Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹೆಗ್ಗಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 7.22 ಲಕ್ಷ ಲಾಭ

ನಂಜನಗೂಡು:   ತಾಲೂಕಿನ ಹೆಗ್ಗಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ವರ್ಷ 7 ಲಕ್ಷ 22 ಸಾವಿರ ಲಾಭದಲ್ಲಿ ಮುನ್ನಡೆಯುತ್ತಿದೆ, ರೈತರ ಆರ್ಥಿಕ ಸವಲತ್ತಿಗೆ ಸಹಕಾರ ಸಂಘಗಳು ಸಹಕಾರಿಯಾಗಿದೆ ಆದ್ದರಿಂದ ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿ ಎಂದು ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ರೇವಣ್ಣ ಹೇಳಿದರು.   ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.    ಸಂಘದಿಂದ ರೈತರಿಗೆ ಸುಮಾರು ₹1.2 ಕೋಟಿ…

Read More

ಶಾಸಕ ಟಿ.ಎಸ್.ಶ್ರೀವತ್ಸರಿಂದ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ

ಮೈಸೂರು; ಚಿತ್ರ ನಟ ಡಾ. ವಿಷ್ಣುವರ್ಧನ್ 76ನೇ ಜನ್ಮ ದಿನಾಚರಣೆ ಅಂಗವಾಗಿ, ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಸಾಹಸಸಿಂಹ ವಿಷ್ಣುವರ್ಧನ್ ಉದ್ಯಾನವನದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ರವರು ಸಾಹಸಸಿಂಹ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರುಈ ಸಂದರ್ಭದಲ್ಲಿ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಮಹೇಂದ್ರಸಿAಗ್ ಕಾಳಪ್ಪ, ಪಾರ್ಥಸಾರಥಿ, ಆಟೋ ಮಹೇಶ್, ನವೀನ್, ಹಾಗೂ ಇನ್ನಿತರರು ಹಾಜರಿದ್ದರು

Read More

ಗ್ರಂಥಾಲಯಗಳು ಜ್ಞಾನದ ಶಕ್ತಿ ಕೇಂದ್ರಗಳು: ಬಿ. ಪ್ರಕಾಶ್

ಮೈಸೂರು; ಗ್ರಂಥಾಲಯಗಳು ಜ್ಞಾನದ ಶಕ್ತಿ ಕೇಂದ್ರಗಳಾಗಿದ್ದು, ಅಭ್ಯರ್ಥಿಗಳು ತಾಳ್ಮೆ, ಶಿಸ್ತು ಮತ್ತು ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ಸು ಗಳಿಸಬೇಕೆಂದು ಕೆ.ಎಸ್.ಆರ್.ಪಿ 5ನೇ ಪಡೆಯ ಸಹಾಯಕ ಕಮಾಂಡೆAಟ್ ಬಿ. ಪ್ರಕಾಶ್ ಹೇಳಿದರು.ಶುಕ್ರವಾರ ನಗರ ಕೇಂದ್ರ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೆ. 20 ರಂದು ನಡೆಯಲಿರುವ ಕೆ.ಎಸ್.ಆರ್.ಪಿ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಗಾಗಿ 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅಣುಕು ಪರೀಕ್ಷೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 15 ವರ್ಷಗಳ ಹಿಂದೆ…

Read More

ಎಸ್‌ಐಆರ್: ಚಾಮುಂಡಿಬೆಟ್ಟದಲ್ಲಿ ಸ್ವೀಪ್ ಚಟುವಟಿಕೆಗೆ ಚಾಲನೆ

ಮೈಸೂರು; ತಾಲ್ಲೂಕಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ನೇತೃತ್ವದಲ್ಲಿ ಸ್ವೀಪ್ ಚಟುವಟಿಕೆ ಜರುಗಿತು.ಎಸ್ ಐಆರ್ ಭಾಗವಾಗಿ ನಾಗರಿಕರು ತಮ್ಮ ಮತದಾರರ ಗುರುತಿನ ಚೀಟಿಗೆ ಸಂಬAಧಿಸಿದ ಆಕ್ಷೇಪಣೆ ಹಾಗೂ ತಿದ್ದುಪಡಿ ಮಾಡಿಸಲು ಸೆ.19 ಮತ್ತು 20 ರಂದು ನಡೆಯುವ “ಸಾರ್ವಜನಿಕ ವಿಶೇಷ ಅಭಿಯಾನ” ಸಂಬAಧಿಸಿದ ಭಿತ್ತಿಪತ್ರ ಬಿಡುಗಡೆಗೊಳಿಸಿದ ಅವರು,…

Read More

ಶೈಕ್ಷಣಿಕ ಕ್ಷೇತ್ರಕ್ಕೆ ಜೆಎಸ್‌ಎಸ್ ಸಂಸ್ಥೆಗಳ ಕೊಡುಗೆ ಅನನ್ಯ ; ಸಚಿವ ಎಸ್. ಮಧುಬಂಗಾರಪ್ಪ

ಮೈಸೂರು; ಶೈಕ್ಷಣಿಕ ಕ್ಷೇತ್ರಕ್ಕೆ ಜೆಎಸ್‌ಎಸ್ ಸಂಸ್ಥೆಗಳ ಕೊಡುಗೆಅನನ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧುಬಂಗಾರಪ್ಪ ಹೇಳಿದರು.ಮೈಸೂರಿನ ಹೂಟಗಳ್ಳಿಯಲ್ಲಿ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜು ಹಾಗೂ ಸಭಾಭವನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸರ್ಕಾರವೇ ಎಲ್ಲರಿಗೂ ಶಿಕ್ಷಣವನ್ನು ನೀಡಲು ಸಾಧ್ಯವಾಗುವುದಿಲ್ಲ. ಈ ಕೆಲಸವನ್ನು ವ್ಮಠ ಮಾನ್ಯಗಳು ಮಾಡುತ್ತಾ ಬರುತ್ತಿವೆ.ಜೆಎಸ್‌ಎಸ್ ಸಂಸ್ಥೆ ಕರ್ನಾಟಕವಲ್ಲದೇ, ತಮಿಳುನಾಡು, ನೋಯಿಡಾ, ದೆಹಲಿ, ಜಮ್ಮು ರಾಜ್ಯಗಳಲ್ಲಿ,ಅಲ್ಲದೆ ಮಾರಿಷಸ್, ಅಮೆರಿಕ, ದುಬೈಗಳಲ್ಲೂ ಸಂಸ್ಥೆಗಳನ್ನು ಸ್ಥಾಪಿಸಿ, ವಿಶ್ವದಾದ್ಯಂತ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಸಾಮಾಜಿಕ…

Read More

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಆಶೀರ್ವಾದದ ದೀಪ ಬೆಳಗಿಸಿದ ಬಿಜೆಪಿ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಸೇವಾ ಸಂಕಲ್ಪ’ ಕಾರ್ಯಕ್ರಮದ ಭಾಗವಾಗಿ, ಪ್ರತಿ ಮನೆಯಲ್ಲಿ ಆಶೀರ್ವಾದದ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ ಮೈಸೂರಿನ ರಾಷ್ಟçಕವಿ ಕುವೆಂಪು ಅವರ ಮನೆ ಉದಯರವಿ’ಯಲ್ಲಿ ನಡೆಸಲಾಯಿತು.ಮೈಸೂರು ವಿಭಾಗದ ಬಿಜೆಪಿಯ ಸಹಪ್ರಭಾರಿ ಡಾ. ಈ.ಸಿ. ನಿಂಗರಾಜ್‌ಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 176 ದೀಪಗಳನ್ನು ಬೆಳಗಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶಕ್ಕೆ ಇನ್ನಷ್ಟು ಉತ್ತಮ ನಾಯಕತ್ವ ನೀಡುವ…

Read More

ಚಿತ್ರ ನಟ ಡಾ.ವಿಷ್ಣುವರ್ಧನ್ ಜನ್ಮ ದಿನಾಚರಣೆ

ಮೈಸೂರು: ತಾಲೂಕಿನ ಉದ್ಬೂರು ಗೇಟ್ ಸಮೀಪ ಇರುವ ಡಾ. ವಿಷ್ಣುವರ್ಧನ್ ಸ್ಮಾರಕದಲ್ಲಿ ಚಿತ್ರ ನಟ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಅಭಿಮಾನಿಗಳು ಸಂಭ್ರಮದಿAದ ಆಚರಿಸಿದರು.ಈ ಸಂದರ್ಭದಲ್ಲಿ ಸ್ಮಾರಕಕ್ಕೆ ಆಗಮಿಸಿದ ನೂರಾರು ಅಭಿಮಾನಿಗಳಿಗೆ ಹಿರಿಯ ಚಿತ್ರ ನಟಿ ಭಾರತಿ ವಿಷ್ಣುವರ್ಧನ್ ಅವರು ಅನ್ನದಾನ ಮಾಡುವ ಮೂಲಕ ಜನ್ಮದಿನೋತ್ಸವಕ್ಕೆ ವಿಶೇಷ ಮೆರುಗು ತಂದರು. ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಬೆರೆತು ಶುಭಾಶಯಗಳನ್ನು ಸ್ವೀಕರಿಸಿದ ಅವರು, ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ಸ್ಮರಿಸಿದರು.ಅನ್ನದಾನ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ…

Read More

ಜಯದೇವ ದೇಶದಲ್ಲಿಯೇ ಮಾದರಿ ಆಸ್ಪತ್ರೆ : ಎಂ. ರಾಮಯ್ಯ

ಮೈಸೂರು: ಮೈಸೂರಿನ ಜಯದೇವ ಆಸ್ಪತ್ರೆ ದೇಶದಲ್ಲಿಯೇ ಮಾದರಿ ಆಸ್ಪತ್ರೆಯಾಗಿದ್ದು, ಇದೇ ಮಾದರಿಯಲ್ಲಿ ರಾಜ್ಯದಎಲ್ಲಾ ಸರ್ಕಾರಿ ಆಸ್ಪತ್ರೆಗಳು ನಿರ್ಮಾಣವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮಾಜಿ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ ತಿಳಿಸಿದರು.ಮೈಸೂರುಜಯದೇವಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯರವರು 2013 ರಿಂದ 18 ವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಿದರು. ಆಗ ನಾನು ಸಹ ಆಗಾಗ್ಗೆ ಕಾಮಗಾರಿ ಪರಿಶೀಲಿಸಲು ಬರುತ್ತಿದ್ದೆ. ಸಿದ್ದರಾಮಯ್ಯರವರ ವಿಶೇಷ ಕಾಳಜಿಯಿಂದ ಮೈಸೂರಿನಲ್ಲಿ ಹಲವಾರು ಆಸ್ಪತ್ರೆಗಳು ನಿರ್ಮಾಣವಾಗಿ ಬಡಜನರಿಗೆತುಂಬಾ ಅನುಕೂಲವಾಗಿದೆ ಎಂದರು.ಜಯದೇವ…

Read More