
ಮೈಸೂರು: ಮೈಸೂರಿನ ಜಯದೇವ ಆಸ್ಪತ್ರೆ ದೇಶದಲ್ಲಿಯೇ ಮಾದರಿ ಆಸ್ಪತ್ರೆಯಾಗಿದ್ದು, ಇದೇ ಮಾದರಿಯಲ್ಲಿ ರಾಜ್ಯದಎಲ್ಲಾ ಸರ್ಕಾರಿ ಆಸ್ಪತ್ರೆಗಳು ನಿರ್ಮಾಣವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮಾಜಿ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ ತಿಳಿಸಿದರು.
ಮೈಸೂರುಜಯದೇವಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯರವರು 2013 ರಿಂದ 18 ವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಿದರು. ಆಗ ನಾನು ಸಹ ಆಗಾಗ್ಗೆ ಕಾಮಗಾರಿ ಪರಿಶೀಲಿಸಲು ಬರುತ್ತಿದ್ದೆ. ಸಿದ್ದರಾಮಯ್ಯರವರ ವಿಶೇಷ ಕಾಳಜಿಯಿಂದ ಮೈಸೂರಿನಲ್ಲಿ ಹಲವಾರು ಆಸ್ಪತ್ರೆಗಳು ನಿರ್ಮಾಣವಾಗಿ ಬಡಜನರಿಗೆತುಂಬಾ ಅನುಕೂಲವಾಗಿದೆ ಎಂದರು.
ಜಯದೇವ ಆಸ್ಪತ್ರೆಗೆ ಬಿಪಿಎಲ್‌ಕಾರ್ಡ್ ಮತ್ತು ಯಶಸ್ವಿನಿ ಕಾರ್ಡ್ ತಂದು, ಹಣಕಟ್ಟದೆ ಈ ಭಾಗದ ಜನರು ಉಚಿತಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ. ಸಿ.ಎನ್. ಮಂಜುನಾಥ್‌ರವರು ಈ ಆಸ್ಪತ್ರೆಯನ್ನುಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಡಾ. ಸದಾನಂದ್ ಹಾಗೂ ಸಿಬ್ಬಂದಿಗಳು ತುಂಬಾ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಆಸ್ಪತ್ರೆಯ ಬಗ್ಗೆ ಸಾಧ್ಯವಾದರೆ ಒಳ್ಳೆಯ ಮಾತುಗಳನ್ನಾಡಿ, ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಮುಖ್ಯಸ್ಥರಿಗೆ ತಿಳಿಸಿ ಬಗೆಹರಿಸಿ. ವಿನಾಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಜಯದೇವ ಆಸ್ಪತ್ರೆಯ ಬಗ್ಗೆ ವೀಡಿಯೋ ಮಾಡಿ ಬಿಡಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್, ಹಿರಿಯ ಶುಶ್ರೂಷಕ ಹರೀಶ್‌ಕುಮಾರ್, ಪಿಆರ್‌ಓ ವಾಣಿಮೋಹನ್, ಯೋಗಾನಂದ್, ನಾಗರಾಜ್, ಸಿದ್ದರಾಮು ಹಾಜರಿದ್ದರು.