ಯೋಜನೆ ಕಾರ್ಯಗಾರ

ಮೈಸೂರು; ಕೃಷಿ ತಂತ್ರಜ್ಞರ ಸಂಸ್ಥೆ, ನ್ಯೂರೋಜನ್ ಹಾಗೂ ಅಗ್ರಿಕ್ಯಾಪ್ಚರ್ ಸಂಸ್ಥೆಗಳ ಸಹಯೋಗದಲ್ಲಿ ಒಂದು ದಿನದ ಭತ್ತದ ಬೇಸಾಯದಲ್ಲಿ ಆರಿಸಿ ನೀರು ಬಿಡುವ ಪದ್ಧತಿ ಹಾಗೂ ಕಾರ್ಬಕ್ರೆಡಿಟ್‌ಯೋಜನೆ ಕಾರ್ಯಗಾರವನ್ನು ಗುರುವಾರ ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಗಾರದ ಅಧ್ಯಕ್ಷತೆಯನ್ನುವಹಿಸಿದ್ದ ಕೆವಿಕೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ಭಾರತವು ಪರಿಸರಕ್ಕೆ ಮೀಥೇನ್ ಅನಿಲವನ್ನು ಹೊರಸೂಸುವ ಮೂರನೆಯದೇಶವಾಗಿದೆ. ಭತ್ತದ ಬೆಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀಥೆನ್ ಹೊರಸೂಸುತ್ತಿದೆ. ಆದಾರಣಂಟಣeಡಿಟಿಚಿಣe Weಣಣiಟಿg ಚಿಟಿಜ ಆಡಿಥಿiಟಿg (ಂWಆ) ಪದ್ದತಿಯಲ್ಲಿ ಭತ್ತದ ಬೇಸಾಯ ಮಾಡುವುದರಿಂದ ನೀರಿನ ಬಳಕೆ ಹಾಗೂ ಪರಿಸರಕ್ಕೆ ಹಾನಿ ಎರಡು ಕಡಿಮೆಯಾಗುತ್ತದೆ ಎಂದು ತಿಳಿಸಿದರು. ರೈತರಿಗೆ ತಮ್ಮ ಜಮೀನುಗಳಿಗೆ ಸೂಕ್ಷö್ಮ ಪೋಷಕಾಂಶಗಳಾದ ಟ್ರೆöÊಕೋರ್ಡಮಾ, ಸೂಡೋಮೊನಾಸ್, ಅಜಟೋಬ್ಯಾಕ್ಟರ್, ಮೆಟರೈಜಿಯಂ, ನೀಮ್‌ಕೇಕ್ ಹಾಗು ಎರೆಹುಳು ಗೊಬ್ಬರವನ್ನು ಹಾಕಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಗೆ ಮಾಡಿಕೊಳ್ಳಲು ಸಲಹೆ ನೀಡಿದರು. ಏಕಬೆಳೆ ಪದ್ಧತಿಯಿಂದ ಭತ್ತದಲ್ಲಿ ಇಳವರಿ ಕುಂಠಿತವಾಗಿದೆ, ಆದಕಾರಣ ಉತ್ತಮ ತಳಿಗಳ ಆಯ್ಕೆಅಥವಾ ಪರ್ಯಾಯ ಬೆಳೆಯನ್ನು ಬೆಳೆಯುವುದು ಸೂಕ್ತ ಎಂದು ತಿಳಿಸಿದರು.

ದಾವಣಗೆರೆಯಅಗ್ರಿಕ್ಯಾಪ್ಚರ್ ಸಂಸ್ಥೆಯ ಸಹ ಸಂಸ್ಥಾಪಕ ನಾಗನಗೌಡ ಮಲ್ಕಾಜಿ ಮಾತನಾಡಿ, ಭಾರತದಲ್ಲಿ ಶೇ. 55-70ರಷ್ಟು ಅಕ್ಕಿ ಪ್ರದಾನಆಹಾರವಾಗಿದೆ. ಸುಮಾರು 43-45 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. 1 ಕೆಜಿ ಅಕ್ಕೆ ಬೆಳೆಯಲು 3000-5000 ಲೀನೀರು ಬೇಕಾಗುತ್ತದೆ. ದೇಶದಒಟ್ಟು ನೀರಾವರಿಯ 45% ಭತ್ತದ ಬೆಳೆ ಬೆಳೆಯಲು ಮಾತ್ರ ಸಾಧ್ಯಎಂದು ತಿಳಿಸಿದರು.ಒಡಿಶಾರಾಜ್ಯದಕಟಕ್‌ನಲ್ಲಿರುವ Iಟಿಣeಡಿಟಿಚಿಣioಟಿಚಿಟ ಖiಛಿe ಖeseಚಿಡಿಛಿh Iಟಿsಣiಣuಣe (IಖಖI)ಸಂಸ್ಥೆ ಅಭಿವೃದ್ಧಿಪಡಿಸಿದ ನೀರು ಉಳಿಸುವ ತಂತ್ರಜ್ಞಾನ ದಿಂದ ಉತ್ಪಾದನೆ ಕಡಿಮೆಯಾಗದೆ, ನೀರಾವರಿ ನೀರಿನ ಬಳಕೆ ಕಡಿಮೆ ಂWಆ ಪದ್ಧತಿಯಲ್ಲಿ, ಗದ್ದೆಯಲ್ಲಿ ನಿಂತಿದ್ದ ನೀರು ಬತ್ತಿಹೋದ ಕೆಲವು ದಿನಗಳ ನಂತರ ನೀರಾವರಿ ಕೊಡುವುದು. ಇದರಿಂದಾಗಿ, ಗದ್ದೆಯು ಸರದಿಯಂತೆ ನೀರು ತುಂಬಿದ ಮತ್ತು ನೀರಿಲ್ಲದ ಸ್ಥಿತಿಗಳಿಗೆ ಒಳಪಡುತ್ತದೆ. ನೀರುಣಿಸುವಿಕೆಗಳ ನಡುವೆ ಮಣ್ಣು ಜಲಾವೃತವಾಗದೆಇರುವ ದಿನಗಳ ಸಂಖ್ಯೆಯು ಮಣ್ಣಿನ ವಿಧ, ಹವಾಮಾನ ಮತ್ತು ಬೆಳೆಯ ಬೆಳವಣಿಗೆಯ ಹಂತದAತಹ ಅಂಶಗಳನ್ನು ಅವಲಂಬಿಸಿ, 4 ರಿಂದ 8 ದಿನಗಳಿಗಿಂತ ಹೆಚ್ಚು ಅವಧಿಯವರೆಗೆ ಬದಲಾಗಬಹುದು. ಭತ್ತದ ಗದ್ದೆಗಳಲ್ಲಿ ಆರಿಸಿ ನೀರು ಬಿಡುವ ಪದ್ಧತಿ – ಮೀಥೇನ್‌ಉತ್ಪಾದನೆ ಮಾಡುವ ಬ್ಯಾಕ್ಟೀರಿಯಾಗಳ ಚಟುವಟಿಕೆಯನ್ನುಕಡಿಮೆ ಮಾಡುತ್ತದೆ, ಆ ಮೂಲಕ ಮೀಥೇನ್ ಹೊರಸೂಸುವಿಕೆಯನ್ನು ತಗ್ಗಿಸುತ್ತದೆ ಎಂದು ತಿಳಿಸಿದರು.
ಕೃಷಿತಂತ್ರಜ್ಞರು ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ಷಣ್ಮುಖಸ್ವಾಮಿ ಮಾತನಾಡಿ, ಈ ಕಾರ್ಯಗಾರದಲ್ಲಿ ಮಾಹಿತಿ ಪಡೆದ ರೈತರು ತಮ್ಮ ಹಳ್ಳಿ ಇನ್ನುಳಿದ ರೈತರಿಗೆ ಮಾಹಿತಿ ನೀಡಿ, ಭತ್ತದಲ್ಲಿಂWಆ ಪದ್ಧತಿಯನ್ನು ಅಳವಡಿಸಿಕೊಳ್ಳಲು ತಿಳಿಸಿದರು.
ದಾವಣಗೆರೆಯ ನ್ಯೂರೋಜನ್ ಪ್ರೆöÊ.ಲಿ.,ನ ನಿರ್ದೇಶಕ ಬಿ.ಪಿ. ಗಂಗಾಧರಸ್ವಾಮಿ ಮಾತನಾಡಿ, ಓಡಿಶಾ ಮತ್ತು ಕರ್ನಾಟಕ ರಾಜ್ಯದಲ್ಲಿ ಂWಆ ಪದ್ದತಿಯನ್ನು ಪರಿಚಯಿಸಲಾಗಿದೆ. ರೈತರು ಈ ಪದ್ಧತಿಯನ್ನು ಉಪಯೋಗಿಸಿಕೊಂಡು, ನೀರಿನ ಬಳಕೆ ಕಡಿಮೆ ಮಾಡಿಕೊಳ್ಳಲು ತಿಳಿಸಿದರು. ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳಿಗೂ ಈ ಪದ್ಧತಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯದ ನಾಷಿನಲ್ ಫರ್ಟಿಲೈಜರ್ ಲಿಮಿಟೆಡ್‌ನ ಮುಖ್ಯಸ್ಥ ರೇವಣಸಿದ್ಧಪ್ಪ ಕೇಂದ್ರ ಸರ್ಕಾರದಿಂದ ರೈತರಿಗೆ ದೊರಕುವ ವಿವಿಧ ಯೋಜನೆಗಳನ್ನು ವಿವರಿಸಿ, ಸದರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ಕೆ.ಆರ್. ರವೀಂದ್ರ, ನ್ಯೂರಾಜೆನ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ನಾಗರಾಜು, ಶಾಮರಾಜು ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ರೈತರು / ರೈತ ಮಹಿಳೆಯರು ಭಾಗಹಿಸಿದ್ದರು.