Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗ್ರಂಥಾಲಯಗಳು ಜ್ಞಾನದ ಶಕ್ತಿ ಕೇಂದ್ರಗಳು: ಬಿ. ಪ್ರಕಾಶ್


ಮೈಸೂರು; ಗ್ರಂಥಾಲಯಗಳು ಜ್ಞಾನದ ಶಕ್ತಿ ಕೇಂದ್ರಗಳಾಗಿದ್ದು, ಅಭ್ಯರ್ಥಿಗಳು ತಾಳ್ಮೆ, ಶಿಸ್ತು ಮತ್ತು ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ಸು ಗಳಿಸಬೇಕೆಂದು ಕೆ.ಎಸ್.ಆರ್.ಪಿ 5ನೇ ಪಡೆಯ ಸಹಾಯಕ ಕಮಾಂಡೆAಟ್ ಬಿ. ಪ್ರಕಾಶ್ ಹೇಳಿದರು.
ಶುಕ್ರವಾರ ನಗರ ಕೇಂದ್ರ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೆ. 20 ರಂದು ನಡೆಯಲಿರುವ ಕೆ.ಎಸ್.ಆರ್.ಪಿ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಗಾಗಿ 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅಣುಕು ಪರೀಕ್ಷೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 15 ವರ್ಷಗಳ ಹಿಂದೆ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಪ್ರತಿನಿತ್ಯ ಭೇಟಿ ನೀಡಿ ಅದರ ಸಂಪೂರ್ಣ ಉಪಯೋಗವನ್ನು ಪಡೆದ ರೀತಿಯನ್ನು ವಿಸ್ತಾರವಾಗಿ ವಿವರಿಸಿದರು. ಪ್ರತಿಯೊಬ್ಬ ಉದ್ಯೋಗಾಂಕ್ಷಿಯು ಅದೇ ರೀತಿ ಗ್ರಂಥಾಲಯಗಳನ್ನು ಸದುಪಯೋಗ ಬಳಸಿ ಕೊಳ್ಳಬೇಕೆಂದು, ಪರೀಕ್ಷೆಯನ್ನು ಎದುರಿಸಿದಲ್ಲಿ ಯಶಸ್ಸು ಪಡೆಯುವುದು ನಿಶ್ಚಿತ ಎಂದು ಹೇಳಿದರು.
ಯಾರೇ ಉದ್ಯೋಗಾಕಾಂಕ್ಷಿ ಯಾವುದೇ ಒಂದು ಪರೀಕ್ಷೆಯನ್ನು ಗುರಿಯಾಗಿ ಇಟ್ಟುಕೊಂಡು ತಯಾರಿ ಮಾಡಿಕೊಳ್ಳುವುದರ ಬದಲು ವಿವಿಧ ಪರೀಕ್ಷೆಗಳನ್ನು ಎದುರಿಸುವ ಅಭ್ಯಾಸವನ್ನು ಬೆಳಸಿಕೊಳ್ಳತ್ತಾ, ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ಸಮಯದಲ್ಲಿ ಇತರೇ ಆಕರ್ಷಣೆಗೆ ಒಳಗಾಗದೆ ಜೀವನದ ಗುರಿಯನ್ನು ತಲುಪುವುದಕ್ಕಾಗಿ ಆ ದಿಟ್ಟಿನಲ್ಲಿ ಮಗ್ನರಾಗುವುದು ಯಶಸ್ಸಿಗೆ ಸಹಕಾರಿ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆಸೆಯಂತೆ ನಾವು ಜನಪರ ಸೇವೆಯನ್ನು ಮಾಡಬೇಕೆಂದು ಎಂದರು. ಗಾಂಧೀಜಿಯವರು ಹೇಳಿದಂತೆ ಸಮಾಜದ ಕಟ್ಟ ಕಡೆಯ ಮನುಷ್ಯನ ಆಸೆ ಈಡೇರಿಕೆ ಹಾಗೂ ಆತನ ಮುಖದಲ್ಲಿ ನಗು ಮೂಡುವಂತೆ ಸೇವೆಸಲ್ಲಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲೂ ಎದೆ ಗುಂದಬಾರದು. ಯಾವುದೇ ಅಂಜಿಕೆಯನ್ನು ಹೊಂದಿರಬಾರದು. ಯಶಸ್ವಿ ಆಗಲಿ, ಆಗದಿರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದನ್ನು ಬಿಡಬಾರದು ಎಂದರು.
ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್ .ಬಿ ಮಾತನಾಡಿ, ಸಿವಿಲ್ ಸಿಎಆರ್, ಡಿಎಆರ್ ಹಾಗೂ ಕೆ.ಎಸ್.ಆರ್.ಪಿ ಪರೀಕ್ಷೆಗಳಿಗೆ ಸಂಬAಧಿಸಿದAತೆ ಇಲ್ಲಿಯತನಕ ಒಟ್ಟು 10 ಅಣುಕು ಪರೀಕ್ಷೆಗಳನ್ನು ನಡೆಸಲಾಗಿದೆ. ಪರೀಕ್ಷೆಗಳ ಫಲಿತಾಂಶದಲ್ಲಿ ಹತ್ತಾರು ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ. ಮುಂದಿನ ದೈಹಿಕ ಪರೀಕ್ಷೆಗೂ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ರಮೇಶ್ ನರಸಯ್ಯ, ಹಾಗೂ ಪೀಪಲ್ಸ್ ಪಾರ್ಕ್ ಗ್ರಂಥಾಲಯದ ಸಹ ಗ್ರಂಥಪಾಲಕಿ ಸೌಮ್ಯ .ಎಸ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.