
ಮೈಸೂರು; ಬಿಜೆಪಿಯವರು ರಣಹದ್ದುಗಳಿದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರಸಿದ್ದರಾಮಯ್ಯನವರು ನೀಡಿರುವ ಹೇಳಿಕೆಯನ್ನು ವರುಣ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 14 ಮುಡಾ ಸೈಟುಗಳನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಕಕ್ಕಿದ್ದಾರೆ. ಅವರ ಪುತ್ರ ಯತೀಂದ್ರ ಭಾರಿ ಡೇಂಜರ್ ವಿಷಪೂರಿತ ಕೊಳಕು ಮಂಡಲ ಹಾವು ಇದ್ದಂತೆ ಎಂದು ತಿರುಗೇಟು ನೀಡಿದ್ದಾರೆ.
ದಲಿತರಿಗೆ ಸಿಗಬೇಕಿದ್ದ ಮುಖ್ಯಮಂತ್ರಿ ಗಾದಿಯನ್ನು ಎರಡು ಬಾರಿ ಧಕ್ಕಿಸಿಕೊಂಡು ಸಿದ್ದರಾಮಯ್ಯನವರು ವಂಚಿಸಿದ್ದಾರೆ. ರಾಜಕೀಯ ಮುತ್ಸದ್ದಿಗಳಾದ ದಿವಂಗತ ರಾಜಶೇಖರ ಮೂರ್ತಿ, ಗುರುಪಾದ ಸ್ವಾಮಿ, ಬೆಂಕಿ ಮಹಾದೇವ, ವಿ.ಶ್ರೀನಿವಾಸ ಪ್ರಸಾದ ರವರು ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಇವರುಗಳ ಬೆನ್ನಿಗೆ ಚೂರಿ ಹಾಕಿ ಸಿದ್ದರಾಮಯ್ಯನವರು ಬೆಳೆದರು. ಈಗ ಮುತ್ಸದ್ದಿ ಶ್ರೇಷ್ಠ ರಾಜಕಾರಣಿ ಎಚ್ ಸಿ ಮಹಾದೇವಪ್ಪ ಅವರ ಬೆನ್ನಿಗೆ ಚೂರಿ ಹಾಕಿ, ತಮ್ಮ ಮಗನನ್ನು ಬೆಳೆಸಲು ಹೊರಟಿದ್ದಾರೆ. ಎಷ್ಟಾದರೂ ಈ ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರ ಬೆನ್ನಿಗೆ ಚೂರಿ ಹಾಕಿ ಜೀರ್ಣಿಸಿಕೊಂಡವರಲ್ಲವೇ. ಇವರು ದಲಿತರು ಮುಸ್ಲಿಮರ ಕಣ್ಣಿಗೆ ಮಣ್ಣೆರಚಿ, ವೋಟ್ ಬ್ಯಾಂಕ್ ಮಾಡಿಕೊಂಡೆ ಅಧಿಕಾರ ಅನುಭವಿಸುತ್ತಾ ಬಂದಿದ್ದಾರೆ ಎಂದಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ಧನಂಜಯ್ ಅವರನ್ನು ಅಮಾನತು ಮಾಡುವುದು ಬಿಡುವುದು ಸರ್ಕಾರ ಹಾಗೂ ಪೊಲೀಸಗ ಇಲಾಖೆಗೆ ಸೇರಿದ್ದು. ಕಳೆದ ಬಾರಿ ಆರ್ ಎಸ್ ಎಸ್ ಪ ಥ ಸಂಚಲನವನ್ನು ಮಸೀದಿ ಕಡೆಯಿಂದ ಕಲ್ಲು ಬೀಳುತ್ತವೆ ಎಂಬ ಕಾರಣ ನೀಡಿ, ಲಿಂಕ್ ರಸ್ತೆಯಲ್ಲಿ ಮೆರವಣಿಗೆ ಸಾಗುವುದನ್ನು ನಿರ್ಬಂಧಿಸಿದಾಗಲೇ ಸರ್ಕಲ್ ಇನ್ಸೆ÷್ಪಕ್ಟರ್ ಧನಂಜಯ್ ದಕ್ಷರಲ್ಲ ಅಸಮರ್ಥರು ಎಂಬುದು ಎಲ್ಲಾ ಜನರಿಗೂ ಅರಿವಾಗಿದೆ. ಜನರ ತೆರಿಗೆ ಹಣದಿಂದ ಸಂಬಳ ಪಡೆದು ಜೀವನ ನಡೆಸುವ ಇಂತಹ ಅಧಿಕಾರಿಗಳು, ಪಾಳೇಗಾರಂತೆ, ಪುಡಿ ರೌಡಿಗಳಂತೆ ವರ್ತಿಸುವುದನ್ನು ಬಿಟ್ಟು, ಜನಸ್ನೇಹಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಇವರು ಕರ್ತವ್ಯಕ್ಕೆ ಸೇರಿದಾಗಿನಿಂದ ಇಲ್ಲಿಯವರೆಗೂ ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ, ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಇವರು ದಲಿತ ಹುಡುಗರ ಮೇಲೆ ಬಾಸುಂಡೆ ಬರುವಂತೆ ಒಡೆದು ಅಮಾನವೀಯತೆ ಮೆರೆದು, ಜಾತಿ ಕಾರಣಕ್ಕಾಗಿ ಅಮಾನತು ಆಗದೆ ಉಳಿದುಕೊಂಡಿದ್ದಾರೆ. ಇವರು ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡಿಲ್ಲ ಎಂದು ಪೋಲಿಸ್ ಇಲಾಖೆಗೆ ದ್ರೋಹ ಬಗೆದಿಲ್ಲ ಎಂದು ತಮ್ಮ ಖಾಕಿಯ ಮೇಲೆ ಸಂವಿಧಾನದ ಮೇಲೆ ಕೈಯಿಟ್ಟು ಆಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.